Wednesday, March 2, 2011

TV ಪುರಾಣ ...!!


ಅದೇನೋ ಕಣ್ರೀ 'ಚಟ' ಅನ್ನೋದು ಬಹಳ ಬೇಗ ಮೈಗೆ ಹತ್ತಿಕೊಂಡು ಬಿಡುತ್ತವೆ...ಅಯ್ಯೋ ಬೇರೆ ಯಾವ ಚಟದ ಬಗ್ಗೆನೂ ಹೇಳ್ತಾ ಇಲ್ಲ ಸ್ವಾಮಿ...ನನಗೆ ಇತ್ತೀಚೆಗೆ TV ನೋಡುವ ಚಟ ಹತ್ತಿಕೊಂಡು ಬಿಟ್ಟಿದೆ. ಮುಂಚೆ ಆದ್ರೆ cable connection ಹಾಕಿಸಿಕೊಂಡು ನಾಲ್ಕೈದು ಚಾನೆಲ್ ನೋಡ್ತಾ ಇದ್ವಿ...ಮುಂಡೇದು ಈಗಂತೂ ಯಾವ ಚಾನೆಲ್'ನಲ್ಲಿ ಏನ್ ಬರ್ತಾ ಇದೆ ಅಂತ ನೋಡೋದ್ರೊಳಗೆ ಒಂದು ಘಂಟೆ ಅಗಿಹೊಗಿರತ್ತೆ.

Channel'ಗಿಂತ ಅದ್ರಲ್ಲಿ ಬರೋ programme ಕಣ್ರೀ ವಿಶೇಷ..!!
ಕನ್ನಡ channel'ನಲ್ಲಿ ETV, Udaya, ಇದೆಲ್ಲ ನನ್ನ ಅಪ್ಪ-ಅಮ್ಮ'ನಿಗೆ ಪ್ರಿಯ. ಇನ್ನು TV9 ಬಗ್ಗೆ ನಿಮಗೆ ಹೇಳೋದೇ ಬೇಡ ಬಿಡಿ. ಪಕ್ಕದ್ ಮನೇಲಿ ನಡೆಯೋ ಸುದ್ದಿ ನಿಮಗೆ ಗೊತ್ತಿರತ್ತೋ ಇಲ್ವೋ, TV9'ನಲ್ಲಿ ಬಂದಿರತ್ತೆ. ಆದ್ರೆ ಈ TV9' ಹಾಗು News9 channel'ನಲ್ಲಿ ಅಲ್ಲಿಂದ-ಇಲ್ಲಿಂದ ತಂದು ಎಲ್ಲದನ್ನು ಬೆರೆಸಿ ಚಿತ್ರಾನ್ನ ಮಾಡಿ ಬಡಿಸೋಕೆ ಇಷ್ಟ ಪಡ್ತಾರೆ. 'ಹೀಗೂ ಉಂಟೆ' ಅಂತ ಹೇಳುವ style ತುಂಬಾ ಫೇಮಸ್ ಆಗಿದೆ, ನೀವು ಹೇಳಿದ್ದು ನಾವು ಕೇಳಿದ್ದು…! ಕಾರ್ಯಕ್ರಮದ 'ಶಿವನೆ ಶಂಬುಲಿಂಗ' ತುಂಬಾನೇ famous ಆಗಿದೆ.

