Monday, March 29, 2010

ಬಂಡಿಯ ಗಾಲಿಯು ಮುರಿದಾಗ...

April ತಿಂಗಳ ಎರಡನೇ ಭಾನುವಾರ ಅಂದು. ನಾನು ಎಂದಿನಂತೆ ತಡವಾಗಿ ಎದ್ದು, ತಿಂಡಿ ತಿಂದು, ಸ್ನಾನ ಮಾಡಿದೆ. ಮಧ್ಯಾಹ್ನದ ಬಿಸಿಲು ನೋಡಿ ಎಲ್ಲೂ ಹೊರಗೆ ಹೋಗಲು ಮನಸಾಗಲಿಲ್ಲ. ಹಾಗೆ ತಣ್ಣನೆಯ ನೆಲದ ಮೇಲೆ ಮಲಗಿ FM ಕೇಳುತ್ತಿದ್ದೆ. ಮುಂಗಾರು ಮಳೆ ಭರ್ಜರಿ ಯಶಸ್ಸಿನ ಕಾಲವದು, ಎಲ್ಲಿ ಕೇಳಿದರು ಮುಂಗಾರು ಮಳೆ ಹಾಡುಗಳೇ. ಹೀಗೆ ಹಾಡು ಕೇಳುವಾಗ, mobile phone ರಿಂಗ್ ಕೇಳಿಸಿತು. ಎದ್ದು ಹೋಗಿ phone receive ಮಾಡುವಷ್ಟರಲ್ಲಿ 2 missed call ಮುಗಿದು, 3 'ನೆ ರಿಂಗ್... ಸೋಮಾರಿತನದಿಂದ ನಾನು hello ಎಂದಕೂಡಲೇ, "ಹಲೋ Avi, ಏನೋ ಮಾಡ್ತಾ ಇದ್ದೀಯ ? ನಾನು ನಿನ್ ಹತ್ರ ಸ್ವಲ್ಪ ಮಾತಾಡಬೇಕು..ಯಾಕೋ ತುಂಬಾ ಬೇಜಾರು ಕಣೋ..!" ಹೀಗೆ ಮಾತು ಮುಂದುವರೆಯಿತು. ಅವಳು ನನ್ನ ಸ್ನೇಹಿತನ girl frnd. ಆಗಾಗ ಅವರಿಬ್ಬರ ನಡುವೆ ಅಲ್ಪ-ಸ್ವಲ್ಪ ಜಗಳ ನಡೆಯುತ್ತಿತ್ತು. ಅಂದು phone'ನಲ್ಲಿ ಮಾತಾಡುವಾಗ ಅವಳದು ಮತ್ತೆ ಅದೇ ರಾಗ. "ನಾನು ಅವನ ಜೊತೆ ಮತ್ತೆ ಜಗಳವಾಡಿದೆ. ಇತ್ತೀಚಿಗೆ ಯಾಕೋ ತುಂಬಾ suspect ಮಾಡ್ತಾನೆ ಕಣೋ, ನನಗೆ ಅವನ ಜೊತೆ ಇರೋಕೆ ಆಗಲ್ಲ, I can't continue with him anymore. ಏನ್ ಮಾಡ್ಲಿ Avi ? ನಂಗೆ ಏನು ಮಾಡ್ಲಿ ಅಂತ ಗೊತ್ತಾಗ್ತಿಲ್ಲ, ನಾನೇನು ತಪ್ಪು ಮಾಡಿದಿನಿ ಹೇಳು ?" ಅವಳ ಆ ಮುಗ್ಧ ಪ್ರಶ್ನೆಗೆ ನನ್ನಿಂದ ಉತ್ತರ ಕೊಡಲು ಆಗಲಿಲ್ಲ. "ತಲೆ ಕೆಡಿಸಿ ಕೊಳ್ಳ ಬೇಡ ಪುಟ್ಟ, U r doing good, ಅದು ಅವನಿಗೆ ಅರ್ಥ ಆಗ್ತಾ ಇಲ್ಲ ಅನ್ನಿಸತ್ತೆ, ಇಬ್ಬರು ಮಾತಾಡಿ, issue will be resolved." ಎಂದು ವಿಷಯ ಏನು ಎಂದು ತಿಳಿಯದೆ ಅವಳಿಗೆ ಸಮಾಧಾನ ಮಾಡುತ್ತಿದ್ದೆ. 10-20 ನಿಮಿಷ ಹೀಗೆ ವಿಷಯ ತಿಳಿಯದೆ ಸಮಾಧಾನ ಮಾಡಿ ನಂತರ joke ಮಾಡುತ್ತ ಅವಳನ್ನು ನಗಿಸುತ್ತಿದ್ದೆ. ಅಲ್ಲಿಗೆ ಅವಳ mood ಸರಿಹೋಗುತ್ತಿತ್ತು.
ಸಂಜೆ ನನ್ನ ಗೆಳೆಯ ಬಂದು "ಲೇ ಮಗಾ, ಏನೋ ಮಾಡ್ಲಿ ಇವಳಿಗೆ, ಹೇಳಿದ್ದು ಒಂದು ಸ್ವಲ್ಪನೂ ಅರ್ಥ ಆಗಲ್ಲ, ಯಾವ ರೀತಿ ಹೇಳಬೇಕು ಇವಳಿಗೆ......" ಅವನು ಹೀಗೆ ತನ್ನ girl frnd ಬಗ್ಗೆ ರಾಗ ಎಳೆಯುತ್ತಿದ್ದ. ಅವರ ಜಗಳದ ವಿಷಯ ಏನು ಅಂತ ತಿಳಿದಿದ್ದರೂ ನಾನು ಸುಮ್ಮನೆ ಇರಬೇಕಿತ್ತು, ಯಾಕೆಂದರೆ, ನನಗೆ ಇವನು ತುಂಬಾ close friend, ಅವಳ ಬಗ್ಗೆ ತಂಗಿ ಅನ್ನೋ soft corner. ಜಗಳಕೆ ಸಂಬಂಧವಿಲ್ಲದಂತೆ ಒಂದೆರಡು ಮಾತಾಡಿ ಇಬ್ಬರಿಗೂ compromise ಮಾಡುತ್ತಿದ್ದೆ. ಇಬ್ಬರು ಜೊತೆಯಲ್ಲಿ ಇದ್ದಾಗ ಆಹಾ ಅಪೂರ್ವ ಜೋಡಿ, ಆದರೆ ಜಗಳ ಮಾಡಿ ಮುನಿಸಿಕೊಂಡಾಗ ತುಂಬಾ ವಿಚಿತ್ರ.  ಒಂದು ದಿನ ಅವಳು call ಮಾಡಿ ಮತ್ತೊಂದು ಮಹಾ-ಜಗಳದ ಬಗ್ಗೆ ಹೇಳಿದಳು. ನಾನು ನನ್ನದೇ ಶೈಲಿಯಲ್ಲಿ ಅವಳನ್ನು ಸಮಾಧಾನ ಪಡಿಸಿದೆ. ನನ್ನ ಗೆಳೆಯನನ್ನು ಅದೇ ರೀತಿ ಸಮಾಧಾನ ಪಡಿಸಿದೆ. ಇಬ್ಬರನ್ನು meet ಮಾಡಲು ಹೇಳಿದೆ. ಅಷ್ಟೊಂದು ತಲೆಬಿಸಿ ಎಬ್ಬಿಸಿದ ಇವರ ಜಗಳದ ಮಧ್ಯದಲ್ಲಿ ಅವಳು "gol-gappa" ತಿನ್ನುವ ಆಸೆ ತೋರಿದಳು. ಇದನ್ನು innocence, ಅನ್ನಬೇಕೆ...?? ಅಥವಾ ಅವಳು joke ಮಾಡ್ತಾ ಇದ್ಳ.??

ಎಷ್ಟೋ ಬಾರಿ ಈ ರೀತಿ ನಡೆದ ನಂತರ, ನನಗೆ ಇದರ ಬಗ್ಗೆ ಸಾಕಾಗಿ ಹೋಗಿತ್ತು. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ, ಇವನು ಹೇಳಿದ ಎಂದು ಅವಳ ಜೊತೆ ವಿಚಾರಣೆ, ಅವಳು ಹೇಳಿದಳೆಂದು ಇವನ ಜೊತೆ ವಿಚಾರಣೆ; ಇಬ್ಬರ ಆಟದ ನಡುವೆ ನಾನೊಬ್ಬ ಕೊತಿಯಂತಾಗಿದ್ದೆ. ಆದರು ಇಬ್ಬರು ಚನ್ನಾಗಿರಲಿ, ಇಬ್ಬರ ಈ ಜಗಳ ನಿಲ್ಲಲಿ ಎಂದು ಸದಾ ಮನದಲ್ಲಿ ಹರಸುತ್ತಿದ್ದೆ. ಸ್ವಲ್ಪ ದಿನಗಳ ನಂತರ, ಅವನ ಸಮಸ್ಯೆ ಅವನೇ ಪರಿಹರಿಕೊಳ್ಳುತ್ತೇನೆ ಎಂದು ನನ್ನ ಗೆಳೆಯ ನನ್ನನ್ನು ದೂರ ಇಟ್ಟಿದ್ದ. ನನಗೋ ಧರ್ಮಸಂಕಟ, ಇತ್ತ ಇವನು ಈ ವಿಷಯದಲ್ಲಿ ತಲೆ ಹಾಕಬೇಡ ಎಂದು ಹೇಳಿದ್ದಾನೆ, ಅತ್ತ ಅವಳು ನಾನು support ಮಾಡ್ತೀನಿ ಅನ್ನೋ ಭರವಸೆ ಇಂದ ಇದ್ದಾಳೆ. ನನ್ನ ಗೆಳೆಯನಿಗೆ ತಿಳಿಸದೇ, ನಾನು ಇವಳಿಗೆ ಎಷ್ಟೇ ಬುದ್ದಿ ಹೇಳಿದರೂ , ಇವಳ ತಲೆಯ ಒಳಗೆ ಹೋಗಲೇ ಇಲ್ಲ. ಅವಳಿಗೆ ಬುದ್ದಿ ಹೇಳಲು ಹೋಗಿ ನಾನು ಅವಳ ಮನದಲ್ಲಿ ಅವಳ enemy ಆಗಿ ಹೋದೆ.ಅವರಿಗೆ ಒಳ್ಳೆಯದಾಗುವುದಾದರೆ ನಾನು ಏನು ಮಾಡಲು ಸರಿ ಎಂದು, ಗೆಳೆಯನ ನಾಟಕದ ಮೂಲ ಪಾತ್ರ ವಹಿಸಿದೆ. ಅದರ ಪ್ರತಿಫಲದಿಂದ ಇಬ್ಬರು ಸ್ವಲ್ಪ ದಿನ ಚನಾಗಿದ್ದರು, ನಾನು ಅವರ ಪಾಲಿಗೆ ದೂರವಾದೆ.
ಈಗ ಅವರು ಹೇಗಿದ್ದಾರೆ ಎಂದು ನನಗೆ ಹೆಚ್ಚಾಗಿ ತಿಳಿದಿಲ್ಲ. ಒಮ್ಮೆ ಹೀಗೆ ಗೆಳೆಯನನ್ನು ನೋಡಬೇಕೆನಿಸಿ ಅವನ ಮನೆಗೆ ಹೊರಟೆ. ಸ್ವತಃ ಅವನ mobile'ಗೆ call ಮಾಡಿ ಹೊಸ ಮನೆಯ address ತಿಳಿದುಕೊಂಡೆ. ಇನ್ನೇನು ಅವನ ಮನೆಗೆ ಹೋರಾಡಬೇಕು ಎನ್ನುವಾಗ, ನನ್ನ mobile'ಗೆ ಒಂದು sms ಬಂದಿತು. ಅದು ನನ್ನ ಗೆಳೆಯನ sms. "ನೀನು ಮನೆಗೆ ಬಂದು ನನ್ನನ್ನು meet ಮಾಡಬೇಕು ಅಂತಿದ್ದರೆ ಬೇಗನೆ ಬಾ, ಆದರೆ 7'ಘಂಟೆಯ ಒಳಗೆ please ವಾಪಾಸ್ ಹೊರಡು, ಅವಳು ಬರುತ್ತಾಳೆ." ತಡೆಯಲಾಗದ ದುಃಖ, ಆದರೂ ಅವನ ಮನೆಗೆ ತೆರಳಿ, ಬೇಗನೆ ಹೊರಟು ಬಂದೆ. ನನಗೆ ಅವರಿಬ್ಬರೂ ಸಮಸ್ಯೆ ಬಗೆಹರಿಸಿಕೊಂಡವರ ಹಾಗೆ ಕಂಡಿತು. ಅವರ ಸಮಸ್ಯೆಗೆ ಮೂಲ ಕಾರಣ ಹುಡುಕುವ ಬದಲು, ನನ್ನ ಮೇಲೆ ಗೂಬೆ ಕೂರಿಸಿದರು. ನಾನು ಅವರ ತಿಕ್ಕಲುತನಕ್ಕೆ ದಾಳವಾಗಿದ್ದೆ. ನಾನು ಮನಸ್ಸಿನಲ್ಲಿಯೇ ಯೋಚನೆ ಮಾಡಿದೆ. ' ನನ್ನ ಹೆಸರುಹಾಳು ಮಾಡಿ, ಇವರು ತಮ್ಮ ಸಂಸಾರ ರಥ ಮುಂದುವರಿಯೋದಾದರೆ ನನ್ನ ಹೆಸರು ಹಾಳಾದರೂ ಪರವಾಗಿಲ್ಲ. ಇವರಿಬ್ಬರು ಚೆನ್ನಾಗಿರಲಿ.' ಎಂದು ತಲೆ ತಗ್ಗಿಸಿ ನಡೆದೆ.  ಬಂಡಿಯ ಗಾಲಿಯು ಮುರಿದಾಗ ತಲೆ ತಗ್ಗಿಸಿ ನಡೆಯಲೇ ಬೇಕು.

ಮುರಿದ ಆ 'ಬಂಡಿಯ ಗಾಲಿ' ಕಥೆಯನ್ನು ಮತ್ತೊಮ್ಮೆ ಓದಬೇಕೆನಿಸಿತು. ಅಂದು ಜಗಳವಾಡಿ ಕಿತ್ತಾಡಿ ಕೊಳ್ಳುತ್ತಿದ್ದ ಆ ಇಬ್ಬರು ಈಗ ಒಬ್ಬರು. ಅವರ ಮದುವೆ ಆಗಿ ಈಗ ಅವರ ಮುಖದಲ್ಲಿನ ಆ ನಗುವನ್ನು ನೋಡಲು ನನಗೆ ಖುಷಿಯಾಗುತ್ತದೆ. ಅದೇ ಪ್ರೀತಿ ಅದೇ ಕಿತ್ತಾಟದೊಂದಿಗೆ ನಗುತ ಬಾಳಿರಿ...!!! 

No comments:

Post a Comment