Friday, July 1, 2011

ಆ ಒಂದು ರಾತ್ರಿ...!! ಅಂತರಂಗದಾ ಮೃದಂಗ..

Engg. ಮುಗಿಸಿ ಕೆಲಸಕ್ಕೆ ಅಂತ ಬೆಂಗಳೂರಿಗೆ ಬಂದ ಬಡಆತ್ಮ ನನ್ನದು. ಸುಮಾರು ೪ ವರ್ಷ ಆಯಿತು ಇಲ್ಲೇ ಕೆಲಸ ಅಂತ ಮಾಡ್ತಾ ಇದೀನಿ. Software, IT ಅಂತ ಬೆಂಗಳೂರಿಗೆ  ಬಂದ ಎಷ್ಟೋ ಜನರ ಕಥೆ ನನ್ನ ಹಾಗೆ ಅಂತ ಅಂದ್ಕೊಂಡಿದೀನಿ. ಅದ್ಯಾಕೋ ಗೊತ್ತಿಲ್ಲ ಇತ್ತೀಚಿಗೆ ಕೆಲಸ ಅಂದ್ರೆ ಸಾಕಪ್ಪ ಅಂತ ಬೇಜಾರಾಗ್ತಿದೆ. ಕಳೆದ ವಾರ ಹೀಗೆ ಒಂದು ದಿನ......

.......ಇವತ್ತೇ ನನ್ನ ಕೊನೆಯ ದಿನ, ಇವತ್ತು ಹೇಳೇ ಬಿಡ್ತೀನಿ, ನಾನು ಇಲ್ಲಿ ಕೆಲಸ ಬಿಟ್ಟು ಬಿಡ್ತೀನಿ. ನಾನಿನ್ನು ಇಲ್ಲಿ ಕೆಲಸ ಮಾಡಲ್ಲ. ಸಾಕಾಗಿ ಹೋಗಿದೆ ಇಲ್ಲಿನ ಕೆಲಸ. Its become too monotonous..!! ಇಂಥ ಯೋಚನೆ ನನ್ನ ತಲೆಯಲ್ಲಿ ಬಂದಿದ್ದು ನನಗೆ ವಿಚಿತ್ರ ಅಂತ ಅನ್ನಿಸಲೇ ಇಲ್ಲ. ಪ್ರತಿದಿನ ನಾನು ಆಫೀಸ್'ಗೆ ಹೊರಟಾಗ ಹೀಗೆ ಅನ್ನಿಸಿತ್ತದೆ. ಎಲ್ಲರೂ ಎದ್ದಾಗ ನಾನು ಮಲಗೋದು, ಎಲ್ಲರು ಊಟ ಮಾಡುವಾಗ ನನ್ನದು ಸ್ನಾನ, ಊಟದ ಟೈಮ್'ನಲ್ಲಿ ಕಾಫಿ, ಕಾಫ್ಫೆ ಕುಡಿಯೋಕು ಟೈಮ್ ಇಲ್ಲದ ಪಾಪಿ...!! ಅಕ್ಕ-ಪಕ್ಕದ ಮನೆ ಹುಡುಗೀರು, ಆಂಟಿ'ಗಳು ಬೆಳೆಗ್ಗೆ ಎದ್ದು ರಂಗೋಲಿ ಹಾಕೋ ಟೈಮ್'ನಲ್ಲಿ ನಾನು ಹ್ಯಾಪ್ ಮೋರೆ ಹಾಕೊಂಡು ಆಫೀಸ್'ಇಂದ ಮನೆಗೆ ಬರ್ತಾ ಇರ್ತೀನಿ...!!  ಮೂರು-ನಾಲ್ಕು ವರ್ಷಗಳಿಂದ ಇದು ಯಾಕೋ ಸಾಕಾಗಿ ಹೋಗಿದೆ.
ಕಳೆದ ಗುರುವಾರ ಊಟ ಮುಗಿಸಿ ಇನ್ನೇನು ಆಫೀಸ್'ಗೆ ಹೋರಾಡಬೇಕು, ಆಗ, ನಾಳೆಯಿಂದ ಆಫೀಸಿಗೆ ಬರೋಲ್ಲ ಅಂತ ಬಾಸ್ ಗೆ ಹೇಳಿಬಿಡ್ಲಾ ಅಂತ ಯೋಚಿಸ್ತಾ ಇದ್ದೆ. ಇದೆ ಯೋಚನೆಯಲ್ಲಿ ಶೂ ಹಾಕಿಕೊಳ್ಳುತ್ತಾ ಇರುವಾಗ, ನನ್ನ ಅಮ್ಮ "ಅವಿ, ಈ ವಾರ ಊರಿಗೆ ಹೋಗ್ಬರೋಣ. ಅಜ್ಜ-ಅಜ್ಜಿ'ನ  ನೋಡಿ ಬರೋಣ. ಯಾಕೋ ಫೋನ್ ಮಾಡ್ದಾಗ ತುಂಬಾ ಬೇಜಾರಲ್ಲಿದ್ದರು., ಹಾಗೆ ಸುಭದ್ರಮ್ಮ'ನ ಕಡೆಯವರು ಒಂದು ಹುಡುಗಿ ಹೇಳಿದರೆ, ಅದನ್ನು ನೋಡಿಕೊಂಡು ಬರೋಣ".

ನನಗೆ ಏನ್ ಹೇಳ್ಲಿ ಅಂತ ಗೊತ್ತಾಗ್ಲಿಲ್ಲ. ವಿಚಿತ್ರವಾಗಿ ಅವಳನ್ನೊಮ್ಮೆ ನೋಡಿ, ಬ್ಯಾಗ್ ತಗೊಂಡು ಆಫೀಸಿಗೆ ಹೊರಟೆ. ಅಮ್ಮನಿಗೆ ಏನನ್ನಿಸ್ತೋ ಏನೋ?
ಆಫೀಸ್ ಕ್ಯಾಬ್'ನಲ್ಲಿ ಎಂದಿನಂತೆ ಮನೋಹರ ರಾಯರು ಕಾಯ್ತಾ ಇದ್ದರು. ನನಗಿಂತ ಸುಮಾರು ದೊಡ್ಡವರು, ಆದರು ಸ್ನೇಹ ಹೇಗೋ ಕುದುರಿತ್ತು.  "How are you young man. You heard about that Rajesh. He was chucked out of his new job and now he is jobless. I spoke to him today and he was ......." ಅವರು ಇನ್ನೂ ಏನೇನೋ ಹೇಳ್ತಾ ಹೋದ್ರು. ನನಗೆ ಅದರ ಬಗ್ಗೆ ಗಮನನೇ ಇರಲಿಲ್ಲ. ನಾಳೆ ನನ್ನ ಬಗ್ಗೇನೂ ಇವರು ಮತ್ತೊಬ್ಬರಿಗೆ ಹೀಗೇ ಹೇಳ್ತಾರೇನೋ ಅಂತ ಯೋಚಿಸ್ತಾ ಇದ್ದೆ.
ಆಫೀಸ್ ಗೇಟ್ ಬಂತು, cigarette ಸೇದುವ ಅವರು ಅಲ್ಲೇ ಇಳಿದು ಕೊಂಡರು. ರಾಯರಿಗೆ ನಮಸ್ತೆ ಹೇಳಿ ನಾನು ಆಫೀಸಿಗೆ ಹೋದೆ. Entrance'ನಲ್ಲಿ security watchman ನಮಸ್ಕಾರ ಮಾಡಿದ. ಇವನು ಇಷ್ಟು ದಿನ ನಮಸ್ಕಾರ ಮಾಡ್ತಿದ್ನಾ? ನೆನಪಿಗೆ ಬರಲಿಲ್ಲ. ಆದ್ರೆ ನಾನು ಅವನಿಗೆ ಮೊದಲ ಬಾರಿಗೆ ತಿರುಗಿ ನಮಸ್ಕಾರ ತಿಳಿಸಿದೆ.  ಇವತ್ತೇ ನನ್ನ ಕೊನೆಯ ದಿನ ಎಂದು ನಾನು decide ಮಾಡಿ ಆಗಿತ್ತು.
ಒಳಗೆ ಹೋದ ಕೂಡಲೇ ಬಾಸ್ ಕರೆದು ಮೀಟಿಂಗ್'ಗೆ ಬಾ ಎಂದರು. ನಿನ್ನ ಜೊತೆ ಸ್ವಲ್ಪ serious discussion ಮಾಡೋದು ಇದೆ ಎಂದರು.
ನನಗೆ ಅನುಮಾನ ಶುರುವಾಯ್ತು. ಇವರಿಗೆ ಹೇಗೆ ಗೊತ್ತಾಯ್ತು ನಾನು ನಾಳೆಯಿಂದ ಬರಲ್ಲ ಅಂತ ? ನಾನು ನಾಳೆ ಇಂದ ಬರಲ್ಲ ಅಂತ ಇವತ್ತು ಈ 'serious discussion' ಆ..?? Meeting, reports, ಅದು-ಇದು ಅಂತ ಸುಮಾರು ಹೊತ್ತಾಯಿತು.
ಹೊತ್ತು ಕಳೆದ ಹಾಗೇ ಎಲ್ರೂ ನನ್ನ ವಿಚಿತ್ರವಾಗಿ ನೋಡ್ತಾ ಇದ್ದಾರೆ ಅನ್ನಿಸ್ತು. ಅಮ್ಮ ಮಾಡಿ ಕೊಟ್ಟ ಟೊಮೇಟೊ ರೈಸ್ ಬಾತ್, ಚಪಾತಿ-ಪಲ್ಯ ತಣ್ಣಗಾಗಿತ್ತು, ಕ್ಯಾಂಟೀನ್'ಗೆ ಹೋಗಿ ಬಿಸಿ ಮಾಡಿಕೊಂಡು ಊಟ ಮಾಡಿದೆ, ಚಪಾತಿ-ಪಲ್ಯ superr ಆಗಿತ್ತು. ಅಮ್ಮನಿಗೆ ನಾಳೆ ದೋಸೆ ಮಾಡು ಅಂತ ನನ್ನ ತಮ್ಮ ಹೇಳಿದ್ದು ನೆನಪಾಯಿತು. ಅಲ್ಲೇ ಪಕ್ಕದಲ್ಲಿದ್ದ 'ಪ್ರಿಯ' burger ತಂದು ಕೊಟ್ಟಳು, ರವಿ ಮನೆ ಕಾಯಿ-ಗೊಜ್ಜು, ಸತೀಶ್'ನ ಮನೆ ಪುಳಿಯೋಗರೆ,..... ಹೌದು ಏನೆಲ್ಲಾ ಮಿಸ್ ಆಗುತ್ತಲ್ಲಾ ನಾಳೆಯಿಂದ. ಅಥವಾ ನಾನು ನಾಳೆಯಿಂದ ಇದನ್ನೆಲ್ಲಾ, ಇವರನ್ನೆಲ್ಲಾ ಮಿಸ್ ಮಾಡ್ಕೊತಿನಾ ? ಯಾಕೋ ಇದ್ದಕ್ಕಿದ್ದಂತೆ ಎದೆ ಹಿಂಡಿದಂಗಾಯ್ತು. ಯಾರಿಗೂ ಹೇಳ್ದೆ ಸೀದಾ ಆಫೀಸಿಂದ ಹೊರಗೆ ಬಂದ್ಬಿಟ್ಟೆ. ಹೊರಗೆ ಬಂದು ಎಡ-ಬಲ ನೋಡಿದೆ, ಎಡಕ್ಕೆ ಕಗ್ಗತ್ತಲು ತುಂಬಿದ ರಿಂಗ್ ರೋಡ್, ಹಾಗೆ ನಡೆದು ಹೋದೆ. ಸ್ವಲ್ಪ ದೂರದಲ್ಲೇ ಪಾರ್ಕ್ ಇತ್ತು. ಅದೇ ಮೊದಲ ಬಾರಿಗೆ ( ನಾಳೆಯಿಂದ ಮತ್ತೆ ಆಗಲ್ಲ ) ಒಳಗೆ ಹೋದೆ. ಯಾರೂ ಇರಲಿಲ್ಲ. ಆ ಹೊತ್ತಲ್ಲಿ ಯಾರಿರ್ತಾರೆ ? ಎಲ್ಲರೂ ಮಲಗಿ ದೆವ್ವಗಳು ಓಡಾಡುವ ಹೊತ್ತು. ಬೆಳೆಗ್ಗೆ ತನಕ ಇಲ್ಲೇ ಉಳಿದುಬಿಡಲಾ ? ಯಾಕೋ ಪಾರ್ಕಿನ ಒಳಗೆ ಕೂರಲಿಕ್ಕೆ ಮನಸೇ ಆಗಲಿಲ್ಲ. ತಿರುಗಿ ಬಂದ್ಬಿಟ್ಟೆ. ಸುಮ್ನೆ ಓಡ್ಲಿಕ್ಕೆ ಶುರು ಮಾಡ್ದೆ. ಹತ್ತು ಮಾರು ಹೋಗ್ತಿದ್ದ ಹಾಗೇ ಏದುಸಿರು ಬಿಡ್ಲಿಕ್ಕೆ ಶುರುವಾಯ್ತು. ವ್ಯಾಯಾಮ ಮಾಡ್ಲಿಲ್ಲ ಅಂದ್ರೆ ಹೀಗೇ ಆಗುತ್ತೆ. ಮೊದಲೇ ನಾನು ಇರೋ ಚಂದ ಹೇಳಬೇಕೇ..!! ನಾಳೆಯಿಂದ ಜಾಗಿಂಗ್ ಹೋಗ್ಬೇಕು. ಇಲ್ಲ, ಇಲ್ಲ. ಸಾಧ್ಯ ಇಲ್ಲ. ಅದು ಹೇಗಾಗುತ್ತೆ? ತಲೆಯಲ್ಲಿ ಏನೋ ವಿಚಿತ್ರ ಯೋಚನೆ.

Wednesday, March 2, 2011

TV ಪುರಾಣ ...!!


ಅದೇನೋ ಕಣ್ರೀ 'ಚಟ' ಅನ್ನೋದು ಬಹಳ ಬೇಗ ಮೈಗೆ ಹತ್ತಿಕೊಂಡು ಬಿಡುತ್ತವೆ...ಅಯ್ಯೋ ಬೇರೆ ಯಾವ ಚಟದ ಬಗ್ಗೆನೂ ಹೇಳ್ತಾ ಇಲ್ಲ ಸ್ವಾಮಿ...ನನಗೆ ಇತ್ತೀಚೆಗೆ TV ನೋಡುವ ಚಟ ಹತ್ತಿಕೊಂಡು ಬಿಟ್ಟಿದೆ. ಮುಂಚೆ ಆದ್ರೆ cable connection ಹಾಕಿಸಿಕೊಂಡು ನಾಲ್ಕೈದು ಚಾನೆಲ್ ನೋಡ್ತಾ ಇದ್ವಿ...ಮುಂಡೇದು ಈಗಂತೂ ಯಾವ ಚಾನೆಲ್'ನಲ್ಲಿ ಏನ್ ಬರ್ತಾ ಇದೆ ಅಂತ ನೋಡೋದ್ರೊಳಗೆ ಒಂದು ಘಂಟೆ ಅಗಿಹೊಗಿರತ್ತೆ.

Channel'ಗಿಂತ ಅದ್ರಲ್ಲಿ ಬರೋ programme ಕಣ್ರೀ ವಿಶೇಷ..!!
ಕನ್ನಡ channel'ನಲ್ಲಿ ETV, Udaya, ಇದೆಲ್ಲ ನನ್ನ ಅಪ್ಪ-ಅಮ್ಮ'ನಿಗೆ ಪ್ರಿಯ. ಇನ್ನು TV9 ಬಗ್ಗೆ ನಿಮಗೆ ಹೇಳೋದೇ ಬೇಡ ಬಿಡಿ. ಪಕ್ಕದ್ ಮನೇಲಿ ನಡೆಯೋ ಸುದ್ದಿ ನಿಮಗೆ ಗೊತ್ತಿರತ್ತೋ ಇಲ್ವೋ, TV9'ನಲ್ಲಿ ಬಂದಿರತ್ತೆ. ಆದ್ರೆ ಈ TV9' ಹಾಗು News9 channel'ನಲ್ಲಿ ಅಲ್ಲಿಂದ-ಇಲ್ಲಿಂದ ತಂದು ಎಲ್ಲದನ್ನು ಬೆರೆಸಿ ಚಿತ್ರಾನ್ನ ಮಾಡಿ ಬಡಿಸೋಕೆ ಇಷ್ಟ ಪಡ್ತಾರೆ. 'ಹೀಗೂ ಉಂಟೆ' ಅಂತ ಹೇಳುವ style ತುಂಬಾ ಫೇಮಸ್ ಆಗಿದೆ, ನೀವು ಹೇಳಿದ್ದು ನಾವು ಕೇಳಿದ್ದು…! ಕಾರ್ಯಕ್ರಮದ 'ಶಿವನೆ ಶಂಬುಲಿಂಗ' ತುಂಬಾನೇ famous ಆಗಿದೆ.

ಸುವರ್ಣ channel ಬಗ್ಗೆ ಗೊತ್ತಾಗಿದ್ದು "ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು" ಶುರುವಾದಾಗಿನಿಂದ. ಅದು hit ಆಗಿದ್ದೇ ತಡ ಇವ್ರು ಅಲ್ಲಿಗೆ ಹೋದ್ರಅವ್ರು ಇಲ್ಲಿಗೆ ಬಂದ್ರು ಅಂತ ಒಂದಾದಮೇಲೆ ಒಂದು ಶುರು ಮಾಡಿ ಸಿಕ್ಕಾಪಟ್ಟೆ ಬೇಜಾರಗೊಯ್ತು.
Zee TV ಕನ್ನಡ ಸರಿಗಮಪ ಕಾರ್ಯಕ್ರಮದಿಂದ ಒಳ್ಳೆ ಹೆಸರು ಮಾಡಿತು. ಕಸ್ತೂರಿ channel ಸ್ವಾಮಿಗಳನ್ನ ಕರೆಯಿಸಿ, ಬೆಳೆಗ್ಗೆ'ಯಿಂದ ಅದನ್ನ ಮಾಡಿ ಒಳ್ಳೆಯದಾಗತ್ತೆ, ಇದನ್ನ ಮಾಡಿದರೆ ಕೆಟ್ತದಾಗತ್ತೆ ಅಂತ ಶುರು ಮಾಡಿ, ಈಗ ಅದೇ trend ಎಲ್ಲ 
channel'ನಲ್ಲೂ ಶುರುವಾಗಿದೆ.
ಇನ್ನು ನಮ್ಮ comedy channel "U2" ಬಗ್ಗೆ ಹೇಳೋದೇ ಬೇಡ ಬಿಡಿ, ಅದ್ರಲ್ಲಿ ಬರೋ anchor ಗಳನ್ನ ನೋಡೋದೇ ಸಿಕ್ಕಾಪಟ್ಟೆ comedy ಆಗಿರತ್ತೆ. Phone ಮಾಡೋರಿಂದ ಸ್ವಲ್ಪ comedy, ಅವ್ರ ಜೊತೆ ಮಾತಾಡೋರಿಂದ over-comedy.

ಹಿಂದಿ channel'ಗಳಲ್ಲಿ ಬಿಚ್ಚಮ್ಮ'ಗಳು ತುಂಬಾ ಇರ್ತಾರೆ. "Emotional Atyachaar" ಅಂತ, ಹುಡುಗ-ಹುಡುಗಿ'ನ ಹಿಂದೆ ಬಿಟ್ಟು ಅದು-ಇದು ಮಾಡಿಸಿ, ಕೊನೆಗೆ ಸಹಜ ಪ್ರೇಮಿಗಳನ್ನು loyalty test fail ಆಗಿದಿರ ಅಂತ ಜಗಳ ಹುಟ್ಟಿಸೋ ಕಾರ್ಯಕ್ರಮ. Colors channel'ನಲ್ಲಿ ಬರ್ತಾ ಇರೋ 'Big Boss' ಅಂತೂ ಅತಿ-ಜನಪ್ರಿಯ. ಈ ಬಾರಿ ಅದ್ಯಾರೋ 'Dolly' ಅಂತೆ.....ಅವಳದು ಬಾಯಿ ಅನ್ನೋದು ಬಚ್ಚಲು ಮನೆ ತಾರಾ ಕಣ್ರೀ..ಆವಕ್ಕ ಮಾತಾಡಿದರೆ channel'ನವರು beep ಮಾಡ್ತಾ ಇರಬೇಕು. ಇಷ್ಟು ಸಾಲದು ಅಂತ 'Big Boss'ಗೆ ನಮ್ಮ Pamela Anderson ಬರ್ತಾ ಇದಾರೆ, ಬಟ್ಟೆ ಹಾಕೋಬೇಕು ಅಂತ Pamela madam'ಗೆ ಅನ್ನಿಸೋದೇ ಇಲ್ಲವೇನೋ. Salman Khan shirt ಬಿಚ್ಚೋಕೆ famous..Pamela'ಅಕ್ಕ...ಬೇಡ ಬಿಡಿ....()
Zoom ಅಂತ ಇದೆ ನೋಡಿ channel- ಏನು Zoom ಮಾಡಿ-ಮಾಡಿ ವಿಷಯ ತೆಗಿತಾರೋ..ಅಬ್ಬಾ..!! ಯಾರಿಗೆ ಯಾರ ಸಂಬಂಧ, ಎಲ್ಲಿ break-up ಆಯಿತು, ಯಾರು ಯಾರನ್ನು ಮದುವೆ ಆಗಿದ್ರು, ಈಗ ಯಾರನ್ನು ಮದುವೆ ಆಗಿದಾರೆ...ಅಬ್ಬಾ, ತಾರೆಯರಿಗೆ ಗೊತ್ತಿಲ್ಲದೇ ಇರೋ ವಿಶಯ ಈ Zoom channel'ನವರಿಗೆ ಗೊತ್ತಿರತ್ತೆ.

ಕನ್ನಡ, ಹಿಂಡಿ, ತೆಲುಗು, ತಮಿಳು, ಯಾವ ಚಾನೆಲ್ ಹಾಕಿದರು, ಬಟ್ಟೆಗೆ ಬರ. 'ಮನಸಾರೆ' ಚಿತ್ರದ ಒಂದು character 'ಬಟ್ಟೆ ಇಲ್ಲ, ಬಟ್ಟೆ ಇಲ್ಲ' ಅಂತ ಕೂಗಾಡುವ ಹಾಗೆ, ಎಲ್ಲ ನಟ-ನಟಿ ಮಣಿಯರು ಬಟ್ಟೆ ಬಿಚ್ಚಿ TV ಮೇಲೆ ಬರಲು ಇಚ್ಛೆ ಪಡುತ್ತಾರೆ. ಹೀಗದ್ಮೇಲೆ ಯಾರಿಗೆ ತಾನೇ TV ನೋಡುವ ಚಟ ಜಾಸ್ತಿ ಆಗಲ್ಲ ಹೇಳಿ. ಸಿನಿಮಾ ನಟ-ನಟಿಯರು ಈಗ ಕಿರು-ತೆರೆಯಲ್ಲಿ ಮಿಂಚುತ್ತಾ ಇದ್ದರೆ. ನಮ್ಮ ಮಲ್ಲಿಕಾ ಶೆರಾವತ್ ಯಾವ ಅವತಾರದಲ್ಲಿ ಬರುತ್ತಾಳೋ ಕಾದು ನೋಡಬೇಕು.
ಇನ್ನು advertise'ಗಳ ಬಗ್ಗೆ ಹೇಳೋದೇ ಬೇಡ ಬಿಡಿ. ಹೊಸದೊಂದು advertisement ನೋಡಿದೆ..ಚಿಲ್ಲರೆ ಇಲ್ಲ ಅಂತ ಒಬ್ಬನಿಗೆ choclate ಕೊಟ್ಟು 'LAVA' mobile ಇದ್ದವನಿಗೆ ಅದೇನೋ ಕೊಟ್ಟರಂತೆ......!!! ಸಧ್ಯಕ್ಕೆ cricket ಜ್ವರ...!! ನಮ್ India  World Cup ಗೆದ್ದು ಬಿಟ್ಟರೆ ಅದೇ ಒಂದು ದೊಡ್ಡ ಸಹಾಸ...!!

ಈ TV ಬಗ್ಗೆ ಹೇಳ್ತಾ ಹೋದರೆ ಮುಗಿಯೋದೇ ಇಲ್ಲ ಬಿಡಿ....ನೀವೇನ್ ಹೇಳ್ತೀರಾ..??