ಸುವರ್ಣ channel ಬಗ್ಗೆ ಗೊತ್ತಾಗಿದ್ದು "ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು" ಶುರುವಾದಾಗಿನಿಂದ. ಅದು hit ಆಗಿದ್ದೇ ತಡ ಇವ್ರು ಅಲ್ಲಿಗೆ ಹೋದ್ರಅವ್ರು ಇಲ್ಲಿಗೆ ಬಂದ್ರು ಅಂತ ಒಂದಾದಮೇಲೆ ಒಂದು ಶುರು ಮಾಡಿ ಸಿಕ್ಕಾಪಟ್ಟೆ ಬೇಜಾರಗೊಯ್ತು.
Zee TV ಕನ್ನಡ ಸರಿಗಮಪ ಕಾರ್ಯಕ್ರಮದಿಂದ ಒಳ್ಳೆ ಹೆಸರು ಮಾಡಿತು. ಕಸ್ತೂರಿ channel ಸ್ವಾಮಿಗಳನ್ನ ಕರೆಯಿಸಿ, ಬೆಳೆಗ್ಗೆ'ಯಿಂದ ಅದನ್ನ ಮಾಡಿ ಒಳ್ಳೆಯದಾಗತ್ತೆ, ಇದನ್ನ ಮಾಡಿದರೆ ಕೆಟ್ತದಾಗತ್ತೆ ಅಂತ ಶುರು ಮಾಡಿ, ಈಗ ಅದೇ trend ಎಲ್ಲ 
channel'ನಲ್ಲೂ ಶುರುವಾಗಿದೆ.
ಇನ್ನು ನಮ್ಮ comedy channel "U2" ಬಗ್ಗೆ ಹೇಳೋದೇ ಬೇಡ ಬಿಡಿ, ಅದ್ರಲ್ಲಿ ಬರೋ anchor ಗಳನ್ನ ನೋಡೋದೇ ಸಿಕ್ಕಾಪಟ್ಟೆ comedy ಆಗಿರತ್ತೆ. Phone ಮಾಡೋರಿಂದ ಸ್ವಲ್ಪ comedy, ಅವ್ರ ಜೊತೆ ಮಾತಾಡೋರಿಂದ over-comedy.

ಹಿಂದಿ channel'ಗಳಲ್ಲಿ ಬಿಚ್ಚಮ್ಮ'ಗಳು ತುಂಬಾ ಇರ್ತಾರೆ. "Emotional Atyachaar" ಅಂತ, ಹುಡುಗ-ಹುಡುಗಿ'ನ ಹಿಂದೆ ಬಿಟ್ಟು ಅದು-ಇದು ಮಾಡಿಸಿ, ಕೊನೆಗೆ ಸಹಜ ಪ್ರೇಮಿಗಳನ್ನು loyalty test fail ಆಗಿದಿರ ಅಂತ ಜಗಳ ಹುಟ್ಟಿಸೋ ಕಾರ್ಯಕ್ರಮ. Colors channel'ನಲ್ಲಿ ಬರ್ತಾ ಇರೋ 'Big Boss' ಅಂತೂ ಅತಿ-ಜನಪ್ರಿಯ. ಈ ಬಾರಿ ಅದ್ಯಾರೋ 'Dolly' ಅಂತೆ.....ಅವಳದು ಬಾಯಿ ಅನ್ನೋದು ಬಚ್ಚಲು ಮನೆ ತಾರಾ ಕಣ್ರೀ..ಆವಕ್ಕ ಮಾತಾಡಿದರೆ channel'ನವರು beep ಮಾಡ್ತಾ ಇರಬೇಕು. ಇಷ್ಟು ಸಾಲದು ಅಂತ 'Big Boss'ಗೆ ನಮ್ಮ Pamela Anderson ಬರ್ತಾ ಇದಾರೆ, ಬಟ್ಟೆ ಹಾಕೋಬೇಕು ಅಂತ Pamela madam'ಗೆ ಅನ್ನಿಸೋದೇ ಇಲ್ಲವೇನೋ. Salman Khan shirt ಬಿಚ್ಚೋಕೆ famous..Pamela'ಅಕ್ಕ...ಬೇಡ ಬಿಡಿ....()
Zoom ಅಂತ ಇದೆ ನೋಡಿ channel- ಏನು Zoom ಮಾಡಿ-ಮಾಡಿ ವಿಷಯ ತೆಗಿತಾರೋ..ಅಬ್ಬಾ..!! ಯಾರಿಗೆ ಯಾರ ಸಂಬಂಧ, ಎಲ್ಲಿ break-up ಆಯಿತು, ಯಾರು ಯಾರನ್ನು ಮದುವೆ ಆಗಿದ್ರು, ಈಗ ಯಾರನ್ನು ಮದುವೆ ಆಗಿದಾರೆ...ಅಬ್ಬಾ, ತಾರೆಯರಿಗೆ ಗೊತ್ತಿಲ್ಲದೇ ಇರೋ ವಿಶಯ ಈ Zoom channel'ನವರಿಗೆ ಗೊತ್ತಿರತ್ತೆ.

ಕನ್ನಡ, ಹಿಂಡಿ, ತೆಲುಗು, ತಮಿಳು, ಯಾವ ಚಾನೆಲ್ ಹಾಕಿದರು, ಬಟ್ಟೆಗೆ ಬರ. 'ಮನಸಾರೆ' ಚಿತ್ರದ ಒಂದು character 'ಬಟ್ಟೆ ಇಲ್ಲ, ಬಟ್ಟೆ ಇಲ್ಲ' ಅಂತ ಕೂಗಾಡುವ ಹಾಗೆ, ಎಲ್ಲ ನಟ-ನಟಿ ಮಣಿಯರು ಬಟ್ಟೆ ಬಿಚ್ಚಿ TV ಮೇಲೆ ಬರಲು ಇಚ್ಛೆ ಪಡುತ್ತಾರೆ. ಹೀಗದ್ಮೇಲೆ ಯಾರಿಗೆ ತಾನೇ TV ನೋಡುವ ಚಟ ಜಾಸ್ತಿ ಆಗಲ್ಲ ಹೇಳಿ. ಸಿನಿಮಾ ನಟ-ನಟಿಯರು ಈಗ ಕಿರು-ತೆರೆಯಲ್ಲಿ ಮಿಂಚುತ್ತಾ ಇದ್ದರೆ. ನಮ್ಮ ಮಲ್ಲಿಕಾ ಶೆರಾವತ್ ಯಾವ ಅವತಾರದಲ್ಲಿ ಬರುತ್ತಾಳೋ ಕಾದು ನೋಡಬೇಕು.
ಇನ್ನು advertise'ಗಳ ಬಗ್ಗೆ ಹೇಳೋದೇ ಬೇಡ ಬಿಡಿ. ಹೊಸದೊಂದು advertisement ನೋಡಿದೆ..ಚಿಲ್ಲರೆ ಇಲ್ಲ ಅಂತ ಒಬ್ಬನಿಗೆ choclate ಕೊಟ್ಟು 'LAVA' mobile ಇದ್ದವನಿಗೆ ಅದೇನೋ ಕೊಟ್ಟರಂತೆ......!!! ಸಧ್ಯಕ್ಕೆ cricket ಜ್ವರ...!! ನಮ್ India  World Cup ಗೆದ್ದು ಬಿಟ್ಟರೆ ಅದೇ ಒಂದು ದೊಡ್ಡ ಸಹಾಸ...!!

ಈ TV ಬಗ್ಗೆ ಹೇಳ್ತಾ ಹೋದರೆ ಮುಗಿಯೋದೇ ಇಲ್ಲ ಬಿಡಿ....ನೀವೇನ್ ಹೇಳ್ತೀರಾ..??

Wednesday, November 24, 2010

ಲೈಫು ಇಷ್ಟೇನೆ...

ಲೈಫ್'ನಲ್ಲಿ ಪ್ರತಿ ವರ್ಷ ಒಂದು ಹುಡುಗಿಯ ಬಗ್ಗೆ ಯೋಚಿಸುತ್ತ ಪ್ರತಿ ವರುಷ ಒಬ್ಬ ಹೊಸ ಹುಡುಗಿಯ ಜೊತೆ ಓಡಾಡಿ, ಅವ್ಳು-ಬಿಟ್ಟು, ಇವ್ಳು-ಬಿಟ್ಟು ಇನ್ಯಾರು ಎನ್ನುತ್ತಾ, ಹೊಸ ಹೊಸ failure ಜೊತೆ ಹೊಸ-ಹೊಸ patho-song ಹಾಡ್ತಾ ಇರೋ ನಮ್ ಹುಡುಗರಿಗೆ ಏನ್ರಿ ಆಗಿದೆ..??
ಹುಡುಗಿಯರು ಅಂದ್ರೆ ಒಳ್ಳೆ BMTC bus ಆಗೋದ್ರು ನೋಡಿ. [ಹಾಗಂತ ಹುಡುಗಿಯರು ಏನು ಕಮ್ಮಿ ಇಲ್ಲ ಬಿಡಿ]. ಆದರು ಒಂದು ಮಾತಂತೂ ನಿಜ ಕಣ್ರೀ..




ಇಷ್ಟಪಟ್ಟ ಹುಡುಗಿಯ ಪ್ರೀತಿಯನ್ನು ಕಷ್ಟಪಟ್ಟು ಪಡೆದುಕೊಂಡಾಗ ಆಗುವ ಸಂತೋಷದ ನೂರು ಪಟ್ಟು ದುಃಖ ಅವಳನ್ನು ಕಳೆದುಕೊಂಡಾಗ ಆಗುತ್ತೆ. ಇದಕ್ಕಿಂತ ಇನ್ನು ದುಃಖ ಆಗೋದು ಆ ಹುಡುಗಿ "ನಿಂಗೆ ನನಗಿಂತ ಒಳ್ಳೆ ಹುಡುಗಿ ಸಿಕ್ಕೇ ಸಿಕ್ತಾಳೆ" ಅಂದಾಗ. ಆದ್ರೆ ಈಗ ಹೇಳ್ತಾ ಇರೋ ವಿಷಯನೇ ಬೇರೆ... ನಮ್ ಹುಡುಗರ ಲೈಫ್'ನಲ್ಲಿ  ಪೂರ್ಣ ವಿರಾಮ ಅನ್ನೋದೇ ಇಲ್ಲ..!!! ಹೇಗೆ ಅಂತೀರಾ ??? ಓದಿ ನೋಡಿ..


....college'ನಲ್ಲಿ ಹುಡುಗಿ smile ಕೊಟ್ಳು ಅಂತ ಹತ್ತಾರು friends'ಗೆ ಹೇಳಿ, ಎಲ್ಲರಿಗು ಸಣ್ಣ ಪಾರ್ಟಿ ಕೊಡಿಸಿ, ಅದೇ ಹುಡುಗಿ ಹಿಂದೆ ಬಿದ್ದು just-pass'ಆಗಿ college' ಮುಗಿಸಿ ಬೆಂಗಳೂರು ಮಹಾನಗರದಲ್ಲಿ ಪ್ರತಿದಿನ 30 ರೂ/- ಬಸ್ ಪಾಸ್ ಪಡೆದು ಊರೆಲ್ಲ ತಿರುಗಿ ಕೆಲಸ ಹುಡುಕಿ, ಸಣ್ಣದಾಗಿ room ಮಾಡಿ, urgent'ಆಗಿ ಒಬ್ಬ girl friend'ನ್ನು ಹುಡುಕಿ, ಮೊದಲ ಸಂಬಳ'ದಲ್ಲಿ ಅವಳಿಗೆ ಗಿಫ್ಟ್ ಕೊಡಿಸಿ, company job training ಮರೆತು ಅವಳಿಗೆ msg ಮಾಡುತ್ತ ವಾರ್ನಿಂಗ್ ಲೆಟರ್ ಪಡೆದು, ಸಂಜೆ meet ಮಾಡೋದು ಲೇಟ್ ಆಯಿತು ಅಂತ ಅವಳು ಗೊಣಗಿದಾಗ, ಬಸ್ ಸಿಗಲಿಲ್ಲ ಎಂದು ನೆಪ ಹೇಳಿ, ಸಣ್ಣ ಜಗಳ ಆಡಿ, ಜಗಳದ ಮಧ್ಯ ಅವಳು golgappa ಬೇಕು ಅಂದಾಗ, ಕಿಸೆಯಲ್ಲಿದ್ದ 20 ರೂ/- ಖಾಲಿ ಮಾಡಿ, ಸಂಜೆ ಊಟಕ್ಕೆ ATM  ಮುಂದೆ Q'ನಲ್ಲಿ ನಿಂತು, ಊಟ ಮುಗಿಸಿ, ಹುಡುಗಿ'ಯನ್ನು PG'ಗೆ ಬಿಟ್ಟು, room'ಗೆ ಹೋಗಲು ಬಸ್ ಸಿಗದೇ, 2km ನಡೆದು, ರಾತ್ರಿ ಘಂಟೆಗಟ್ಟಲೆ ಮೊಬೈಲ್'ನಲ್ಲಿ ಮಾತಾಡಿ, currency ಖಾಲಿ ಆಯಿತು ಅಂತ call ಕಟ್ ಆಗಿ, ಮರುದಿನ ಬೆಳೆಗ್ಗೆ ಆಫೀಸ್'ಗೆ ಲೇಟ್ ಆಯಿತು ಅಂತ ಯಾವುದೊ ಬಟ್ಟೆ'ಯನ್ನು ಏರಿಸಿ, ID card ಮರೆತು, ಕೆಲಸ ಸರಿಯಾಗಿ ಮಾಡದೆ, Gud mrng, coffee ಆಯ್ತಾ-ತಿಂಡಿ ಆಯ್ತಾ-ಏನ್ ಮಾಡ್ತಿದೀಯ-ಸಂಜೆ ಸಿಗ್ತೀನಿ-love u -miss u, ಅಂತ 20-30 msg ಕಳಿಸಿ, ಮರುದಿನ ಅದೇ ಶೆಟ್ಟಿ ಅಂಗಡಿಯ ಮುಂದೆ ನಿಂತು 100 ರೂ/- currency ಹಾಕಿಸಿ, ನಂತರ pre-paid'ನಿಂದ-post-paid'ಗೆ convert ಮಾಡಿಸಿ, ಪ್ರತಿ ತಿಂಗಳು 800-900'ರೂ/- bill pay maadi, Valentine day, B'thday, ಆ-day, ಈ-day ಅಂತ ವಾರಕ್ಕೊಂದು ಗಿಫ್ಟ್ ಕೊಟ್ಟು, ರೂಂ-mates ಹತ್ತಿರ ಸಾಲ ಮಾಡಿ, ಹುಡುಗಿಯ ಬಗ್ಗೆ ಅವಳ ಅಪ್ಪ-ಅಮ್ಮನಿಗಿಂತ ಹೆಚ್ಚಾಗಿ care ತೋರಿಸುತ್ತ, PVR, INOX'ನಲ್ಲಿ ಸಿನಿಮಾ ನೋಡಿ, ಗರುಡ ಮಾಲ್, ಫೋರುಂ, ನಂದಿ ಬೆಟ್ಟ ಅಂತ ಸುತ್ತಾಡಿ, ಅವರಿವರ bike'ನ್ನು ಕಾಡಿ-ಬೇಡಿ ಪಡೆದು, ಆ ಹುಡುಗಿಗೆ ಊರೆಲ್ಲ ಸುತ್ತಾಡಿಸಿ, ಅವಳಿಗೆ ಪಾಪ ಸಂಬಳ ಕಡಿಮೆ ಎಂದು ತಿಂಗಳ PG bill pay ಮಾಡಿ, ಅವಳ ಜೊತೆ ಅವಳ ಅಣ್ಣ-ತಮ್ಮನಿಗೂ ಹಬ್ಬಕ್ಕೆ ಬಟ್ಟೆ ಕೊಡಿಸಿ, ಆ ಹುಡುಗಿಯು ಯಾವುದೊ ಒಬ್ಬ ಹುಡುಗನೊಂದಿಗೆ ಮಾತಾಡಿದಳು ಅಂತ 'ಯಾರು-ಎಲ್ಲಿ-ಯಾಕೆ' ಅಂತ ಪ್ರಶ್ನೆ ಮಾಡಿ, phone call receive ಮಾಡಲಿಲ್ಲ ಅಂತ ಕೂಗಾಡಿ, ನೀನು ನನ್ನ avoid ಮಾಡ್ತಾ ಇದ್ದೀಯ, ಅದು-ಇದು ಅಂತ ದೊಡ್ಡ ಜಗಳ ನಡೆದು., ಆ ಜಗಳ'ವನ್ನ ಇನ್ನೊಬ್ಬ ಹುಡುಗಿಯ ಹತ್ತಿರ ಹೇಳಿ, ಅವಳು 'ನೀನ್ಯಾಕೆ ಪ್ರತಿ-ಸರಿ compromise ಆಗ್ತಿಯ' ಅಂತ ಹುಳಿ ಹಿಂಡಿ, ಇಬ್ಬರ ನಡುವೆ ಬಿರುಕು ಮೂಡಿಸಿದ ಇವಳು ಈ ಹುಡುಗನ ಹೊಸ girl friend,........ಪೂರ್ಣ ವಿರಮವಿಲ್ಲದೆ ಹಾಳಾಗುವ ಹುಡುಗನೊಬ್ಬನ ಕಥೆ ಇಷ್ಟಕ್ಕೆ ಮುಗಿಯುವುದಿಲ್ಲ, ಹೊಸ ಹುಡುಗಿಯ ಜೊತೆ ಹೊಸ ಕಹಾನಿ  ಶುರುವಾಗಿ-ಮುಗಿದು 2 ವರುಷದ ನಂತರ  March'ನಲ್ಲಿ ಮೊದಲ ಹುಡುಗಿಯ ಮದುವೆಗೆ ಹೋಗಿ, November'ನಲ್ಲಿ second ಹುಡುಗಿಯ ಮದುವೆ ಮಾಡಿ, ಈಗ ಯಾರು ಇಲ್ಲ ನಂಗೆ ಎಂದು ಗಡ್ಡ ಬಿಟ್ಟು, ಚಟಗಳನ್ನು ಶುರು ಮಾಡಿ, ಕೆಲಸ ಮಾಡುತ್ತಾ 4 ವರ್ಷವಾದರೂ ಏನೂ savings ಮಾಡಿಲ್ಲ, ಕೈಯಲ್ಲಿ ನಯಾ-ಪೈಸ ಇಲ್ಲದೆ, ಜೀವನದ ಬಗ್ಗೆ serious'ಆಗಿ think ಮಾಡುವ ಹೊತ್ತಿಗೆ ಮನೆಯಲ್ಲಿ ಮದುವೆ ವಿಷಯ ಬರುತ್ತದೆ, ಏನೋ ಒಂದು ಆಗಲಿ ಎಂದು ಹುಡುಗಿ ನೋಡಲು ಹೋದಾಗ ನಾನು ಮದುವೆಗೆ ಯೋಗ್ಯನಾ ??, ಇವಳನ್ನು ಸಾಕಲು ಆಗುತ್ತಾ??, ಸಂಸಾರ ಸಾಗಿಸುವಷ್ಟು ಜವಾಬ್ದಾರಿ ಇದಿಯಾ??, ಮದುವೆಗೆ ಹಾಕಲು suit-blazer ಇದಿಯಾ??, Honey moon 'ಗೆ ಟಿಕೆಟ್ ಬುಕ್ ಮಾಡಲು ದುಡ್ಡು ಇದಿಯಾ??, 4 ವರ್ಷದಿಂದ company'ಯಲ್ಲಿ ಅದೇ ಪ್ರೊಫೈಲ್ ಇದೆ, promotion-salary hike ಯಾಕೆ ಆಗಿಲ್ಲ ಅಂತ ಯೋಚಿಸದೆ, ಅಪ್ಪ-ಅಮ್ಮ ಬಲವಂತ ಮಾಡಿದರು ಅಂತ ಮದುವೆ ಮಾಡಿಕೊಂಡು, ಹುಡುಗನಿಂದ ಗಂಡನಗುತ್ತಾನೆ.
....
ಹುಡುಗರ life ಹೀಗಿದೆ ನೋಡಿ, ಅನುಭವದ ನಂತರ ಗಂಡನ ಬಗ್ಗೆ ಬರೆಯುವ ಹಂಬಲ ಇದೆ....!!

Sunday, October 17, 2010

ಮುಗ್ಧ ಮುಖದ, ಮುದ್ದು ಹುಡುಗಿ, ಯಾಕೆ ಬಂದೆ ಕನಸಲಿ..??


ಬಹಳ ದಿನಗಳವರೆಗೆ ಏನೂ ಮಾಡದೆ ಸುಮ್ಮನೆ ಜಡವಾಗಿದ್ದು ಬಿಟ್ಟರೆ ಯಾವುದರಲ್ಲೂ ಆಸಕ್ತಿ ಉಳಿಯುವುದಿಲ್ಲ. ಅಪರೂಪಕ್ಕೆ ಇಲ್ಲಿ ಬರೆಯುವ ನಾನು, ಈಗ ತುಂಬಾ ದಿನದಿಂದ ಈ blog ಪ್ರಪಂಚಕ್ಕೆ ಬಂದಿರಲಿಲ್ಲ. Office-ಮನೆ, ಊಟ-ನಿದ್ದೆ, ಯೋಚನೆ-ಯೋಜನೆ, ಹೀಗೆ ಹತ್ತು-ಹಲವಾರು ಕಾರಣಗಳಿಂದ ದೂರವಿದ್ದ ನನಗೆ ಹೀಗೊಂದು ಅನುಭವ ಆಯಿತು. ರಾತ್ರಿ ಹೊತ್ತು ನಿಶಾಚರಿಯಂತೆ ಬದುಕುವ ನಾನು ಆ ಒಂದು ರಾತ್ರಿ ಹೊರಗೆ ಬರಲು ಹೆದರಿದ್ದೆ.

"....ರಾತ್ರಿ ಊಟ ಮುಗಿಸಿ, ಉಳಿದ ಅಡಿಗೆ ಹಾಗೆ Fridge'ನಲ್ಲಿ ಇಟ್ಟು, ಹಾಗೆ TV ನೋಡುತ್ತಾ ಕೂತಿದ್ದೆ. ಹಿಂದಿನಿಂದ ಬಂದು ಕಣ್ಣು ಮುಚ್ಚಿ 'