Friday, July 1, 2011

ಆ ಒಂದು ರಾತ್ರಿ...!! ಅಂತರಂಗದಾ ಮೃದಂಗ..

Engg. ಮುಗಿಸಿ ಕೆಲಸಕ್ಕೆ ಅಂತ ಬೆಂಗಳೂರಿಗೆ ಬಂದ ಬಡಆತ್ಮ ನನ್ನದು. ಸುಮಾರು ೪ ವರ್ಷ ಆಯಿತು ಇಲ್ಲೇ ಕೆಲಸ ಅಂತ ಮಾಡ್ತಾ ಇದೀನಿ. Software, IT ಅಂತ ಬೆಂಗಳೂರಿಗೆ  ಬಂದ ಎಷ್ಟೋ ಜನರ ಕಥೆ ನನ್ನ ಹಾಗೆ ಅಂತ ಅಂದ್ಕೊಂಡಿದೀನಿ. ಅದ್ಯಾಕೋ ಗೊತ್ತಿಲ್ಲ ಇತ್ತೀಚಿಗೆ ಕೆಲಸ ಅಂದ್ರೆ ಸಾಕಪ್ಪ ಅಂತ ಬೇಜಾರಾಗ್ತಿದೆ. ಕಳೆದ ವಾರ ಹೀಗೆ ಒಂದು ದಿನ......

.......ಇವತ್ತೇ ನನ್ನ ಕೊನೆಯ ದಿನ, ಇವತ್ತು ಹೇಳೇ ಬಿಡ್ತೀನಿ, ನಾನು ಇಲ್ಲಿ ಕೆಲಸ ಬಿಟ್ಟು ಬಿಡ್ತೀನಿ. ನಾನಿನ್ನು ಇಲ್ಲಿ ಕೆಲಸ ಮಾಡಲ್ಲ. ಸಾಕಾಗಿ ಹೋಗಿದೆ ಇಲ್ಲಿನ ಕೆಲಸ. Its become too monotonous..!! ಇಂಥ ಯೋಚನೆ ನನ್ನ ತಲೆಯಲ್ಲಿ ಬಂದಿದ್ದು ನನಗೆ ವಿಚಿತ್ರ ಅಂತ ಅನ್ನಿಸಲೇ ಇಲ್ಲ. ಪ್ರತಿದಿನ ನಾನು ಆಫೀಸ್'ಗೆ ಹೊರಟಾಗ ಹೀಗೆ ಅನ್ನಿಸಿತ್ತದೆ. ಎಲ್ಲರೂ ಎದ್ದಾಗ ನಾನು ಮಲಗೋದು, ಎಲ್ಲರು ಊಟ ಮಾಡುವಾಗ ನನ್ನದು ಸ್ನಾನ, ಊಟದ ಟೈಮ್'ನಲ್ಲಿ ಕಾಫಿ, ಕಾಫ್ಫೆ ಕುಡಿಯೋಕು ಟೈಮ್ ಇಲ್ಲದ ಪಾಪಿ...!! ಅಕ್ಕ-ಪಕ್ಕದ ಮನೆ ಹುಡುಗೀರು, ಆಂಟಿ'ಗಳು ಬೆಳೆಗ್ಗೆ ಎದ್ದು ರಂಗೋಲಿ ಹಾಕೋ ಟೈಮ್'ನಲ್ಲಿ ನಾನು ಹ್ಯಾಪ್ ಮೋರೆ ಹಾಕೊಂಡು ಆಫೀಸ್'ಇಂದ ಮನೆಗೆ ಬರ್ತಾ ಇರ್ತೀನಿ...!!  ಮೂರು-ನಾಲ್ಕು ವರ್ಷಗಳಿಂದ ಇದು ಯಾಕೋ ಸಾಕಾಗಿ ಹೋಗಿದೆ.
ಕಳೆದ ಗುರುವಾರ ಊಟ ಮುಗಿಸಿ ಇನ್ನೇನು ಆಫೀಸ್'ಗೆ ಹೋರಾಡಬೇಕು, ಆಗ, ನಾಳೆಯಿಂದ ಆಫೀಸಿಗೆ ಬರೋಲ್ಲ ಅಂತ ಬಾಸ್ ಗೆ ಹೇಳಿಬಿಡ್ಲಾ ಅಂತ ಯೋಚಿಸ್ತಾ ಇದ್ದೆ. ಇದೆ ಯೋಚನೆಯಲ್ಲಿ ಶೂ ಹಾಕಿಕೊಳ್ಳುತ್ತಾ ಇರುವಾಗ, ನನ್ನ ಅಮ್ಮ "ಅವಿ, ಈ ವಾರ ಊರಿಗೆ ಹೋಗ್ಬರೋಣ. ಅಜ್ಜ-ಅಜ್ಜಿ'ನ  ನೋಡಿ ಬರೋಣ. ಯಾಕೋ ಫೋನ್ ಮಾಡ್ದಾಗ ತುಂಬಾ ಬೇಜಾರಲ್ಲಿದ್ದರು., ಹಾಗೆ ಸುಭದ್ರಮ್ಮ'ನ ಕಡೆಯವರು ಒಂದು ಹುಡುಗಿ ಹೇಳಿದರೆ, ಅದನ್ನು ನೋಡಿಕೊಂಡು ಬರೋಣ".

ನನಗೆ ಏನ್ ಹೇಳ್ಲಿ ಅಂತ ಗೊತ್ತಾಗ್ಲಿಲ್ಲ. ವಿಚಿತ್ರವಾಗಿ ಅವಳನ್ನೊಮ್ಮೆ ನೋಡಿ, ಬ್ಯಾಗ್ ತಗೊಂಡು ಆಫೀಸಿಗೆ ಹೊರಟೆ. ಅಮ್ಮನಿಗೆ ಏನನ್ನಿಸ್ತೋ ಏನೋ?
ಆಫೀಸ್ ಕ್ಯಾಬ್'ನಲ್ಲಿ ಎಂದಿನಂತೆ ಮನೋಹರ ರಾಯರು ಕಾಯ್ತಾ ಇದ್ದರು. ನನಗಿಂತ ಸುಮಾರು ದೊಡ್ಡವರು, ಆದರು ಸ್ನೇಹ ಹೇಗೋ ಕುದುರಿತ್ತು.  "How are you young man. You heard about that Rajesh. He was chucked out of his new job and now he is jobless. I spoke to him today and he was ......." ಅವರು ಇನ್ನೂ ಏನೇನೋ ಹೇಳ್ತಾ ಹೋದ್ರು. ನನಗೆ ಅದರ ಬಗ್ಗೆ ಗಮನನೇ ಇರಲಿಲ್ಲ. ನಾಳೆ ನನ್ನ ಬಗ್ಗೇನೂ ಇವರು ಮತ್ತೊಬ್ಬರಿಗೆ ಹೀಗೇ ಹೇಳ್ತಾರೇನೋ ಅಂತ ಯೋಚಿಸ್ತಾ ಇದ್ದೆ.
ಆಫೀಸ್ ಗೇಟ್ ಬಂತು, cigarette ಸೇದುವ ಅವರು ಅಲ್ಲೇ ಇಳಿದು ಕೊಂಡರು. ರಾಯರಿಗೆ ನಮಸ್ತೆ ಹೇಳಿ ನಾನು ಆಫೀಸಿಗೆ ಹೋದೆ. Entrance'ನಲ್ಲಿ security watchman ನಮಸ್ಕಾರ ಮಾಡಿದ. ಇವನು ಇಷ್ಟು ದಿನ ನಮಸ್ಕಾರ ಮಾಡ್ತಿದ್ನಾ? ನೆನಪಿಗೆ ಬರಲಿಲ್ಲ. ಆದ್ರೆ ನಾನು ಅವನಿಗೆ ಮೊದಲ ಬಾರಿಗೆ ತಿರುಗಿ ನಮಸ್ಕಾರ ತಿಳಿಸಿದೆ.  ಇವತ್ತೇ ನನ್ನ ಕೊನೆಯ ದಿನ ಎಂದು ನಾನು decide ಮಾಡಿ ಆಗಿತ್ತು.
ಒಳಗೆ ಹೋದ ಕೂಡಲೇ ಬಾಸ್ ಕರೆದು ಮೀಟಿಂಗ್'ಗೆ ಬಾ ಎಂದರು. ನಿನ್ನ ಜೊತೆ ಸ್ವಲ್ಪ serious discussion ಮಾಡೋದು ಇದೆ ಎಂದರು.
ನನಗೆ ಅನುಮಾನ ಶುರುವಾಯ್ತು. ಇವರಿಗೆ ಹೇಗೆ ಗೊತ್ತಾಯ್ತು ನಾನು ನಾಳೆಯಿಂದ ಬರಲ್ಲ ಅಂತ ? ನಾನು ನಾಳೆ ಇಂದ ಬರಲ್ಲ ಅಂತ ಇವತ್ತು ಈ 'serious discussion' ಆ..?? Meeting, reports, ಅದು-ಇದು ಅಂತ ಸುಮಾರು ಹೊತ್ತಾಯಿತು.
