Monday, March 29, 2010

ಬಂಡಿಯ ಗಾಲಿಯು ಮುರಿದಾಗ...

April ತಿಂಗಳ ಎರಡನೇ ಭಾನುವಾರ ಅಂದು. ನಾನು ಎಂದಿನಂತೆ ತಡವಾಗಿ ಎದ್ದು, ತಿಂಡಿ ತಿಂದು, ಸ್ನಾನ ಮಾಡಿದೆ. ಮಧ್ಯಾಹ್ನದ ಬಿಸಿಲು ನೋಡಿ ಎಲ್ಲೂ ಹೊರಗೆ ಹೋಗಲು ಮನಸಾಗಲಿಲ್ಲ. ಹಾಗೆ ತಣ್ಣನೆಯ ನೆಲದ ಮೇಲೆ ಮಲಗಿ FM ಕೇಳುತ್ತಿದ್ದೆ. ಮುಂಗಾರು ಮಳೆ ಭರ್ಜರಿ ಯಶಸ್ಸಿನ ಕಾಲವದು, ಎಲ್ಲಿ ಕೇಳಿದರು ಮುಂಗಾರು ಮಳೆ ಹಾಡುಗಳೇ. ಹೀಗೆ ಹಾಡು ಕೇಳುವಾಗ, mobile phone ರಿಂಗ್ ಕೇಳಿಸಿತು. ಎದ್ದು ಹೋಗಿ phone receive ಮಾಡುವಷ್ಟರಲ್ಲಿ 2 missed call ಮುಗಿದು, 3 'ನೆ ರಿಂಗ್... ಸೋಮಾರಿತನದಿಂದ ನಾನು hello ಎಂದಕೂಡಲೇ, "ಹಲೋ Avi, ಏನೋ ಮಾಡ್ತಾ ಇದ್ದೀಯ ? ನಾನು ನಿನ್ ಹತ್ರ ಸ್ವಲ್ಪ ಮಾತಾಡಬೇಕು..ಯಾಕೋ ತುಂಬಾ ಬೇಜಾರು ಕಣೋ..!" ಹೀಗೆ ಮಾತು ಮುಂದುವರೆಯಿತು. ಅವಳು ನನ್ನ ಸ್ನೇಹಿತನ girl frnd. ಆಗಾಗ ಅವರಿಬ್ಬರ ನಡುವೆ ಅಲ್ಪ-ಸ್ವಲ್ಪ ಜಗಳ ನಡೆಯುತ್ತಿತ್ತು. ಅಂದು phone'ನಲ್ಲಿ ಮಾತಾಡುವಾಗ ಅವಳದು ಮತ್ತೆ ಅದೇ ರಾಗ. "ನಾನು ಅವನ ಜೊತೆ ಮತ್ತೆ ಜಗಳವಾಡಿದೆ. ಇತ್ತೀಚಿಗೆ ಯಾಕೋ ತುಂಬಾ suspect ಮಾಡ್ತಾನೆ ಕಣೋ, ನನಗೆ ಅವನ ಜೊತೆ ಇರೋಕೆ ಆಗಲ್ಲ, I can't continue with him anymore. ಏನ್ ಮಾಡ್ಲಿ Avi ? ನಂಗೆ ಏನು ಮಾಡ್ಲಿ ಅಂತ ಗೊತ್ತಾಗ್ತಿಲ್ಲ, ನಾನೇನು ತಪ್ಪು ಮಾಡಿದಿನಿ ಹೇಳು ?" ಅವಳ ಆ ಮುಗ್ಧ ಪ್ರಶ್ನೆಗೆ ನನ್ನಿಂದ ಉತ್ತರ ಕೊಡಲು ಆಗಲಿಲ್ಲ. "ತಲೆ ಕೆಡಿಸಿ ಕೊಳ್ಳ ಬೇಡ ಪುಟ್ಟ, U r doing good, ಅದು ಅವನಿಗೆ ಅರ್ಥ ಆಗ್ತಾ ಇಲ್ಲ ಅನ್ನಿಸತ್ತೆ, ಇಬ್ಬರು ಮಾತಾಡಿ, issue will be resolved." ಎಂದು ವಿಷಯ ಏನು ಎಂದು ತಿಳಿಯದೆ ಅವಳಿಗೆ ಸಮಾಧಾನ ಮಾಡುತ್ತಿದ್ದೆ. 10-20 ನಿಮಿಷ ಹೀಗೆ ವಿಷಯ ತಿಳಿಯದೆ ಸಮಾಧಾನ ಮಾಡಿ ನಂತರ joke ಮಾಡುತ್ತ ಅವಳನ್ನು ನಗಿಸುತ್ತಿದ್ದೆ. ಅಲ್ಲಿಗೆ ಅವಳ mood ಸರಿಹೋಗುತ್ತಿತ್ತು.
ಸಂಜೆ ನನ್ನ ಗೆಳೆಯ ಬಂದು "ಲೇ ಮಗಾ, ಏನೋ ಮಾಡ್ಲಿ ಇವಳಿಗೆ, ಹೇಳಿದ್ದು ಒಂದು ಸ್ವಲ್ಪನೂ ಅರ್ಥ ಆಗಲ್ಲ, ಯಾವ ರೀತಿ ಹೇಳಬೇಕು ಇವಳಿಗೆ......" ಅವನು ಹೀಗೆ ತನ್ನ girl frnd ಬಗ್ಗೆ ರಾಗ ಎಳೆಯುತ್ತಿದ್ದ. ಅವರ ಜಗಳದ ವಿಷಯ ಏನು ಅಂತ ತಿಳಿದಿದ್ದರೂ ನಾನು ಸುಮ್ಮನೆ ಇರಬೇಕಿತ್ತು, ಯಾಕೆಂದರೆ, ನನಗೆ ಇವನು ತುಂಬಾ close friend, ಅವಳ ಬಗ್ಗೆ ತಂಗಿ ಅನ್ನೋ soft corner. ಜಗಳಕೆ ಸಂಬಂಧವಿಲ್ಲದಂತೆ ಒಂದೆರಡು ಮಾತಾಡಿ ಇಬ್ಬರಿಗೂ compromise ಮಾಡುತ್ತಿದ್ದೆ. ಇಬ್ಬರು ಜೊತೆಯಲ್ಲಿ ಇದ್ದಾಗ ಆಹಾ ಅಪೂರ್ವ ಜೋಡಿ, ಆದರೆ ಜಗಳ ಮಾಡಿ ಮುನಿಸಿಕೊಂಡಾಗ ತುಂಬಾ ವಿಚಿತ್ರ.  ಒಂದು ದಿನ ಅವಳು call ಮಾಡಿ ಮತ್ತೊಂದು ಮಹಾ-ಜಗಳದ ಬಗ್ಗೆ ಹೇಳಿದಳು. ನಾನು ನನ್ನದೇ ಶೈಲಿಯಲ್ಲಿ ಅವಳನ್ನು ಸಮಾಧಾನ ಪಡಿಸಿದೆ. ನನ್ನ ಗೆಳೆಯನನ್ನು ಅದೇ ರೀತಿ ಸಮಾಧಾನ ಪಡಿಸಿದೆ. ಇಬ್ಬರನ್ನು meet ಮಾಡಲು ಹೇಳಿದೆ. ಅಷ್ಟೊಂದು ತಲೆಬಿಸಿ ಎಬ್ಬಿಸಿದ ಇವರ ಜಗಳದ ಮಧ್ಯದಲ್ಲಿ ಅವಳು "gol-gappa" ತಿನ್ನುವ ಆಸೆ ತೋರಿದಳು. ಇದನ್ನು innocence, ಅನ್ನಬೇಕೆ...?? ಅಥವಾ ಅವಳು joke ಮಾಡ್ತಾ ಇದ್ಳ.??

ಎಷ್ಟೋ ಬಾರಿ ಈ ರೀತಿ ನಡೆದ ನಂತರ, ನನಗೆ ಇದರ ಬಗ್ಗೆ ಸಾಕಾಗಿ ಹೋಗಿತ್ತು. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ, ಇವನು ಹೇಳಿದ ಎಂದು ಅವಳ ಜೊತೆ ವಿಚಾರಣೆ, ಅವಳು ಹೇಳಿದಳೆಂದು ಇವನ ಜೊತೆ ವಿಚಾರಣೆ; ಇಬ್ಬರ ಆಟದ ನಡುವೆ ನಾನೊಬ್ಬ ಕೊತಿಯಂತಾಗಿದ್ದೆ. ಆದರು ಇಬ್ಬರು ಚನ್ನಾಗಿರಲಿ, ಇಬ್ಬರ ಈ ಜಗಳ ನಿಲ್ಲಲಿ ಎಂದು ಸದಾ ಮನದಲ್ಲಿ ಹರಸುತ್ತಿದ್ದೆ. ಸ್ವಲ್ಪ ದಿನಗಳ ನಂತರ, ಅವನ ಸಮಸ್ಯೆ ಅವನೇ ಪರಿಹರಿಕೊಳ್ಳುತ್ತೇನೆ ಎಂದು ನನ್ನ ಗೆಳೆಯ ನನ್ನನ್ನು ದೂರ ಇಟ್ಟಿದ್ದ. ನನಗೋ ಧರ್ಮಸಂಕಟ, ಇತ್ತ ಇವನು ಈ ವಿಷಯದಲ್ಲಿ ತಲೆ ಹಾಕಬೇಡ ಎಂದು ಹೇಳಿದ್ದಾನೆ, ಅತ್ತ ಅವಳು ನಾನು support ಮಾಡ್ತೀನಿ ಅನ್ನೋ ಭರವಸೆ ಇಂದ ಇದ್ದಾಳೆ. ನನ್ನ ಗೆಳೆಯನಿಗೆ ತಿಳಿಸದೇ, ನಾನು ಇವಳಿಗೆ ಎಷ್ಟೇ ಬುದ್ದಿ ಹೇಳಿದರೂ , ಇವಳ ತಲೆಯ ಒಳಗೆ ಹೋಗಲೇ ಇಲ್ಲ. ಅವಳಿಗೆ ಬುದ್ದಿ ಹೇಳಲು ಹೋಗಿ ನಾನು ಅವಳ ಮನದಲ್ಲಿ ಅವಳ enemy ಆಗಿ ಹೋದೆ.ಅವರಿಗೆ ಒಳ್ಳೆಯದಾಗುವುದಾದರೆ ನಾನು ಏನು ಮಾಡಲು ಸರಿ ಎಂದು, ಗೆಳೆಯನ ನಾಟಕದ ಮೂಲ ಪಾತ್ರ ವಹಿಸಿದೆ. ಅದರ ಪ್ರತಿಫಲದಿಂದ ಇಬ್ಬರು ಸ್ವಲ್ಪ ದಿನ ಚನಾಗಿದ್ದರು, ನಾನು ಅವರ ಪಾಲಿಗೆ ದೂರವಾದೆ.
ಈಗ ಅವರು ಹೇಗಿದ್ದಾರೆ ಎಂದು ನನಗೆ ಹೆಚ್ಚಾಗಿ ತಿಳಿದಿಲ್ಲ. ಒಮ್ಮೆ ಹೀಗೆ ಗೆಳೆಯನನ್ನು ನೋಡಬೇಕೆನಿಸಿ ಅವನ ಮನೆಗೆ ಹೊರಟೆ. ಸ್ವತಃ ಅವನ mobile'ಗೆ call ಮಾಡಿ ಹೊಸ ಮನೆಯ address ತಿಳಿದುಕೊಂಡೆ. ಇನ್ನೇನು ಅವನ ಮನೆಗೆ ಹೋರಾಡಬೇಕು ಎನ್ನುವಾಗ, ನನ್ನ mobile'ಗೆ ಒಂದು sms ಬಂದಿತು. ಅದು ನನ್ನ ಗೆಳೆಯನ sms. "ನೀನು ಮನೆಗೆ ಬಂದು ನನ್ನನ್ನು meet ಮಾಡಬೇಕು ಅಂತಿದ್ದರೆ ಬೇಗನೆ ಬಾ, ಆದರೆ 7'ಘಂಟೆಯ ಒಳಗೆ please ವಾಪಾಸ್ ಹೊರಡು, ಅವಳು ಬರುತ್ತಾಳೆ." ತಡೆಯಲಾಗದ ದುಃಖ, ಆದರೂ ಅವನ ಮನೆಗೆ ತೆರಳಿ, ಬೇಗನೆ ಹೊರಟು ಬಂದೆ. ನನಗೆ ಅವರಿಬ್ಬರೂ ಸಮಸ್ಯೆ ಬಗೆಹರಿಸಿಕೊಂಡವರ ಹಾಗೆ ಕಂಡಿತು. ಅವರ ಸಮಸ್ಯೆಗೆ ಮೂಲ ಕಾರಣ ಹುಡುಕುವ ಬದಲು, ನನ್ನ ಮೇಲೆ ಗೂಬೆ ಕೂರಿಸಿದರು. ನಾನು ಅವರ ತಿಕ್ಕಲುತನಕ್ಕೆ ದಾಳವಾಗಿದ್ದೆ. ನಾನು ಮನಸ್ಸಿನಲ್ಲಿಯೇ ಯೋಚನೆ ಮಾಡಿದೆ. ' ನನ್ನ ಹೆಸರುಹಾಳು ಮಾಡಿ, ಇವರು ತಮ್ಮ ಸಂಸಾರ ರಥ ಮುಂದುವರಿಯೋದಾದರೆ ನನ್ನ ಹೆಸರು ಹಾಳಾದರೂ ಪರವಾಗಿಲ್ಲ. ಇವರಿಬ್ಬರು ಚೆನ್ನಾಗಿರಲಿ.' ಎಂದು ತಲೆ ತಗ್ಗಿಸಿ ನಡೆದೆ.  ಬಂಡಿಯ ಗಾಲಿಯು ಮುರಿದಾಗ ತಲೆ ತಗ್ಗಿಸಿ ನಡೆಯಲೇ ಬೇಕು.

ಮುರಿದ ಆ 'ಬಂಡಿಯ ಗಾಲಿ' ಕಥೆಯನ್ನು ಮತ್ತೊಮ್ಮೆ ಓದಬೇಕೆನಿಸಿತು. ಅಂದು ಜಗಳವಾಡಿ ಕಿತ್ತಾಡಿ ಕೊಳ್ಳುತ್ತಿದ್ದ ಆ ಇಬ್ಬರು ಈಗ ಒಬ್ಬರು. ಅವರ ಮದುವೆ ಆಗಿ ಈಗ ಅವರ ಮುಖದಲ್ಲಿನ ಆ ನಗುವನ್ನು ನೋಡಲು ನನಗೆ ಖುಷಿಯಾಗುತ್ತದೆ. ಅದೇ ಪ್ರೀತಿ ಅದೇ ಕಿತ್ತಾಟದೊಂದಿಗೆ ನಗುತ ಬಾಳಿರಿ...!!! 

Sunday, March 28, 2010

ಸಾಮಾನ್ಯವಾಗಿ ನಡೆಯುವ ಅಸಾಮಾನ್ಯ ತಪ್ಪುಗಳು....

ಇದನ್ನು ನಾನು ಕೆಲ ದಿನಗಳ ಹಿಂದೆ, ದಿನ ಪತ್ರಿಕೆಯಲ್ಲಿ ಓದಿದೆ...!! ತುಂಬಾ ಚನ್ನಾಗಿ ಮೂಡಿ ಬಂದ ಲೇಖನ...!!
ದಿನ ಪತ್ರಿಕೆಯ ಒಂದು ಒಳ ಪುಟದಲ್ಲಿ ಹೀಗೊಂದು ಲೇಖನದ ಶೀರ್ಷಿಕೆ. "ಜನಸಂಘ ಕಟ್ಟುವಲ್ಲಿ ಶಿಕ್ಷಕರ ಪತ್ರ ಮಹತ್ವದ್ದು". ಲೇಖಕರು ಭಾವಿಸಿದ ಹಾಗೆ ನಾನು ಸ್ವಲ್ಪ surprise ಆಗಿದ್ದೆ. ಜನಸಂಘವೆಲ್ಲಿ ಶಿಕ್ಷಕ ವರ್ಗವೆಲ್ಲಿ ಎಂದು. ಜನಸಂಘಕ್ಕು ಶಿಕ್ಷಕರಿಗೂ ಏನು ಸಂಬಂಧ..?? ಶಿಕ್ಷಕರು ಪಕ್ಷ ಕಟ್ಟುವುದೇ..?? ಬಲು ಅಪರೂಪದ ಸಂಗತಿ..!! ಆದರೆ ಈ ಶೀರ್ಷಿಕೆಯನ್ನು ಅರ್ಥ ಮಾಡಿಕೊಳ್ಳಲು ನೀನು ಪೂರ್ತಿ ಲೇಖನವನ್ನು ಓದಬೇಕು. ಅದು ಜನಸಂಘದ ಸಂಸ್ಥಾಪಕರಾದ ಪಂಡಿತ್ ದೀನದಯಾಲ್ ಉಪಾಧ್ಯಾಯ ಅವರ ಜನ್ಮದಿನದ ಸಮಾರಂಭ. ಸಭೆಯಲ್ಲಿ ಭಾಗವಹಿಸಿದ ಎಲ್ಲರು ಉಪಾಧ್ಯಾಯರ ಸಾಧನೆಯನ್ನು ಮುಕ್ತ-ಕಂಠದಿಂದ ಹೊಗಳಿದರು. ಸಮಾರಂಭಕ್ಕೆ ತೆರಳಿದ್ದ ವರದಿಗಾರ ಎಲ್ಲವನ್ನು ಸರಿಯಾಗಿ ವರದಿ ಮಾಡಿದ್ದ, ಆದರೆ ಆದದ್ದು ಒಂದೇ ಒಂದು ಎಡವಟ್ಟು. ಆ ಯಡವಟ್ಟು ಆಗಿದ್ದು ಶೀರ್ಷಿಕೆ ಬರೆಯುವಾಗ. ಕನ್ನಡ'ದಲ್ಲಿ ಉಪಾಧ್ಯಾಯ ಎನ್ನುವುದಕ್ಕೆ ಶಿಕ್ಷಕ ಎಂದು ಕರೆಯುವುದುಂಟು. ಉಪಾಧ್ಯಾಯರ ಬದಲಿಗೆ ಅವನು ಶಿಕ್ಷಕರು ಎಂದು ಬರೆದ.  ವರದಿಗಾರ copy ready ಮಾಡಿ ಕೊಟ್ಟ; ಸಂಪಾದಕ ಅದನ್ನು ಸರಿಯಾಗಿ ಓದಿದನೋ ಇಲ್ಲವೋ, ಅಥವಾ ಉಪಾಧ್ಯಾಯರ ಹೆಸರನ್ನು ಕೇಳಿರಲಿಲ್ಲವೋ ಗೊತ್ತಿಲ್ಲ, ಸಹಿ ಹಾಕಿ printing'ಗೆ ಕಳುಹಿಸಿದ. ಮರುದಿನ ದಿನ ಪತ್ರಿಕೆ ಓದಿದ ಜನರಿಗೆ ಪಂಡಿತ್ ದೀನದಯಾಲ್ ಉಪಾಧ್ಯಾಯರ ಸಾಧನೆಯ ಬಗ್ಗೆ ಏನು ತಿಳಿಯದೆ ಹೋಗಿತ್ತು. ಇದು ಕಚೇರಿಯಲ್ಲಿ ಯಾಂತ್ರಿಕವಾಗಿ ಕುಳಿತು ಸಂಪಾದಕ ಮೈ-ಮರೆತರೆ ನಡೆಯುವ ತಪ್ಪು. ಪತ್ರಿಕೆ print ಆಗುವ ಮುನ್ನ ಕನಿಷ್ಠ ೪-೫ ಜನರನ್ನು ದಾಟಿ ಹೋಗುತ್ತದೆ. ಅವರೆಲ್ಲರೂ ಬುದ್ದಿಪೂರ್ವಕವಾಗಿ ತಪ್ಪು ಮಾಡುವುದಿಲ್ಲ. ವಿಷಾದವೆಂದರೆ ಈ ತಪ್ಪುಗಳು ಪತ್ರಿಕೆ print ಆದ ಬಳಿಕ ತಿಳಿಯುತ್ತದೆ.

ಶಿವಮೊಗ್ಗ ಜಿಲ್ಲೆಯ ಊರಿನ ಹೆಸರು 'ನಗರ'. ಸಾಮಾನ್ಯವಾಗಿ ಊರಿಗೆ ಪಟ್ಟಣ, ಬೆಂಗಳೂರಿನಂತಹ ಮಹಾನಗರಗಳಿಗೆ 'ನಗರ' ಎಂದು ಹೇಳುವುದು ವಾಡಿಕೆ. ಪ್ರತಿದಿನ ಈ ಶಿವಮೊಗ್ಗ ಜಿಲ್ಲೆಯ 'ನಗರ'ದ ವರದಿಗಾರನಿಗೆ ಒಂದಲ್ಲ ಒಂದು ರೀತಿಯ ತೆಗಳಿಕೆ. 'ನಗರದಲ್ಲಿ ಭಾರಿ ಮಳೆ, ರಾತ್ರಿಯೆಲ್ಲ ವಿಧ್ಯುತ್ ವ್ಯತ್ಯಯ' ಎಂದು ಬರೆದು ಕಳುಹಿಸಿದ. ಮರುದಿನ print ಆಗಿದ್ದೆ ಬೇರೆ. ಸಂಪಾದಕ 'ನಗರ' ಬದಲಿಗೆ 'ಪಟ್ಟಣ' ಎಂದು ಬದಲಾಯಿಸಿದ. 'ನಗರ'ದ ಜನರು ವರದಿಗಾರನನ್ನು ದೂಶಿಸುತ್ತಿದ್ದರು.  ವರದಿಗಾರು ಪ್ರತಿ ದಿನದ ವರದಿಯೊಂದಿಗೆ ಹೀಗೊಂದು ಪತ್ರ ಬರೆದು ಕೊಡುತ್ತಿದ್ದರು. "ಸಾರ್, ನಮ್ಮೂರಿನ ಹೆಸರನ್ನು ತಪ್ಪಾಗಿ ಬರೆದರೆ, ನನಗೆ ಇಲ್ಲಿ ತಲೆ ಎತ್ತಿ, ಓಡಾಡಲು ಆಗುವುದಿಲ್ಲ, ಕೆಲವರು ನನ್ನನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ, ಇನ್ನು ಕೆಲವರು ನನಗೆ ಸುದ್ದಿ ಬರೆಯಲು ಬರೋದಿಲ್ಲ ಎಂದು ಹೇಳುತ್ತಿದ್ದಾರೆ. ಪ್ರತಿ ಸಲ ನಮ್ಮೂರಿನ ಹೆಸರು ಪಟ್ಟಣ ಅಂತಲೇ ಪ್ರಕಟವಾಗುತ್ತಿದೆ. ಕಚೇರಿ desk'ನಲ್ಲಿ ಇರುವವರಿಗೆ ಹೇಳಿ 'ನಗರ' ಎಂಬ ಊರಿದೆ ಅಂತ. ಹೀಗೆ 'ಬಾಂಬೆ ಡೈಯಿಂಗ್' ಎಂಬ ಕಂಪನಿ ಹೆಸರು 'ಮುಂಬೈ ಡೈಯಿಂಗ್' ಎಂದು ಬರೆಯಲು ಸಾಧ್ಯವೇ ?

ಇದೊಂದು ತಮಾಷೆಯೋ, ನೈಜ ಘಟನೆಯೋ ಗೊತ್ತಿಲ್ಲ, ರಾಜರ ಕಾಲದಲ್ಲಿನ ಸಂಪದಕನೊಬ್ಬ ಹೀಗೊಂದು ಸುದ್ದಿ ಬರೆಯುತ್ತಿದ್ದ. ರಾಜ ಸೇವಕನ ಕತ್ತೆಯೊಂದು ಸ್ಪರ್ಧೆಯಲ್ಲಿ ಗೆದ್ದುಬಿಟ್ಟಿತು. ಮರುದಿನ ಪತ್ರಿಕೆ "Servant's Ass won the race" ಎಂಬ ಶೀರ್ಷಿಕೆ ನೀಡಿತು. [Ass ಎಂದರೆ ಕತ್ತೆ ಎಂದು ಅರ್ಥ ಹಾಗು ಅಂಡು ಎಂದು ಕೂಡ.] ರಾಜನಿಗೆ ಸುದ್ದಿ'ಇಂದ ಬಹಳ ಬೇಸರವಾಯಿತು.  ರಾಜನು ಸೇವಕನ ಆ ಕತ್ತೆಯನ್ನು ಕರೆಯಿಸಿ ದುರುಗುಟ್ಟಿಕೊಂಡು ನೋಡಿದ. ಮರುದಿನ ಪತ್ರಿಕೆಯಲ್ಲಿ "King stares servant's Ass" ಎಂದಿತ್ತು. ಸುದ್ದಿ ಕೇಳಿ ರಾಜನು ಕುಪಿತನಾಗಿ ಸೇವಕನನ್ನು ಕರೆದು, ಇನ್ನು ಮುಂದೆ ನೀನು ಆ ಕತ್ತೆಯನ್ನು ಇತ್ತುಕೊಲ್ಲಬೇಡ, ಅದನ್ನು ರಾಣಿಗೆ ಕೊಟ್ಟುಬಿಡು ಎಂದ. ಸೇವಕ ಅದನ್ನು ಪಾಲಿಸಿದ. ಮರುದಿನ ಪತ್ರಿಕೆಯ ಸುದ್ದಿ ಹೀಗಿತ್ತು - "Queen has the best ass in the town". ರಾಜನಿಗೆ ಇದು ತುಂಬಾ ಇರುಸು-ಮುರುಸಗಿತ್ತು. ಅವನು ರಾಣಿಗೆ ಆ ಕತ್ತೆಯನ್ನು ಕಾಡಿಗೆ ಅಟ್ಟುವಂತೆ ಹೇಳಿದ. ರಾಣಿಯು ಹಾಗೆಯೇ ಆದೇಶ ನೀಡಿದಳು. ಮರುದಿನದ ಪತ್ರಿಕೆಯ ಶೀರ್ಷಿಕೆ ಹೀಗಿತ್ತು: "Queen announces her ass is free".
ಎಂಥಾ ಪ್ರಮಾದವಲ್ಲವೇ.? ಬರವಣಿಗೆ ಒಂದು ಸೊಗಸಾದ ಕಲೆ, ಅದರಲ್ಲಿ ತಪ್ಪುಗಳು ಆದರೆ ಈ ರೀತಿ ಅಸಾಮಾನ್ಯ ಅರ್ಥಗಳು ಬರುತ್ತವೆ. ಸಾಮಾನ್ಯ'ವಾಗಿ ನಡೆಯುವ ಈ ಅಸಾಮಾನ್ಯ ತಪ್ಪುಗಳು ಒಬ್ಬರಿಗೆ ಆಟ, ಇನ್ನೊಬ್ಬರಿಗೆ ಪ್ರಾಣ ಸಂಕಟ. ಈ ಲೇಖನವನ್ನು ಕಳೆದ ಶನಿವಾರದ ದಿನ ಪತ್ರಿಕೆಯಲ್ಲಿ ಓದಿದೆ. ವಿಶ್ವೇಶ್ವರ್ ಭಟ್'ರ ಈ ಲೇಖನ ತುಂಬಾ ಇಷ್ಟವಾಯಿತು.
ಮೂಲ ಕೃತಿ: ಸುದ್ದಿಮನೆ ಕಥೆಯ ವಿಶ್ವೇಶ್ವರ್ ಭಟ್.

Tuesday, March 23, 2010

ಪ್ರೀತಿ-ಪ್ರೇಮ-ಪ್ರಣಯ ಇವೆಲ್ಲ ಮನಸ್ಸಿನ ಭಾವನೆಗಳ priority ಅಷ್ಟೇ...

....ಅಂದು ಯಾಕೋ ನನ್ನ ಮನಸ್ಸು ತುಂಬಾ ಖುಷಿಯಾಗಿತ್ತು..!! ಅದಕ್ಕೆ ಸಾಥ್ ಎನ್ನುವಂತೆ ಸುಂದರವಾದ ಶುಭ್ರ ಆಕಾಶ, ಆಗತಾನೇ ಮೂಡಿದ ಸೂರ್ಯನ ಎಳೇಬಿಸಿಲು. ಕೆಂಪು-ಬಿಳಿ ಬಣ್ಣದ KSRTC ಬಸ್ಸಿನಿಂದ ಇಳಿದು ಬಂದೆ. ಹೊಸ ಊರಿನ ಹೊಸ ಅನುಭವಕ್ಕೆ ಎಲ್ಲ ರೀತಿಯಲ್ಲೂ ready ಆಗಿದ್ದೆ. ಬಸ್ ಸ್ಟ್ಯಾಂಡ್ ಹತ್ತಿರದ lodge ಒಂದರಲ್ಲಿ room ಪಡೆದು, ಫ್ರೆಶ್ ಆಗಿ ಹೊರಬಂದೆ. ಘಂಟೆ ಇನ್ನು 6.30, ಸುಮಾರು 4-5 ಬಾರಿ Axe ಬಾಟಲಿಯನ್ನು ತೆಗೆದು spray ಮಾಡಿಕೊಂಡು, ಹತ್ತಿರದ telephone booth'ಗೆ ತೆರೆಳಿದೆ. ಮೊದಲ ಬಾರಿಗೆ ಆ ಊರಿಗೆ ಬಂದಿದ್ದ ನಾನು ಅಲ್ಲಿನ ಭಾಷೆಯನ್ನು ತಿಳಿಯಲು ಸ್ವಲ್ಪ ಕಷ್ಟ ಪಡಬೇಕಾಯಿತು. Telephone booth'ನ receiver 'ನ್ನು ಪಕ್ಕನೆ ಎತ್ತಿಕೊಂಡು ನಂಬರ್ dial ಮಾಡಿ ಉತ್ತರಕ್ಕಾಗಿ ಕಾದು ನಿಂತಿದ್ದೆ... ಅತ್ತ ಕಡೆ'ಇಂದ ಅವಳು phone receive ಮಾಡಿ "Good Morning Avi, ನಂಗೊತ್ತಿತ್ತು ನೀನು ಇಷ್ಟೊತ್ತಿಗೆ ಫೋನ್ ಮಾಡ್ತಿಯ ಅಂತ..ಎಲ್ಲೋ ಇದ್ದೀಯ..? ಈ ಊರಿಗೆ ಇದೆ ಮೊದಲು, ಎಲ್ಲೋ ಹೋಗಿ ತಪ್ಪಿಸ್ಕೋಬೇಡ..ಬಸ್ ಸ್ಟ್ಯಾಂಡ್ ಹತ್ತಿರಾನೆ ಇರು, ನಾನು ಬರ್ತೀನಿ., ಹೌದು ಯಾವ color dress ಹಾಕಿದೀಯ, ನಿನ್ನ ಹೇಗೆ identify ಮಾಡೋದು..??"  ಅವಳನ್ನು ಮೊದಲ ಬಾರಿಗೆ meet  ಮಾಡಲು ಹೋಗಿದ್ದೆ. ಹಾಗೆ 5 - 10 ನಿಮಿಷ ಫೋನಿನಲ್ಲಿ ಮಾತಾಡಿ ನಂತರ ಅವಳಿಗಾಗಿ ಬಸ್ ಸ್ಟ್ಯಾಂಡ್ ಹತ್ತಿರ ಕಾಯುತ್ತಿದ್ದೆ.
ಅವಳ ಜೊತೆ ಸುಮಾರು 2 ವರ್ಷ ಫೋನಿನಲ್ಲಿ ಮಾತನಾಡಿದ ನಾನು ಅವಳನ್ನು ಒಮ್ಮೆ photo 'ನಲ್ಲಿ ನೋಡಿದ್ದೇ ಅಷ್ಟೇ. ಹೇಗಿರುವಳೋ, ನನ್ನ ನೋಡಿ ಅವಳು ಹೇಗೆ react ಮಾಡ್ತಾಳೆ, ಅನ್ನೋ ನೂರಾರು ಯೋಚನೆ..! ದೂರದಲ್ಲಿ ಹಳದಿ ಬಣ್ಣದ ಚೂಡಿದಾರ್ ಧರಿಸಿ, Fair-n-lovely ಮುಖದ ಹುಡುಗಿಯೊಬ್ಬಳು ಯಾರನ್ನೋ ಹುಡುಕುತ್ತಾ ಇರುವಂತೆ ಕಂಡಿತು...! ನಾನು ಅವಳನ್ನು ನೋಡಿದ ಕೂಡಲೇ ಅವಳಿಗೂ ತಿಳಿಯಿತು...!! ಮೊದಲು ಅವಳನ್ನು ಕಂಡ ಮನಸ್ಸು ಖುಷಿ-ಗೊಂದಲ-ಭಯ ಎಲ್ಲವನ್ನು ಬಿಂಬಿಸುತ್ತಿತ್ತು. ನಡುಗುತ್ತ ಕೈ ಕುಲುಕಿದೆ.
ಹತ್ತಿರದ ಹೋಟೆಲ್'ನಲ್ಲಿ ತಿಂಡಿ ತಿಂದು, morning show ಸಿನಿಮಾಕ್ಕೆ ಹೋಗಿ, ನಂತರ ಊರೆಲ್ಲ ತಿರುಗಿ, ಅವಳೊಂದಿಗೆ ಕಳೆದ ಆ ದಿನ ಅವಿಸ್ಮರಣೀಯ..! "ನೀನೆ ಮೊದಲನೇ ಬಾರಿಗೆ ಬಂದೆ ಹೃದಯದ ಊರಿಗೆ, ಇಳಿದೆ ಮನಸಿನ ಬೀದಿಗೆ, ನೀನ್ಯಾರೆ.." ಎಂದು ಕಾಯುತ್ತಿದ್ದ ಮನಸ್ಸಿಗೆ ಸಂಭ್ರಮ. ಮನದ ಮಾತಿಗೆ ಬೇಲಿಯೇ ಇರಲಿಲ್ಲ, ಕಣ್ಣುಗಳು ಅವಳನ್ನಲ್ಲದೆ ಬೇರೆಲ್ಲೂ ನೋಡಲಿಲ್ಲ. ಸಂಜೆ ಅವಳೊಡನೆ ಕೈ ಹಿಡಿದು ತುಸು-ದೂರ ನಡೆದು ಸಾಗಿದೆ. ಮನಸ್ಸು ಅವಳಿಗೆ propose ಮಾಡು ಎಂದು ಹೇಳುತ್ತಿತ್ತು..!! ಹೇಳಲು ಭಯ..ಸ್ವಲ್ಪ ತಡೆದು ಹೊರಡುವಾಗ ಹೇಳುವೆ ಎಂದು ಸುಮ್ಮನಿದ್ದೆ. ಹಾಗೆ-ಹೀಗೆ ಎನ್ನುತ್ತಾ ಸಂಜೆ 6.45 ಆಗಿ ಹೋಯಿತು. ಅವಳು ತನ್ನ ಹಾಸ್ಟೆಲ್'ಗೆ ಹೋಗಿ ಸೇರುವ ಸಮಯ... I love.. ಅಂತ ಹೇಳಬೇಕು ಅನ್ನುವಷ್ಟರಲ್ಲಿ ಅವಳು, "Avi.. ನಾನು ನಿನಗೆ ಒಂದು ವಿಷಯ ಹೇಳಬೇಕು, ಹೇಗೆ ಹೇಳಲಿ ಅಂತ ಗೊತ್ತಿಲ್ಲ, ನನಗೆ ಒಬ್ಬ ಹುಡುಗ ತುಂಬಾ close ಆಗಿದ್ದಾನೆ, ಅವನ ಬಗ್ಗೆ ನಿನಗೆ ಹೇಳಿಲ್ಲ ಅಂತ ಬೇಜಾರು ಮಾಡ್ಕೋಬೇಡ........." ಅದನ್ನು ಕೇಳಿದ ನನ್ನ ಕಿವಿಗೆ ಮುಂದೆ ಅವಳು ಏನು ಮಾತಾಡುತ್ತ ಇದ್ದಾಳೆ ಅಂತ ಕೇಳಿಸಲೇ ಇಲ್ಲ. ಅಲ್ಲಿಂದ ಓಡಿ ಹೋಗಿ, ಸಿಟಿ ಬಸ್ ಹತ್ತಿದೆ, ದೂರದಿಂದ ಅವಳಿಗೊಂದು byee ಹೇಳಿ ಹೊರಟೆ..ಕಣ್ಣಿನಲ್ಲಿ ತುಂಬಿದ ನೀರು ನದಿಯಾಯಿತು. ಅದೇ ಸಮಯಕ್ಕೆ ಸುರಿದ ಮಳೆ'ಯಿಂದ ಯಾರಿಗೂ ನನ್ನ ಕಣ್ಣೀರು ಕಾಣಿಸಲಿಲ್ಲ.ನನ್ನ ಮನಸ್ಸು ಸಿಡಿದು, ನನಗೆ ಏನಾಗಿದೆ ಅಂತ ತಿಳಿಯದಾಯಿತು. ಎಷ್ಟೋ ಯೋಚಿಸಿದೆ, 2 ವರ್ಷ ಅವಳ ಬಗ್ಗೆ ಇರದ ಪ್ರೀತಿ ಇವತ್ತು ಏಕೆ ಬಂದಿತು.?? ಇದು infatuation'ಆ..?? ಪ್ರೀತಿ ಎಂಬ ಮಾಯಾ ಜಾಲದಿಂದ, ನಾನು ಅವಳ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಸರಿಯೇ..?? ಎಂಥ ದಿನಕ್ಕೆ ಎಂಥ ending..??
ಇಂಥ ಯೋಚನೆಯಲ್ಲೇ ಹಲವು ತಿಂಗಳು ಕಳೆದೆ, ನಂತರ ತಿಳಿಯಿತು, ಅವಳ ಬಗ್ಗೆ ಇದ್ದ ಪ್ರೀತಿ, ತುಂಬಾ ಘಾಡ. ನನ್ನ ಜೀವನದ ಗೆಳತಿ ಅವಳು. ನನ್ನ ಚಡ್ಡಿ-ದೋಸ್ತ್ ಹಾಗೆ.
ಮೇಲಿನ ಚಿತ್ರದಲ್ಲಿ ಇರುವಂತೆ ಮನದಲ್ಲಿ ಹಸಿರಾದ ಚಿಗುರು ಭಾವನೆಗಳು, ಬರಡಾದ ನೋವು, ಎರಡು ಇರುತ್ತದೆ. ಒಂದು ಕ್ಷಣ ತಿಳಿಯದೆ ಬಂದ ಭಾವನೆ ಪ್ರೀತಿಯಲ್ಲ. ಅದು ಒಂದು ಸುಂದರ ಪಯಣ, ಜೀವನ-ಯಾನ.
 ಪ್ರೀತಿ-ಪ್ರೇಮ-ಪ್ರಣಯ ಇವೆಲ್ಲ ಮನಸ್ಸಿನ ಭಾವನೆಗಳ priority ಅಂತ ಅನ್ನಿಸುತ್ತದೆ... ನೀವೇನು ಹೇಳ್ತಿರ..??

Monday, March 22, 2010

ಹೀಗೆ ಒಂದು ಯೋಚನೆ...

"Mobile phone ಉಪಯೋಗದಿಂದ ನಮ್ಮ ಸೃಜನಶೀಲತೆಯು ಹಾಳಾಗುತ್ತಿದೆ." ಹೀಗೆ ಒಂದು ಅಂಕಣ ಓದುತ್ತ ಇದ್ದಾಗ ಒಂದು missed call...! ಬೇರೆಯವರು ಖರ್ಚು ಮಾಡಿ ನಮಗೆ ಕರೆ ಮಾಡಲಿ, ಎಂಬುದು ಇದರ ಅರ್ಥವೇ..?? ಏನಿದು missed call..?? ಮೂಲ ಪದವನ್ನು translate ಮಾಡಿದರೆ, the call that we miss to receive is missed call. ಆದರೆ ಇದು call back signal ಆಗಿದೆ. ನಮ್ಮ ದುಡ್ಡು ಮಾತ್ರ ಮುಖ್ಯ, ನಾನು call ಮಾಡಿದರೆ currency ಖಾಲಿ ಆಗುತ್ತದೆ, ಬೇರೆಯವರೇ ನಮಗೆ ಎಲ್ಲ ಕರೆ ಮಾಡಲಿ ಎನ್ನುವ ಮನೋಭಾವ ಯಾಕೆ..??
ಒಳ್ಳೆಯ ಸ್ನೇಹಿತನೊಬ್ಬ ಕರೆ ಮಾಡಿ ಮಾತನಾಡಿಸಿದರೆ, ಎಷ್ಟು ಖುಷಿಯಾಗುತ್ತದೆ, ಅದೇ ಅವನು missed call ಕೊಟ್ಟರೆ ಅದರಿಂದ ಅವನಿಗೆ ಕಂಜೂಸ್ ಎಂಬ ಹೆಸರು ಬರಬಹುದು. ಅವಶ್ಯಕತೆ ಇಲ್ಲದ ಮೇಲೆ ಕರೆ ಮಾಡುವುದಾದರೂ ಯಾಕೆ, ಅದಕ್ಕೂ ಮೀರಿ missed call ಕೊಟ್ಟು ಇನ್ನೊಬ್ಬರ ತಲೆ ತಿನ್ನುವುದು ಏಕೆ..?? ಯಾವ ವ್ಯಕ್ತಿ ಯಾವ ಸಂಧರ್ಭ'ದಲ್ಲಿ ಇರುತ್ತಾನೋ, missed call ಬಂತೆಂದರೆ ಸಿಟ್ಟು ಬರದೆ ಇರಲಾರದು..!! ಭಾವನೆಗಳಿಗೆ ಮಾತ್ರ ಬೆಲೆಯೇ ? ಬೇರೆಯವರ ಭಾವನೆಗೆ ಬೆಲೆಯೇ ಇಲ್ಲವೇ ? ಒಂದು ರೀತಿಯಲ್ಲಿ ಉಪಯೋಗ ಎಂದು mobile ಬಳಕೆ ಹೆಚ್ಚಾಗುತ್ತಾ ಇದ್ದರೆ, ಇನ್ನೊಂದು ಕಡೆ ಅದರ ದುರ್ಬಳಕೆ ಹೆಚ್ಚುತ್ತಿದೆ. ಉಪಯೋಗ ದುರುಪಯೋಗ'ವಾದರೆ ಸರಿಯಲ್ಲ..!!
ಹಿಂದೊಂದು ಕಾಲ ಇತ್ತು. ಪತ್ರಗಳಲ್ಲಿ ಮನಸ್ಸನ್ನೇ ಎಳೆ ಎಳೆಯಾಗಿ ಬಿಚ್ಚಿಹೇಳುತ್ತಿದ್ದ ಕಾಲವದು. ಈಗ, ಈ missed call ಗಳಲ್ಲಿ ನಮ್ಮ ಮನಸ್ಸೆಲ್ಲೋ miss ಆಗಿದೆ ಅಂತ ನನ್ನ ಅನಿಸಿಕೆ. 

Monday, March 15, 2010

ಮೊದಲ ಪ್ರಣಯ ಪತ್ರವೇ....!!

ಹಲೋ ಹುಡುಗಿ..!! ನನ್ನ ಮನಸಿನ ರಾಣಿ..! ನೀನು ಈ letter'ನ ಪೂರ್ತಿಯಾಗಿ ಓದು. ಇದು ನನ್ನ ಮೊದಲ ಲವ್ ಲೆಟರ್. ಹಾಗಾಗಿ ಈ ಲೆಟರ್ ಅನ್ನು ಮೊದಲಿನಿಂದ ಕೊನೆಯವರೆಗೆ ಸಂಪೂರ್ಣವಾಗಿ ಓದು, ನಂತರ ನೀನು ಪ್ರೀತಿಸದೇ ಹೋದರೂ ಪರವಾಗಿಲ್ಲ.

ನಾನು Mechanical ಇಂಜಿನಿಯರ್ ಓದುತ್ತಿದ್ದೇನೆ, ಇದುವರೆಗೂ ನೂರಾರು ಹುಡ್ಗೀರನ್ನ ನೋಡಿದ್ದೀನಿ. ನೋಡಲಿಕ್ಕೆ ಚೆನ್ನಾಗಿರೋರು, ಮಾತಾಡಲು, ಸುತ್ತಾಡಲು ತಯಾರಿರುವವರು, ಎಲ್ಲರನ್ನು ನೋಡಿದ್ದೇನೆ.  ಆದರೆ ಯಾಕೋ ನಿನ್ನ ನೋಡಿದ ಮೇಲೆ ಮತ್ಯಾರನ್ನು ನೋಡಬಾರದು ಅನ್ನಿಸಿತು. ಯಾಕೋ ಮನಸ್ಸು ಅಲ್ಲೇ ಸ್ಟ್ರಕ್ ಆಗಿ ಬಿಟ್ಟಿದೆ. ನನಗೆ ಇದೆ ಪ್ರೀತಿ ಅನಿಸಿತು. ಬುದ್ಧಿ ತುಂಬಾ ಯೋಚನೆ ಮಾಡ್ತು, ಇದು ಯಾವುದೇ Infatuation ಅಲ್ಲ. ನೀನು ಎಲ್ಲರಿಗಿಂತ ಚೆನ್ನಾಗಿದ್ದೀಯ ಅಂತ ನಾನು ನಿನಗೆ ಸುಳ್ಳು ಹೇಳಬೇಕಾಗಿಲ್ಲ. ನಾನೊಬ್ಬ flirt ಕೂಡ ಖಂಡಿತ ಅಲ್ಲ. ನನಗೆ ಹುಡ್ಗೀರಲ್ಲಿ friends ಇದ್ದಾರೆ. ಆದರೆ Girl Friend ಇಲ್ಲ.  ನನ್ನ ಮನಸ್ಸಿಗೆ ಅನ್ನಿಸ್ಸಿದ್ದನ್ನ ನಿನಗೆ ನೇರವಾಗಿ ಹೇಳ್ತಾ ಇದ್ದೀನಿ. ನಿನ್ನ ಜೊತೆ ಸುಮಾರು ಸರಿ phone'ನಲ್ಲಿ ಮಾತಾಡಿದ್ದೇನೆ. ಪ್ರತಿ ಬಾರಿ ನೀನು ನನಗೆ ತುಂಬಾ ಹಾತೀರ ಆಗುತ್ತಿದ್ದಿಯ.  ನಿನಗೆ ಈ ಲೆಟರ್ ಓದಿ, ಸ್ವಲ್ಪ ನಗು ಬಂದರೆ, its OK, I will also enjoy with you, ತಲೆನೋವು ಬರೋದಾದರೆ, I will not bother you anymore. ಈಗ ಹೇಳದೆ ಇದ್ದರೆ ಬಹುಶ, ಇದನ್ನು ಮುಂದೆಂದೂ ಹೇಳಲು ಆಗುವುದಿಲ್ಲ.
ಈ ಲೆಟರ್ ನ time pass'‌ಗೆ ಬರೆದಿದ್ದು ಅಂತ ತಿಳ್ಕೋಬೇಡ. ನಾನು ನಿನಗೆ ನೇರವಾಗಿ ಹೇಳೋಣ ಅಂದುಕೊಂಡೆ. ಆದರೆ ಮಾತಾಡಿದಷ್ಟು, film'ನಲ್ಲಿ ಹೇಳಿದಷ್ಟು ಸುಲಭ ಅಲ್ಲ. Friends ಹತ್ತಿರ ಹೇಳಿ ಕಳುಹಿಸೋಣ ಅಂದುಕೊಂಡೆ, ಆದರೆ ಅವರು mediator  ಯಾಕೆ ಆಗಬೇಕು?
ಪ್ರೀತಿ ಬಲವಂತದಿಂದ ಬರೋದಿಲ್ಲ ಅನ್ನೋದು ನನಗೆ ಗೊತ್ತು. ನಾನು ನಿನಗೆ ಇಷ್ಟು ದಿನ ಬರಿ ಸ್ನೇಹಿತ'ನಾಗಿರಲಿಲ್ಲ. ನಿನ್ನ ಮನಸ್ಸನ್ನು ಅರ್ಥ ಮಾಡಿಕೊಂಡು ನಿನ್ನ ಪ್ರೀತಿಯನ್ನು ಹಂಬಲಿಸುತ್ತ ಇರುವೆ. ನೀನು ನನ್ನ ಬಗ್ಗೆ ಏನು ತಿಳಿದಿರುವೆ ಎಂದು ನನಗೆ ಗೊತ್ತಿಲ್ಲ. ಆದರೆ ಮನದಲ್ಲಿ ಪ್ರೀತಿ ಇದ್ದರೂ ಸುಳ್ಳು ಹೇಳಿ ಕೈ ಕೊಡಬೇಡ. ನಿನ್ನ ಬುದ್ಧಿ ಮಾತಿಗಿಂತ, ಮನಸ್ಸಿನ ಮಾತು ಕೇಳು. ನಿನ್ನ ಮನಸ್ಸಿಗೆ ನಾನು ಸಂಗಾತಿ ಆಗಬಲ್ಲೆನು ಅನ್ನಿಸಿದರೆ, ನಿನ್ನ ಪ್ರೀತಿನ ನನ್ನ ಜೊತೆ ಹಂಚಿಕೊಳ್ಳಬಹುದು. ನಾನು ಸುರ-ಸುಂದರಾಂಗ'ನಲ್ಲ, ಅಪ್ಪ ಮಾಡಿಟ್ಟಿರುವ ಆಸ್ತಿ ಇಲ್ಲ...ನನ್ನ ವಿದ್ಯೆ, ನನ್ನ ಕೆಲಸ, ನಿನ್ನ ಪ್ರೀತಿ ಇಷ್ಟೇ ನನ್ನ ಬಳಿ'ಇರುವ ಆಸ್ತಿ..! ನಾನು ನಿನಗೆ ಪ್ರೀತಿಯ ಧಾರೆಯನ್ನು ಎರೆದು ನನ್ನ ಜೀವಕಿಂಥ ಹೆಚ್ಚು ಇಷ್ಟ ಪಡುತ್ತೇನೆ. ನೀನು ನೆರೆ ಯಾರನ್ನಾದರೂ ಇಷ್ಟ ಪಟ್ಟಿದ್ದಾರೆ All the Best, ಆದರೆ ಅವನು ಸಿಗಲಿಲ್ಲ ಎಂದರೆ ನಾನು ನಿನಗಾಗಿ ಕಾದಿರುವೆ...!!
ನನಗೆ ಯಾವುದೇ expectation ಇಲ್ಲ, ನನ್ನ ಮನದ ಮುಗಿಲ್ಲಲ್ಲಿ ನಿನ್ನ ಮೊಹಬ್ಬತ್...!! ನಿನ್ನ ಉತ್ತರಕ್ಕಾಗಿ ಕಾಯುವೆ..!!


ಮೂರು ವರ್ಷದ ನಂತರ, ಈ ನನ್ನ ಮೊದಲ ಪತ್ರ'ವನ್ನು ಮತ್ತೆ ಓದಿ ನೋಡಿದೆ. ಕಣ್ಣ ಹನಿ permission ಇಲ್ಲದೆ ಮುಖದಿಂದ ಜಾರಿತು. ಓದುವುದನ್ನು ignore ಮಾಡಿ, ತುಂಬಾ intelligent ಆಗಿದ್ದ ನಾನು, average Engineer ಆಗಿ ಹೊರಬಿದ್ದೆ. ನಿನ್ನ ಪ್ರೀತಿ ಇಂದಿಗೂ ನನಗೆ ಸಿಗಲ್ಲಿಲ್ಲ. ಆದ್ರೆ ಹುಡುಗಿ ನೀನು ನನ್ನ ಸ್ಪೂರ್ತಿ, ಇಂದಿಗೂ ನಾನು ನಿನ್ನ ಪ್ರೀತಿಯಲ್ಲಿ ಇರುವೆ, ಆದರೆ now I am intelligent. More matured and more responsible. ನೀನು ಹೊಸಬದುಕಿನಲ್ಲಿ ಹೊಸ ಆನಂದ'ದಿಂದ ಇದ್ದರೆ ನನಗೆ ಅದೇ ಖುಷಿ.
ಇಂತಿ ನಿನ್ನ ಪ್ರೀತಿಯ....

Sunday, March 14, 2010

ಭಾರತೀಯರು ರಾತ್ರಿ ಕೂಡಾ ತ್ರಿವರ್ಣ ಧ್ವಜವನ್ನು ಹಾರಿಸಬಹುದಾಗಿದೆ...!!

 ನಸು ಮುಂಜಾನೆಯಲ್ಲಿ ಧ್ವಜವನ್ನು ಹಾರಿಸಿ, ಸಂಜೆ ೬ ಘಂಟೆಗೆ ಧ್ವಜವನ್ನು ಕೆಳಗಿಳಿಸಬೇಕು. ಇದು ನಮ್ಮ ಭಾರತೀಯ ಧ್ವಜದ ಬಗೆಗಿನ ನೀತಿ-ಸಂಹಿತೆ. ಆದ್ರೆ ಇತ್ತೀಚಿನ ಬೆಳವಣಿಗೆ ಒಂದರಲ್ಲಿ ಹೊರಬಿದ್ದ ಮಹತ್ವದ ತೀರ್ಮಾನ ಒಂದರಲ್ಲಿ ಭಾರತೀಯ ಮುಖ್ಯ ನ್ಯಾಯಾಧೀಶರು, ಇನ್ನು ಮುಂದೆ ಭಾರತೀಯರು ನಡು ರಾತ್ರಿಯಲ್ಲೂ ಧ್ವಜವನ್ನು ಹಾರಿಸಬಹುದು, ಆದರೆ...ಆದರೆ..ಹೀಗೆ ಧ್ವಜ ಹಾರಿಸಬೇಕಾದರೆ ಧ್ವಜಸ್ತಂಭವು ತುಂಬಾ ಉದ್ದವಾಗಿರಬೇಕು ಹಾಗೂ ಧ್ವಜವೂ ಪ್ರಕಾಶಮಾನವಾಗಿರಬೇಕು.
ಉದ್ಯಮಿಯಾದ ನವೀನ ಜಿಂದಾಲ್ ಅವರು ೧೯೯೦ರಲ್ಲಿ ಈ ಬಗ್ಗೆ ಕೋರ್ಟ್ ನಲ್ಲಿ ವಾದವನ್ನು ಮಂಡಿಸಿ ಜಯಗಳಿಸಿದ್ದರು. ಭಾರತದ ಧ್ವಜ ಹಾರಿಸುವುದು ಪ್ರತಿಯೊಬ್ಬ ಪ್ರಜೆಯ ಹಕ್ಕು ಎಂಬುದು ಅವರ ವಾದವಾಗಿತ್ತು. ಆದಾಗ್ಯೂ, ಜಿಂದಾಲ್‌ ಅವರ ವಾದವನ್ನು ಒಪ್ಪಿಕೊಂಡ ಕಾಂಗ್ರೆಸ್‌ ನೇತಾರರು  ಸಂಸತ್ ಸದಸ್ಯರು ಹಾಗು ಸಚಿವರು ಎತ್ತರದ ಪ್ರಕಾಶಮಾನವಾಗಿರುವ ಸ್ಥಳದಲ್ಲಿ ರಾಷ್ಟೀಯ ಧ್ವಜವನ್ನು ಹಾರಿಸುವುದು ತಪ್ಪಿಲ್ಲ ಎಂದು ಒಪ್ಪಿಗೆ ನೀಡಿದರು. ಇದನ್ನು ಇನ್ನು ಮುಂದೆ ವಿಶ್ವದ ಯಾವ ಸ್ಥಳದಲ್ಲಿಯದರು ಸರಿ, ೧೦೦ ಅಡಿ ಎತ್ತರದ ಸ್ಥಳದಲ್ಲಿ ರಾಷ್ಟೀಯ ಧ್ವಜವನ್ನು ಹಾರಿಸ ಬಹುದು.

Friday, March 5, 2010

ಹೀಗೆ ಒಂದೆರಡು ಮಾತು ..!!

Love failure ಎಂದರೆ.....


ಅವಳದೇ ನೆನಪಲ್ಲಿ ನಡುರಾತ್ರಿ ೩ ಘಂಟೆಗೆ ಎದ್ದು,
Cigarette ಸೇದುವುದಾ..??
ಸಿಗುವುದಿಲ್ಲ ಎಂದು ಗೊತ್ತಿದ್ದರೂ,

ಸಿಗುವಳು ಎಂಬ ಆಸೆಯಲ್ಲಿ ಬದುಕುವುದಾ..??
ನಾನೇನು ಮೋಸ ಮಾಡಿದೆ, ನೀನು ನನಗೇಕೆ ಹೀಗೆ ಮಾಡಿದೆ...
ಎಂದು ವಿನಾ ಕಾರಣ ದೇವರನ್ನು ದೂರುವುದಾ..??

ಪದೇ ಪದೇ ಮುಂಗಾರು ಮಳೆ ಸಿನಿಮಾ ನೋಡುವುದಾ...??
ಉತ್ತರವಿಲ್ಲದ ಪ್ರಶ್ನೆಗೆ ಪದೇ ಪದೇ ನನ್ನಲ್ಲಿಯೇ ಪ್ರಶ್ನಿಸುವುದಾ..??
>>>>>>>>>>>>>>>>>>>>>>>>>>>>>

ನನ್ನ ಮತ್ತು ಅವಳ ಕಥೆ:

ದೂರದಲ್ಲಿ ಕಂಡಳು., ಹತ್ತಿರಕ್ಕೆ ಬಂದಳು.;
ನನ್ನ ನೋಡಿ ನಕ್ಕಳು., ನಮಗೀಗ ಇಬ್ಬರು ಮಕ್ಕಳು...!!
>>>>>>>>>>>>>>>>>>>>>>>>>>>>>
 
ಮಗ: "ಅಪ್ಪ ಪಕ್ಕದ ಮನೆ ಹುಡುಗಿಗೆ English ಬರಲ್ಲ."
ಅಪ್ಪ: ಅದ್ಹೇಗೋ ಹೇಳ್ತಿಯಾ ? ಯಾಕೆ ಏನಾಯ್ತು ?
ಮಗ: "'Give me a sweet kiss' - ಅಂದಿದ್ದಕ್ಕೆ ಕಪಾಳಕ್ಕೆ ಹೊಡೆದಳು..!!"
>>>>>>>>>>>>>>>>>>>>>>>>>>>>>
 
ಗಲಾಟೆ ಮಾಡುತ್ತಿದ್ದ ಮಗನಿಗೆ ಅಪ್ಪ ಹೇಳಿದ: ಲೋ ಮಗನೇ ದೊಡ್ಡವರ ಮುಂದೆ silent'ಆಗಿ ಇರಬೇಕು ಅಂತ ಗೊತ್ತಿಲ್ಲವೇನೋ..??
ಮಗ: Sorry ಅಪ್ಪ, ನನಗೀಗ ಚನ್ನಾಗಿ ಅರ್ಥ ಆಯಿತು.
ಅಪ್ಪ: ಏನು ಅರ್ಥ ಆಯಿತು ನಿನ್ನ ತಲೆ..!?!
ಮಗ:  ಅಮ್ಮ ನಿನಗಿಂತ ದೊಡ್ಡವಳು'ಎಂದು ...!!
>>>>>>>>>>>>>>>>>>>>>>>>>>>>>
 
ಹೆಂಡತಿ: "ರೀ ಈ ವಾರು daily ಸಿನೆಮಾಗೆ ಹೋಗೋಣ, ಮುಂದಿನ ವಾರ shopping ಹೋಗೋಣ, ಆಮೇಲೆ....
ಗಂಡ: "..ಆಮೇಲೆ ಮೂರನೇ ವಾರ ದೇವಸ್ಥಾನಕ್ಕೆ ಹೋಗೋಣ...ಭಿಕ್ಷೆ ಬೇಡೋಕ್ಕೆ..!!"
>>>>>>>>>>>>
 
ಭಾರಿ ಒಡವೆಗಳನ್ನು ಹಾಕಿಕೊಂಡು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ನಾರಿ'ಯನ್ನು ನೋಡಿ, ಗುಂಡ ಹೇಳಿದ., "ಇವಳೇನು ನಾರಿಯೋ ಒಡವೆಗಳ ಲಾರಿಯೋ.."
>>>>>>>>>>>>>>>>>>>>>>>>>>>>>

Thursday, March 4, 2010

ನನ್ನ ಪ್ರೀತಿಯ ಚೆಲುವೆ..!!

ಸದಾ ಒತ್ತಡದಲ್ಲಿ, ಅಥವಾ ಇಲ್ಲ-ಸಲ್ಲದ ಸುತ್ತಾಟದಲ್ಲಿ ಓದು ಬರಹ ಕಡೆಗಣಿಸಿದೆ ಎನಿಸುತ್ತದೆ. ನಾನೊಬ್ಬ ಹವ್ಯಾಸಿ ಬರವಣಿಗೆಗಾರನಲ್ಲ. (ಮನಸ್ಸಿಗೆ ಬಂದದ್ದನ್ನು ಬರೆದು ಬರವಣಿಗೆಯ ಮೇಲೆ ಸೇಡು ತೀರಿಸಿಕೊಳ್ಳುವುದೆಂದರೂ ತಪ್ಪಿಲ್ಲ.) ಬರವಣಿಗೆ ಎಂಬುದು ನನಗೆ ಹೇಗೆ ಬಂತು, ಯಾಕೆ ಬರೆಯುತ್ತಿದ್ದೇನೆಂಬುದಂತೂ ನನಗೆ ತಿಳಿದಿಲ್ಲ. ನಾಲ್ಕು ಅಕ್ಷರ ಗೀಚುವುದು, ಅದನ್ನು ನಿಮ್ಮ ಮುಂದಿಟ್ಟು response ಹೇಗಿದೆ ಅಂತ wait ಮಾಡಿ ನೋಡೋದು. ಒಮ್ಮೊಮ್ಮೆ ಹುಚ್ಚನಂತೆ ಅಥವ ಹುಚ್ಚುಹಿಡಿದವನಂತೆ ಮಾತನಾಡುವುದು.... ಈ ನನ್ನ ಮೊದಲ ಲೇಖನ ನಿಮ್ಮೆಲ್ಲರಿಗೂ ಇಷ್ಟವಾಗಿದೆ ಎಂದು ಭಾವಿಸುತ್ತೇನೆ....!!!!!


ಎಲೆ ನನ್ನ ಹುಡುಗಿ ... ನೀನು ತಡವಾಗಿ ಪರಿಚಯವಾದೆ ಅಂತ ಸಿಟ್ಟೇನಿಲ್ಲ

ತುಂಬಾ ಖುಷಿಯಾಗುವುದು ನಂಗೆ ನಿನನ್ನು ಕಂಡು!

ಪ್ರೀತಿಯ ಬಗ್ಗೆ ಮಾತನಾಡಿದರೆ, ಏನೇನ್ದುಕೊಳ್ಳುವೆಯೋ ಎಂಬ ಸಂಶಯ ನನಗೆ.,

ಸಲುಗೆಯ ಭರವಸಇಂದ ಬರೆದಿರುವೆ, ತಪ್ಪು ಕಂಡಲ್ಲಿ ಮುನುಸಿಕೊಳ್ಳ ಬೇಡ ಗೆಳತಿ.. please..!!

ನನ್ನ ಪ್ರೀತಿಯ ಚೆಲುವೆಯೇ,

ನನ್ನ ಮನದ ಸೌಂದರ್ಯವೇ..!!

ನಿನಗೊಂದು sweet good morning, ಇನ್ನು ಬೆಳಗಾಗುವುದಕ್ಕೆ ಕೆಲವೇ ನಿಮಿಷ. ನೀನಿನ್ನೂ ಬಣ್ಣದ ಚಿತ್ರವಿರುವ, ಅಗಲವಾದ bedsheet ಕೆಳಗೆ ಮೊಲದಂತೆ ಮುದುಡಿ ಮಲಗಿರುತ್ತಿ. ಇನ್ನೆಷ್ಟು ಹೊತ್ತು,.? ಏಳು ಪುಟ್ಟ ಬೆಳಗಾಯಿತು. ಹಾಲಿನವಳು ಬರುವ ಹೊತ್ತಾಯಿತು..! ಬಿಸಿಯಾದ ನೀರು ಸ್ನಾನಕ್ಕೆ  ready ಆಗಿದೆ. ನಿದ್ದೆ ಕಣ್ಣಿನಲಿ ಎದ್ದು ಬಚ್ಚಲಲ್ಲಿ ಜಾರಿ ಬೀಳಬೇಡ ಹುಷಾರು...!!.......!!!!!

ಯಾಕೋ ಇವತ್ತು ಬೆಳಿಗ್ಗೆ ನನಗೆ ನಿನ್ನ ನೆನಪು ಮತ್ತೆ ಕಣ್ಣು ಮುಂದೆ ಬಂತು. 

ಬೀದಿ ದೀಪದ ಬೆಳಕಿನಲ್ಲಿ ನೀನು ಸರಸರನೆ ನಡೆದು ಬರುತ್ತಿದ್ದರೆ ನಾನು ನಿನ್ನ ಕಾಲ ಕೆಳಗಿನ ಮರಳಗಬೇಕೆನಿಸಿತು., ಮರುಕ್ಷಣವೇ ಮನೆಯ ಮುಂದಿನ Road ನೋಡಿ ಬರಿ ಕಲ್ಲು ಮುಳ್ಳು,  ಅಷ್ಟೊಂದು ಪ್ರೀತಿ ಒಳ್ಳೆಯದಲ್ಲ ಅಂತ ಅನ್ನಿಸುತ್ತಿತ್ತು. he he he ಅದಾದಮೇಲೆ ಇಬ್ಬರ ಮಾತುಗಳು ಮೌನವದವು, ಮನಸು ಹಪಹಪಿಸ ತೊಡಗಿದವು. ಆದರೆ ಯಾಕೋ ದಿನಗಳು ಮತ್ತೆ ಅಸಹನೀಯವಾಗಿಬಿಡುತ್ತಿವೆ, ಎಷ್ಟು ಬೇಡ ಅಂದ್ರು ಮತ್ತೆ ನಿನ್ನ ನೆನಪು ನನ್ನನ್ನು ಕಾಡುತಿದೆ.

ಅದೆಷ್ಟು ಚೆಂದನೆಯ ದಿನಗಳು ಅವು. ನೀನು ಹಾಡು ಹಾಡುತ್ತಿದ್ದೆ, ಹಾಡಿನ ಭಾವ ನನ್ನದಾಗಿತ್ತು., ಮಾತು ಇರದೇ ಇದ್ದರು ಎಷ್ಟು ಮಾತಾಡುತ್ತ ಇದ್ದೆವು.

ಅಂದು ನಿನ್ನ ಬಗ್ಗೆ ಅಷ್ಟೊಂದು ಪ್ರೀತಿ ಇಟ್ಟುಕೊಂಡಿದ್ದ ನನ್ನ ಮನಸು ನಿನ್ನ ತುಂಬಾ miss ಮಾಡಿಕೊಂಡಿತ್ತು. ನೀನು ದೂರ ಹೋದ ಮೇಲೆ ಒಮ್ಮೆ ಯಾಕೋ ನಿನ್ನ ಮಾತನಾಡಿಸಬೇಕು ಅನ್ನಿಸಿತು. ಆದರೆ ಭಯ...  ಕೊನೆಗೆ ನಿನ್ನ ನೋಡುವ ಬಯಕೆಯ ಅಲೆಯಲ್ಲಿ, "ಪ್ರೀತಿ" ಎಂಬ ಬಲೆಯಲ್ಲಿ ಬಿದ್ದೆ., ಅಲ್ಲಿಂದ ನಾನು ಎಷ್ಟು ಕಾಲು ಜಾರಿ ಬಿದ್ದೆ ಎಂದು ನಿನಗೆ ಗೊತ್ತಿದೆ ಬಿಡು.. ಮತ್ತೆ ನಾನು ಜೀವನದ ಬಗ್ಗೆ serious'ಆಗಿ think ಮಾಡಲು ತುಂಬಾ ದಿನಗಳು ಬೇಕಾಯ್ತು..!!

ಸಂಭಂಧಗಳು ಗಾಳಿಪಟದಂತೆ ಜಂಗಾಡುವುದು ನನಗೆ ಇಷ್ಟವಿಲ್ಲ, "ಜೀವನದ ಮಹತ್ವವೇ ತಿಳಿಯದ ನನಗೆ ಪ್ರೀತಿಯ ಮಹತ್ವ ಹೇಗಾದರೂ ತಿಳಿದೀತು ಹೇಳು? ಜೀವನ ಬಂದ ನಂತರ ಬಂದದ್ದಲ್ಲವೇ ಪ್ರೀತಿ?" ನನ್ನ ಮನಸು ಹೀಗೆ ನನ್ನ ಕೇಳುತ್ತಿತ್ತು. ವರುಷಗಳ ನಂತರ ಮತ್ತೆ ನೀನು ನನಗೆ ವರವಾಗಿ ಸಿಕ್ಕಿದೆ... ಇಷ್ಟೊಂದು ವರ್ಷಗಳ ನಂತರ ನಿನ್ನ ಮಾತಾಡಿಸಿದ್ದು ತುಂಬಾ ಖುಷಿಯಾಯಿತು. ನಿನ್ನ ನಗು, ನಿನ್ನ ಪಟ-ಪಟ ಮಾತು ಎಲ್ಲ ನನಗೆ ಇಷ್ಟ ಆಯಿತು. ಮತ್ತೆ ಇನ್ನನ್ನು miss ಮಾಡ್ಕೊತೀನಿ ಅನ್ನೋ ಭಯನು ಇತ್ತು... I was very concious when speaking to you. ನಿನಗೆ ಹೆದರಿ ನಿನ್ನ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸುತಿದ್ದೆ, ಮೊಬೈಲ್ ನಲ್ಲಿ ಮಾತಾಡುವಾಗ ತುಂಬಾ practical'ಆಗಿ ಮಾತಾಡುತ್ತಿದ್ದೆ.

ಇಂದಿಗೂ ನನಗೆ ಹಾಗು ನನ್ನ ಮನಸ್ಸಿಗೆ ಅರ್ಥವಾಗದ್ದು ಎಂದರೇ, ನಿನ್ನ ಮನಸ್ಸಲ್ಲಿ ಏನಿತ್ತು? ನನ್ನನ್ನು ಅಷ್ಟು ವರ್ಷ ದೂರ ಮಾಡುವ ಅನಿವಾರ್ಯತೆಯಾದರೂ ಏನಿತ್ತು? ನನ್ನ್ನ ಬಗ್ಗೆ ನಿನಗೆ ಕೊಪವಿದ್ದರೆ ಕ್ಷಮಿಸು.. ಹಾಗೆ ನಿನ್ನ ತಪ್ಪು ಇದ್ದರೆ ಒಪ್ಪಿಕೊ... ಎರಡು ನಿನಗೆ ತಿಳಿದಿದೆ...!!

ಈಗ ಮತ್ತೆ ..... ವರ್ಷಗಳು ಆಗಿವೆ, ಆದ್ರೆ ನನಗೆ ನಿನ್ನ ಬಗ್ಗೆ ಇರುವ ಪ್ರೀತಿ, ಒಲವು, ಯಾಕೋ ಇನ್ನು ಕಡಿಮೆ ಆದಂತೆ ಕಾಣುತ್ತಿಲ್ಲ.. ನಮ್ಮ ನಡುವಿನ ಸಂಬಂಧ ಏನು, ಯಾಕೆ ನೀನು ನನಗೆ ಇಷ್ಟೊಂದು ಇಷ್ಟ...?? ಇದು ನಿಘೂಡ ಪ್ರಶ್ನೆ..?? ಇದು ಪ್ರಶ್ನೆ'ಯಾಗಿ ಇದ್ದರೆ ಒಳ್ಳೇದು, ನಮ್ಮಿಬ್ಬರ ನಡುವೆ ಯಾವ relationship ಇರೋದಕ್ಕೆ ಆಗಲ್ಲ, ಇದ್ದರೆ ಅದು ನನಗಂತೂ ಬೇಡ.

ನಿಜ ಹೇಳಿದರೆ ನಿನಗೆ ಬೇಸರ ಆಗಬಹುದು, ಆದರೆ you know it very well that I like you. ಇದನ್ನು ತಪ್ಪಾಗಿ ತಿಳಿಯಬೇಡ. ಇಷ್ಟು ದಿನಗಳ ಮೇಲೆ ನನಗೆ ನಿನ್ನ ಮೇಲೆ "ಪ್ರೀತಿ" ಎಂಬುದು ಹುಟ್ಟಿಲ್ಲ. ಆಳವಾದ ಮನದಲ್ಲಿ ನಿನ್ನ ಬಗ್ಗೆ ನನ್ನಲ್ಲಿ ಒಳ್ಳೆ ಅಭಿಪ್ರಾಯವಿದೆ ಅಷ್ಟೇ. ಇವತ್ತು ನಸು ಮುಂಜಾನೆಯಲ್ಲಿ ಯಾಕೋ ಇದೆಲ್ಲ ನನ್ನ ತಲೆಗೆ ಬಂತು., ಕೆಲಸ ಮಾಡಲು ಬೇಸರವಾಗಿತ್ತು, ಹಾಗೆಯೇ ನಿನಗೆ ಹೇಳಲೋ ಬೇಡವೋ ಎಂಬ ಭಯವು ಕಾಡಿತ್ತು. ಇಷ್ಟು ವರ್ಷದ ವರೆಗೂ ನನ್ನನು ನೆನಪಿಟ್ಟುಕೊಂಡ ನೀನು 70 ವರ್ಷದ'ವರೆಗೂ ನನ್ನ ಮರೆಯುವುದಿಲ್ಲ ಎಂಬುದು ನನಗೆ ಗೊತ್ತು.. :-) :-)

ಇನ್ನು ಬರೆಯುವ ಹಂಬಲ ಇದೆ ಆದರೆ ಅತಿಯಾದರೆ ಒಳ್ಳೆಯದಲ್ಲ...
ಯಾಕೋ ಮುಗಿಸೋಕ್ಕೆ ಮುಂಚೆ ಯಾರೋ ಹೇಳಿದ ಮಾತು ನೆನಪಿಗೆ ಬಂತು "Absence makes the heart grow fonder" ನಿಜ ಅನಿಸ್ತಿದೆ ಅಲ್ಲಾ?
ಸರಿ ಊಟಕ್ಕೆ ಹೊರಡೊ ಟೈಮ್ ಆಯಿತು ನಾನು ಬರ್ತೇನಿ..!!

Regards,
ಅವಿನಾಶ್.