Tuesday, March 23, 2010

ಪ್ರೀತಿ-ಪ್ರೇಮ-ಪ್ರಣಯ ಇವೆಲ್ಲ ಮನಸ್ಸಿನ ಭಾವನೆಗಳ priority ಅಷ್ಟೇ...

....ಅಂದು ಯಾಕೋ ನನ್ನ ಮನಸ್ಸು ತುಂಬಾ ಖುಷಿಯಾಗಿತ್ತು..!! ಅದಕ್ಕೆ ಸಾಥ್ ಎನ್ನುವಂತೆ ಸುಂದರವಾದ ಶುಭ್ರ ಆಕಾಶ, ಆಗತಾನೇ ಮೂಡಿದ ಸೂರ್ಯನ ಎಳೇಬಿಸಿಲು. ಕೆಂಪು-ಬಿಳಿ ಬಣ್ಣದ KSRTC ಬಸ್ಸಿನಿಂದ ಇಳಿದು ಬಂದೆ. ಹೊಸ ಊರಿನ ಹೊಸ ಅನುಭವಕ್ಕೆ ಎಲ್ಲ ರೀತಿಯಲ್ಲೂ ready ಆಗಿದ್ದೆ. ಬಸ್ ಸ್ಟ್ಯಾಂಡ್ ಹತ್ತಿರದ lodge ಒಂದರಲ್ಲಿ room ಪಡೆದು, ಫ್ರೆಶ್ ಆಗಿ ಹೊರಬಂದೆ. ಘಂಟೆ ಇನ್ನು 6.30, ಸುಮಾರು 4-5 ಬಾರಿ Axe ಬಾಟಲಿಯನ್ನು ತೆಗೆದು spray ಮಾಡಿಕೊಂಡು, ಹತ್ತಿರದ telephone booth'ಗೆ ತೆರೆಳಿದೆ. ಮೊದಲ ಬಾರಿಗೆ ಆ ಊರಿಗೆ ಬಂದಿದ್ದ ನಾನು ಅಲ್ಲಿನ ಭಾಷೆಯನ್ನು ತಿಳಿಯಲು ಸ್ವಲ್ಪ ಕಷ್ಟ ಪಡಬೇಕಾಯಿತು. Telephone booth'ನ receiver 'ನ್ನು ಪಕ್ಕನೆ ಎತ್ತಿಕೊಂಡು ನಂಬರ್ dial ಮಾಡಿ ಉತ್ತರಕ್ಕಾಗಿ ಕಾದು ನಿಂತಿದ್ದೆ... ಅತ್ತ ಕಡೆ'ಇಂದ ಅವಳು phone receive ಮಾಡಿ "Good Morning Avi, ನಂಗೊತ್ತಿತ್ತು ನೀನು ಇಷ್ಟೊತ್ತಿಗೆ ಫೋನ್ ಮಾಡ್ತಿಯ ಅಂತ..ಎಲ್ಲೋ ಇದ್ದೀಯ..? ಈ ಊರಿಗೆ ಇದೆ ಮೊದಲು, ಎಲ್ಲೋ ಹೋಗಿ ತಪ್ಪಿಸ್ಕೋಬೇಡ..ಬಸ್ ಸ್ಟ್ಯಾಂಡ್ ಹತ್ತಿರಾನೆ ಇರು, ನಾನು ಬರ್ತೀನಿ., ಹೌದು ಯಾವ color dress ಹಾಕಿದೀಯ, ನಿನ್ನ ಹೇಗೆ identify ಮಾಡೋದು..??"  ಅವಳನ್ನು ಮೊದಲ ಬಾರಿಗೆ meet  ಮಾಡಲು ಹೋಗಿದ್ದೆ. ಹಾಗೆ 5 - 10 ನಿಮಿಷ ಫೋನಿನಲ್ಲಿ ಮಾತಾಡಿ ನಂತರ ಅವಳಿಗಾಗಿ ಬಸ್ ಸ್ಟ್ಯಾಂಡ್ ಹತ್ತಿರ ಕಾಯುತ್ತಿದ್ದೆ.
ಅವಳ ಜೊತೆ ಸುಮಾರು 2 ವರ್ಷ ಫೋನಿನಲ್ಲಿ ಮಾತನಾಡಿದ ನಾನು ಅವಳನ್ನು ಒಮ್ಮೆ photo 'ನಲ್ಲಿ ನೋಡಿದ್ದೇ ಅಷ್ಟೇ. ಹೇಗಿರುವಳೋ, ನನ್ನ ನೋಡಿ ಅವಳು ಹೇಗೆ react ಮಾಡ್ತಾಳೆ, ಅನ್ನೋ ನೂರಾರು ಯೋಚನೆ..! ದೂರದಲ್ಲಿ ಹಳದಿ ಬಣ್ಣದ ಚೂಡಿದಾರ್ ಧರಿಸಿ, Fair-n-lovely ಮುಖದ ಹುಡುಗಿಯೊಬ್ಬಳು ಯಾರನ್ನೋ ಹುಡುಕುತ್ತಾ ಇರುವಂತೆ ಕಂಡಿತು...! ನಾನು ಅವಳನ್ನು ನೋಡಿದ ಕೂಡಲೇ ಅವಳಿಗೂ ತಿಳಿಯಿತು...!! ಮೊದಲು ಅವಳನ್ನು ಕಂಡ ಮನಸ್ಸು ಖುಷಿ-ಗೊಂದಲ-ಭಯ ಎಲ್ಲವನ್ನು ಬಿಂಬಿಸುತ್ತಿತ್ತು. ನಡುಗುತ್ತ ಕೈ ಕುಲುಕಿದೆ.
ಹತ್ತಿರದ ಹೋಟೆಲ್'ನಲ್ಲಿ ತಿಂಡಿ ತಿಂದು, morning show ಸಿನಿಮಾಕ್ಕೆ ಹೋಗಿ, ನಂತರ ಊರೆಲ್ಲ ತಿರುಗಿ, ಅವಳೊಂದಿಗೆ ಕಳೆದ ಆ ದಿನ ಅವಿಸ್ಮರಣೀಯ..! "ನೀನೆ ಮೊದಲನೇ ಬಾರಿಗೆ ಬಂದೆ ಹೃದಯದ ಊರಿಗೆ, ಇಳಿದೆ ಮನಸಿನ ಬೀದಿಗೆ, ನೀನ್ಯಾರೆ.." ಎಂದು ಕಾಯುತ್ತಿದ್ದ ಮನಸ್ಸಿಗೆ ಸಂಭ್ರಮ. ಮನದ ಮಾತಿಗೆ ಬೇಲಿಯೇ ಇರಲಿಲ್ಲ, ಕಣ್ಣುಗಳು ಅವಳನ್ನಲ್ಲದೆ ಬೇರೆಲ್ಲೂ ನೋಡಲಿಲ್ಲ. ಸಂಜೆ ಅವಳೊಡನೆ ಕೈ ಹಿಡಿದು ತುಸು-ದೂರ ನಡೆದು ಸಾಗಿದೆ. ಮನಸ್ಸು ಅವಳಿಗೆ propose ಮಾಡು ಎಂದು ಹೇಳುತ್ತಿತ್ತು..!! ಹೇಳಲು ಭಯ..ಸ್ವಲ್ಪ ತಡೆದು ಹೊರಡುವಾಗ ಹೇಳುವೆ ಎಂದು ಸುಮ್ಮನಿದ್ದೆ. ಹಾಗೆ-ಹೀಗೆ ಎನ್ನುತ್ತಾ ಸಂಜೆ 6.45 ಆಗಿ ಹೋಯಿತು. ಅವಳು ತನ್ನ ಹಾಸ್ಟೆಲ್'ಗೆ ಹೋಗಿ ಸೇರುವ ಸಮಯ... I love.. ಅಂತ ಹೇಳಬೇಕು ಅನ್ನುವಷ್ಟರಲ್ಲಿ ಅವಳು, "Avi.. ನಾನು ನಿನಗೆ ಒಂದು ವಿಷಯ ಹೇಳಬೇಕು, ಹೇಗೆ ಹೇಳಲಿ ಅಂತ ಗೊತ್ತಿಲ್ಲ, ನನಗೆ ಒಬ್ಬ ಹುಡುಗ ತುಂಬಾ close ಆಗಿದ್ದಾನೆ, ಅವನ ಬಗ್ಗೆ ನಿನಗೆ ಹೇಳಿಲ್ಲ ಅಂತ ಬೇಜಾರು ಮಾಡ್ಕೋಬೇಡ........." ಅದನ್ನು ಕೇಳಿದ ನನ್ನ ಕಿವಿಗೆ ಮುಂದೆ ಅವಳು ಏನು ಮಾತಾಡುತ್ತ ಇದ್ದಾಳೆ ಅಂತ ಕೇಳಿಸಲೇ ಇಲ್ಲ. ಅಲ್ಲಿಂದ ಓಡಿ ಹೋಗಿ, ಸಿಟಿ ಬಸ್ ಹತ್ತಿದೆ, ದೂರದಿಂದ ಅವಳಿಗೊಂದು byee ಹೇಳಿ ಹೊರಟೆ..ಕಣ್ಣಿನಲ್ಲಿ ತುಂಬಿದ ನೀರು ನದಿಯಾಯಿತು. ಅದೇ ಸಮಯಕ್ಕೆ ಸುರಿದ ಮಳೆ'ಯಿಂದ ಯಾರಿಗೂ ನನ್ನ ಕಣ್ಣೀರು ಕಾಣಿಸಲಿಲ್ಲ.ನನ್ನ ಮನಸ್ಸು ಸಿಡಿದು, ನನಗೆ ಏನಾಗಿದೆ ಅಂತ ತಿಳಿಯದಾಯಿತು. ಎಷ್ಟೋ ಯೋಚಿಸಿದೆ, 2 ವರ್ಷ ಅವಳ ಬಗ್ಗೆ ಇರದ ಪ್ರೀತಿ ಇವತ್ತು ಏಕೆ ಬಂದಿತು.?? ಇದು infatuation'ಆ..?? ಪ್ರೀತಿ ಎಂಬ ಮಾಯಾ ಜಾಲದಿಂದ, ನಾನು ಅವಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಸರಿಯೇ..?? ಎಂಥ ದಿನಕ್ಕೆ ಎಂಥ ending..??
ಇಂಥ ಯೋಚನೆಯಲ್ಲೇ ಹಲವು ತಿಂಗಳು ಕಳೆದೆ, ನಂತರ ತಿಳಿಯಿತು, ಅವಳ ಬಗ್ಗೆ ಇದ್ದ ಪ್ರೀತಿ, ತುಂಬಾ ಘಾಡ. ನನ್ನ ಜೀವನದ ಗೆಳತಿ ಅವಳು. ನನ್ನ ಚಡ್ಡಿ-ದೋಸ್ತ್ ಹಾಗೆ.
ಮೇಲಿನ ಚಿತ್ರದಲ್ಲಿ ಇರುವಂತೆ ಮನದಲ್ಲಿ ಹಸಿರಾದ ಚಿಗುರು ಭಾವನೆಗಳು, ಬರಡಾದ ನೋವು, ಎರಡು ಇರುತ್ತದೆ. ಒಂದು ಕ್ಷಣ ತಿಳಿಯದೆ ಬಂದ ಭಾವನೆ ಪ್ರೀತಿಯಲ್ಲ. ಅದು ಒಂದು ಸುಂದರ ಪಯಣ, ಜೀವನ-ಯಾನ.
 ಪ್ರೀತಿ-ಪ್ರೇಮ-ಪ್ರಣಯ ಇವೆಲ್ಲ ಮನಸ್ಸಿನ ಭಾವನೆಗಳ priority ಅಂತ ಅನ್ನಿಸುತ್ತದೆ... ನೀವೇನು ಹೇಳ್ತಿರ..??

1 comment: