Sunday, March 28, 2010

ಸಾಮಾನ್ಯವಾಗಿ ನಡೆಯುವ ಅಸಾಮಾನ್ಯ ತಪ್ಪುಗಳು....

ಇದನ್ನು ನಾನು ಕೆಲ ದಿನಗಳ ಹಿಂದೆ, ದಿನ ಪತ್ರಿಕೆಯಲ್ಲಿ ಓದಿದೆ...!! ತುಂಬಾ ಚನ್ನಾಗಿ ಮೂಡಿ ಬಂದ ಲೇಖನ...!!
ದಿನ ಪತ್ರಿಕೆಯ ಒಂದು ಒಳ ಪುಟದಲ್ಲಿ ಹೀಗೊಂದು ಲೇಖನದ ಶೀರ್ಷಿಕೆ. "ಜನಸಂಘ ಕಟ್ಟುವಲ್ಲಿ ಶಿಕ್ಷಕರ ಪತ್ರ ಮಹತ್ವದ್ದು". ಲೇಖಕರು ಭಾವಿಸಿದ ಹಾಗೆ ನಾನು ಸ್ವಲ್ಪ surprise ಆಗಿದ್ದೆ. ಜನಸಂಘವೆಲ್ಲಿ ಶಿಕ್ಷಕ ವರ್ಗವೆಲ್ಲಿ ಎಂದು. ಜನಸಂಘಕ್ಕು ಶಿಕ್ಷಕರಿಗೂ ಏನು ಸಂಬಂಧ..?? ಶಿಕ್ಷಕರು ಪಕ್ಷ ಕಟ್ಟುವುದೇ..?? ಬಲು ಅಪರೂಪದ ಸಂಗತಿ..!! ಆದರೆ ಈ ಶೀರ್ಷಿಕೆಯನ್ನು ಅರ್ಥ ಮಾಡಿಕೊಳ್ಳಲು ನೀನು ಪೂರ್ತಿ ಲೇಖನವನ್ನು ಓದಬೇಕು. ಅದು ಜನಸಂಘದ ಸಂಸ್ಥಾಪಕರಾದ ಪಂಡಿತ್ ದೀನದಯಾಲ್ ಉಪಾಧ್ಯಾಯ ಅವರ ಜನ್ಮದಿನದ ಸಮಾರಂಭ. ಸಭೆಯಲ್ಲಿ ಭಾಗವಹಿಸಿದ ಎಲ್ಲರು ಉಪಾಧ್ಯಾಯರ ಸಾಧನೆಯನ್ನು ಮುಕ್ತ-ಕಂಠದಿಂದ ಹೊಗಳಿದರು. ಸಮಾರಂಭಕ್ಕೆ ತೆರಳಿದ್ದ ವರದಿಗಾರ ಎಲ್ಲವನ್ನು ಸರಿಯಾಗಿ ವರದಿ ಮಾಡಿದ್ದ, ಆದರೆ ಆದದ್ದು ಒಂದೇ ಒಂದು ಎಡವಟ್ಟು. ಆ ಯಡವಟ್ಟು ಆಗಿದ್ದು ಶೀರ್ಷಿಕೆ ಬರೆಯುವಾಗ. ಕನ್ನಡ'ದಲ್ಲಿ ಉಪಾಧ್ಯಾಯ ಎನ್ನುವುದಕ್ಕೆ ಶಿಕ್ಷಕ ಎಂದು ಕರೆಯುವುದುಂಟು. ಉಪಾಧ್ಯಾಯರ ಬದಲಿಗೆ ಅವನು ಶಿಕ್ಷಕರು ಎಂದು ಬರೆದ.  ವರದಿಗಾರ copy ready ಮಾಡಿ ಕೊಟ್ಟ; ಸಂಪಾದಕ ಅದನ್ನು ಸರಿಯಾಗಿ ಓದಿದನೋ ಇಲ್ಲವೋ, ಅಥವಾ ಉಪಾಧ್ಯಾಯರ ಹೆಸರನ್ನು ಕೇಳಿರಲಿಲ್ಲವೋ ಗೊತ್ತಿಲ್ಲ, ಸಹಿ ಹಾಕಿ printing'ಗೆ ಕಳುಹಿಸಿದ. ಮರುದಿನ ದಿನ ಪತ್ರಿಕೆ ಓದಿದ ಜನರಿಗೆ ಪಂಡಿತ್ ದೀನದಯಾಲ್ ಉಪಾಧ್ಯಾಯರ ಸಾಧನೆಯ ಬಗ್ಗೆ ಏನು ತಿಳಿಯದೆ ಹೋಗಿತ್ತು. ಇದು ಕಚೇರಿಯಲ್ಲಿ ಯಾಂತ್ರಿಕವಾಗಿ ಕುಳಿತು ಸಂಪಾದಕ ಮೈ-ಮರೆತರೆ ನಡೆಯುವ ತಪ್ಪು. ಪತ್ರಿಕೆ print ಆಗುವ ಮುನ್ನ ಕನಿಷ್ಠ ೪-೫ ಜನರನ್ನು ದಾಟಿ ಹೋಗುತ್ತದೆ. ಅವರೆಲ್ಲರೂ ಬುದ್ದಿಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ವಿಷಾದವೆಂದರೆ ಈ ತಪ್ಪುಗಳು ಪತ್ರಿಕೆ print ಆದ ಬಳಿಕ ತಿಳಿಯುತ್ತದೆ.

ಶಿವಮೊಗ್ಗ ಜಿಲ್ಲೆಯ ಊರಿನ ಹೆಸರು 'ನಗರ'. ಸಾಮಾನ್ಯವಾಗಿ ಊರಿಗೆ ಪಟ್ಟಣ, ಬೆಂಗಳೂರಿನಂತಹ ಮಹಾನಗರಗಳಿಗೆ 'ನಗರ' ಎಂದು ಹೇಳುವುದು ವಾಡಿಕೆ. ಪ್ರತಿದಿನ ಈ ಶಿವಮೊಗ್ಗ ಜಿಲ್ಲೆಯ 'ನಗರ'ದ ವರದಿಗಾರನಿಗೆ ಒಂದಲ್ಲ ಒಂದು ರೀತಿಯ ತೆಗಳಿಕೆ. 'ನಗರದಲ್ಲಿ ಭಾರಿ ಮಳೆ, ರಾತ್ರಿಯೆಲ್ಲ ವಿಧ್ಯುತ್ ವ್ಯತ್ಯಯ' ಎಂದು ಬರೆದು ಕಳುಹಿಸಿದ. ಮರುದಿನ print ಆಗಿದ್ದೆ ಬೇರೆ. ಸಂಪಾದಕ 'ನಗರ' ಬದಲಿಗೆ 'ಪಟ್ಟಣ' ಎಂದು ಬದಲಾಯಿಸಿದ. 'ನಗರ'ದ ಜನರು ವರದಿಗಾರನನ್ನು ದೂಶಿಸುತ್ತಿದ್ದರು.  ವರದಿಗಾರು ಪ್ರತಿ ದಿನದ ವರದಿಯೊಂದಿಗೆ ಹೀಗೊಂದು ಪತ್ರ ಬರೆದು ಕೊಡುತ್ತಿದ್ದರು. "ಸಾರ್, ನಮ್ಮೂರಿನ ಹೆಸರನ್ನು ತಪ್ಪಾಗಿ ಬರೆದರೆ, ನನಗೆ ಇಲ್ಲಿ ತಲೆ ಎತ್ತಿ, ಓಡಾಡಲು ಆಗುವುದಿಲ್ಲ, ಕೆಲವರು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ, ಇನ್ನು ಕೆಲವರು ನನಗೆ ಸುದ್ದಿ ಬರೆಯಲು ಬರೋದಿಲ್ಲ ಎಂದು ಹೇಳುತ್ತಿದ್ದಾರೆ. ಪ್ರತಿ ಸಲ ನಮ್ಮೂರಿನ ಹೆಸರು ಪಟ್ಟಣ ಅಂತಲೇ ಪ್ರಕಟವಾಗುತ್ತಿದೆ. ಕಚೇರಿ desk'ನಲ್ಲಿ ಇರುವವರಿಗೆ ಹೇಳಿ 'ನಗರ' ಎಂಬ ಊರಿದೆ ಅಂತ. ಹೀಗೆ 'ಬಾಂಬೆ ಡೈಯಿಂಗ್' ಎಂಬ ಕಂಪನಿ ಹೆಸರು 'ಮುಂಬೈ ಡೈಯಿಂಗ್' ಎಂದು ಬರೆಯಲು ಸಾಧ್ಯವೇ ?

ಇದೊಂದು ತಮಾಷೆಯೋ, ನೈಜ ಘಟನೆಯೋ ಗೊತ್ತಿಲ್ಲ, ರಾಜರ ಕಾಲದಲ್ಲಿನ ಸಂಪದಕನೊಬ್ಬ ಹೀಗೊಂದು ಸುದ್ದಿ ಬರೆಯುತ್ತಿದ್ದ. ರಾಜ ಸೇವಕನ ಕತ್ತೆಯೊಂದು ಸ್ಪರ್ಧೆಯಲ್ಲಿ ಗೆದ್ದುಬಿಟ್ಟಿತು. ಮರುದಿನ ಪತ್ರಿಕೆ "Servant's Ass won the race" ಎಂಬ ಶೀರ್ಷಿಕೆ ನೀಡಿತು. [Ass ಎಂದರೆ ಕತ್ತೆ ಎಂದು ಅರ್ಥ ಹಾಗು ಅಂಡು ಎಂದು ಕೂಡ.] ರಾಜನಿಗೆ ಸುದ್ದಿ'ಇಂದ ಬಹಳ ಬೇಸರವಾಯಿತು.  ರಾಜನು ಸೇವಕನ ಆ ಕತ್ತೆಯನ್ನು ಕರೆಯಿಸಿ ದುರುಗುಟ್ಟಿಕೊಂಡು ನೋಡಿದ. ಮರುದಿನ ಪತ್ರಿಕೆಯಲ್ಲಿ "King stares servant's Ass" ಎಂದಿತ್ತು. ಸುದ್ದಿ ಕೇಳಿ ರಾಜನು ಕುಪಿತನಾಗಿ ಸೇವಕನನ್ನು ಕರೆದು, ಇನ್ನು ಮುಂದೆ ನೀನು ಆ ಕತ್ತೆಯನ್ನು ಇತ್ತುಕೊಲ್ಲಬೇಡ, ಅದನ್ನು ರಾಣಿಗೆ ಕೊಟ್ಟುಬಿಡು ಎಂದ. ಸೇವಕ ಅದನ್ನು ಪಾಲಿಸಿದ. ಮರುದಿನ ಪತ್ರಿಕೆಯ ಸುದ್ದಿ ಹೀಗಿತ್ತು - "Queen has the best ass in the town". ರಾಜನಿಗೆ ಇದು ತುಂಬಾ ಇರುಸು-ಮುರುಸಗಿತ್ತು. ಅವನು ರಾಣಿಗೆ ಆ ಕತ್ತೆಯನ್ನು ಕಾಡಿಗೆ ಅಟ್ಟುವಂತೆ ಹೇಳಿದ. ರಾಣಿಯು ಹಾಗೆಯೇ ಆದೇಶ ನೀಡಿದಳು. ಮರುದಿನದ ಪತ್ರಿಕೆಯ ಶೀರ್ಷಿಕೆ ಹೀಗಿತ್ತು: "Queen announces her ass is free".
ಎಂಥಾ ಪ್ರಮಾದವಲ್ಲವೇ.? ಬರವಣಿಗೆ ಒಂದು ಸೊಗಸಾದ ಕಲೆ, ಅದರಲ್ಲಿ ತಪ್ಪುಗಳು ಆದರೆ ಈ ರೀತಿ ಅಸಾಮಾನ್ಯ ಅರ್ಥಗಳು ಬರುತ್ತವೆ. ಸಾಮಾನ್ಯ'ವಾಗಿ ನಡೆಯುವ ಈ ಅಸಾಮಾನ್ಯ ತಪ್ಪುಗಳು ಒಬ್ಬರಿಗೆ ಆಟ, ಇನ್ನೊಬ್ಬರಿಗೆ ಪ್ರಾಣ ಸಂಕಟ. ಈ ಲೇಖನವನ್ನು ಕಳೆದ ಶನಿವಾರದ ದಿನ ಪತ್ರಿಕೆಯಲ್ಲಿ ಓದಿದೆ. ವಿಶ್ವೇಶ್ವರ್ ಭಟ್'ರ ಈ ಲೇಖನ ತುಂಬಾ ಇಷ್ಟವಾಯಿತು.
ಮೂಲ ಕೃತಿ: ಸುದ್ದಿಮನೆ ಕಥೆಯ ವಿಶ್ವೇಶ್ವರ್ ಭಟ್.

No comments:

Post a Comment