Monday, April 19, 2010

ಏನೇ ಹುಡುಗಿ ನಿನ್ನ ಲೀಲೆ

ಏನೇ ಹುಡುಗಿ ನಿನ್ನ ಲೀಲೆ., ನಾನು ಯಾರೆಂದು ನೆನಪಿಗೆ ಬಂತಾ..?? ನಿನ್ನ ನೆನಪಿನ ಹೊತ್ತಿಗೆಯಲ್ಲಿ ನನ್ನ ಪುಟ ಹರಿದಿರಬಹುದು. ಆದರೆ ನನ್ನ ನೆನಪು ನಿನಗೆ ಕಾಡದೆ ಇರಲಾರದು. ಎಲ್ಲಿಂದ ಬಂದೆ, ಈಗ ಎಲ್ಲಿರುವೆ ನೀನು ?? Jab we Met film'ನ  'Geet', Kuch Kuch Hota Hain'ನ  'Anjali', ಇವರೆಲ್ಲ ನಿನ್ನ ಸ್ವಭಾವದವರೇ...!! For the first time, ಜೀವನ ಅಂದರೆ ಏನು ಅಂತ ನಿನ್ನಿಂದ ಕಲಿತು ಕೊಂಡೆ. ಜೀವನದ ಹಲವು ಸಂಬಂಧಗಳನ್ನು ನಿನ್ನಲ್ಲಿ ಹುಡುಕಿದ್ದೆ. ಪದೇ ಪದೇ ನಿನಗೆ Phone ಮಾಡಿ ಇಲ್ಲ-ಸಲ್ಲದ ವಿಷಯ'ಗಳನ್ನು ಹೇಳಿ ನಿನ್ನ ತಲೆ ತಿಂತಾ ಇದ್ದೆ ಅಲ್ವಾ..?? ನೀನು ಸಾಕು ಬಿಡೋ ಮಾರಾಯ ಅಂದಾಗ ನಾನು ನಿನ್ನಲ್ಲಿ ಒಳ್ಳೆಯ ಸ್ನೇಹಿತೆಯನ್ನು ಕಂಡಿದ್ದೆ. ಮಾತಿನ ನಡುವೆ ಕಾಲು ಕೆರೆದು ಜಗಳಕ್ಕೆ ಬಂದಾಗ ನನ್ನ ತಂಗಿ ಎಂದು ಕಂಡಿದ್ದೆ. ನನ್ನ ಅರಳು ಪ್ರೀತಿಯ ಸ್ಫೂರ್ತಿಯಾಗಿದ್ದೆ ನೀನು. ಒಮ್ಮೆ ಸಂಜೆ ತಡವಾಗಿ ಗೊತ್ತಿಲ್ಲದ ಕಡೆ ಬಸ್ಸಿಗೆ ಕಾಯುತ್ತಿದ್ದೆ ನೀನು, ಕತ್ತಲಿನ ಭಯ ನಿನಗೆ ಇರಲಿಲ್ಲವಾದರೂ ನಾನು ನಿನಗೆ ಬಯ್ದಿದ್ದೆ. I am wondering who are you for me..!!!??!!!
ಆಗಾಗ ದೇವಸ್ಥಾನಕ್ಕೆ ಹೋಗಿ ಹುಡುಗಿಯರಿಗೆ ಲೈನ್ ಹೊಡೆಯುತ್ತಾ, ಮಜಾ ಮಾಡಿಕೊಂಡು ಇದ್ದೆ. ಸುಮ್ಮನೆ ಕೈಮುಗಿದು 'ಎಲ್ಲರಿಗೂ ಒಳ್ಳೇದು ಮಾಡಪ್ಪ ' ಅಂತ ಕೇಳ್ತಾ ಇದ್ದೋನು. ಇಷ್ಟು Easy going ಹುಡುಗ ಆಗಿದ್ದ ನಾನು, ಇತ್ತೀಚೆಗೆ ಯಾಕೋ ನಿನ್ನ ತುಂಬಾ ಹಚ್ಚಿಕೊಂಡು ಬಿಟ್ಟೆ. ಪುಟ್ಟ ಮಗು ಅಮ್ಮನ ಪ್ರೀತಿಸಿದ ಹಾಗೆ ಪ್ರೀತಿಸಿಬಿಟ್ಟೆ ನಿನ್ನ. ಮೊನ್ನೆ ದೇವಸ್ಥಾನಕ್ಕೆ ಹೋಗಿ ದೇವರಿಗೆ "ನಿನ್ನ ಕೊಡು" ಎಂದು ಕೇಳಿಕೊಂಡೆ. ದೇವರಿಗೆ ನನ್ನಿಂದಲೇ ಬೇರೆ ಹುಡುಗಿಯರಿಗೆ ಲೈನ್ ಹೊಡಿಸಬೇಕಿತ್ತು ಅನ್ನಿಸುತ್ತದೆ, ನಿನ್ನನ್ನು ದೂರ ಮಾಡಿದ.
ಪ್ರೀತಿಯಿಂದ ಯಾರೋ ನನ್ನ 'ಪುಟ್ಟ' ಎಂದಾಗ ನನಗೆ ನಿನ್ನ ನೆನಪಾಯಿತು. ಕೆಲಸವಿಲ್ಲದೇ ಊರೆಲ್ಲ ತಿರುಗಾಡಿದೆ, ಕಂಡಲ್ಲೆಲ್ಲ ನಿನ್ನ ಹೆಜ್ಜೆ ಗುರುತು ಹುಡುಕಿದೆ. ಯಾರದೇ ನೆರಳು ಕಂಡರೂ ನೀ ಬಂದೆ ಎಂದು ತಿರುಗಿ ನೋಡುವಷ್ಟು .ನಿನ್ನ ನೆನಪು ಹಸಿಯಾಗಿಯೇ ಇದೆ, ನೀ ಕಟ್ಟಿಟ್ಟ ಕನಸು ಹಸಿರಾಗೇ ಇದೆ. ಆದರೆ ನೀ ಇಲ್ಲವಷ್ಟೆ .ಇದು ಪ್ರೀತಿ ಅಂತ ಅರ್ಥ ಆಗೋಕೆ ಮುಂಚೆ break-up 'ನ  ಅರ್ಥ ಮಾಡಿಸಿಬಿಟ್ಟಿದೆ. ಬಹಳ ವರ್ಷಗಳಿಂದ ಎಂದೂ ಕಂಡಿರದ ಕಣ್ಣೀರು ಕಣ್ಣಲ್ಲಿ ಇಳಿದಿತ್ತು. ಹೊರಗೆ ಜೋರು ಮಳೆ, ನನ್ನ ಕಣ್ಣಲ್ಲಿ ಕಣ್ಣೀರ ಹನಿ. ಆಗ ತಿಳಿಯಿತು ಕಣ್ಣೀರು ಉಪ್ಪು ಕಣೇ..!!!