ಹೊತ್ತು ಕಳೆದ ಹಾಗೇ ಎಲ್ರೂ ನನ್ನ ವಿಚಿತ್ರವಾಗಿ ನೋಡ್ತಾ ಇದ್ದಾರೆ ಅನ್ನಿಸ್ತು. ಅಮ್ಮ ಮಾಡಿ ಕೊಟ್ಟ ಟೊಮೇಟೊ ರೈಸ್ ಬಾತ್, ಚಪಾತಿ-ಪಲ್ಯ ತಣ್ಣಗಾಗಿತ್ತು, ಕ್ಯಾಂಟೀನ್'ಗೆ ಹೋಗಿ ಬಿಸಿ ಮಾಡಿಕೊಂಡು ಊಟ ಮಾಡಿದೆ, ಚಪಾತಿ-ಪಲ್ಯ superr ಆಗಿತ್ತು. ಅಮ್ಮನಿಗೆ ನಾಳೆ ದೋಸೆ ಮಾಡು ಅಂತ ನನ್ನ ತಮ್ಮ ಹೇಳಿದ್ದು ನೆನಪಾಯಿತು. ಅಲ್ಲೇ ಪಕ್ಕದಲ್ಲಿದ್ದ 'ಪ್ರಿಯ' burger ತಂದು ಕೊಟ್ಟಳು, ರವಿ ಮನೆ ಕಾಯಿ-ಗೊಜ್ಜು, ಸತೀಶ್'ನ ಮನೆ ಪುಳಿಯೋಗರೆ,..... ಹೌದು ಏನೆಲ್ಲಾ ಮಿಸ್ ಆಗುತ್ತಲ್ಲಾ ನಾಳೆಯಿಂದ. ಅಥವಾ ನಾನು ನಾಳೆಯಿಂದ ಇದನ್ನೆಲ್ಲಾ, ಇವರನ್ನೆಲ್ಲಾ ಮಿಸ್ ಮಾಡ್ಕೊತಿನಾ ? ಯಾಕೋ ಇದ್ದಕ್ಕಿದ್ದಂತೆ ಎದೆ ಹಿಂಡಿದಂಗಾಯ್ತು. ಯಾರಿಗೂ ಹೇಳ್ದೆ ಸೀದಾ ಆಫೀಸಿಂದ ಹೊರಗೆ ಬಂದ್ಬಿಟ್ಟೆ. ಹೊರಗೆ ಬಂದು ಎಡ-ಬಲ ನೋಡಿದೆ, ಎಡಕ್ಕೆ ಕಗ್ಗತ್ತಲು ತುಂಬಿದ ರಿಂಗ್ ರೋಡ್, ಹಾಗೆ ನಡೆದು ಹೋದೆ. ಸ್ವಲ್ಪ ದೂರದಲ್ಲೇ ಪಾರ್ಕ್ ಇತ್ತು. ಅದೇ ಮೊದಲ ಬಾರಿಗೆ ( ನಾಳೆಯಿಂದ ಮತ್ತೆ ಆಗಲ್ಲ ) ಒಳಗೆ ಹೋದೆ. ಯಾರೂ ಇರಲಿಲ್ಲ. ಆ ಹೊತ್ತಲ್ಲಿ ಯಾರಿರ್ತಾರೆ ? ಎಲ್ಲರೂ ಮಲಗಿ ದೆವ್ವಗಳು ಓಡಾಡುವ ಹೊತ್ತು. ಬೆಳೆಗ್ಗೆ ತನಕ ಇಲ್ಲೇ ಉಳಿದುಬಿಡಲಾ ? ಯಾಕೋ ಪಾರ್ಕಿನ ಒಳಗೆ ಕೂರಲಿಕ್ಕೆ ಮನಸೇ ಆಗಲಿಲ್ಲ. ತಿರುಗಿ ಬಂದ್ಬಿಟ್ಟೆ. ಸುಮ್ನೆ ಓಡ್ಲಿಕ್ಕೆ ಶುರು ಮಾಡ್ದೆ. ಹತ್ತು ಮಾರು ಹೋಗ್ತಿದ್ದ ಹಾಗೇ ಏದುಸಿರು ಬಿಡ್ಲಿಕ್ಕೆ ಶುರುವಾಯ್ತು. ವ್ಯಾಯಾಮ ಮಾಡ್ಲಿಲ್ಲ ಅಂದ್ರೆ ಹೀಗೇ ಆಗುತ್ತೆ. ಮೊದಲೇ ನಾನು ಇರೋ ಚಂದ ಹೇಳಬೇಕೇ..!! ನಾಳೆಯಿಂದ ಜಾಗಿಂಗ್ ಹೋಗ್ಬೇಕು. ಇಲ್ಲ, ಇಲ್ಲ. ಸಾಧ್ಯ ಇಲ್ಲ. ಅದು ಹೇಗಾಗುತ್ತೆ? ತಲೆಯಲ್ಲಿ ಏನೋ ವಿಚಿತ್ರ ಯೋಚನೆ.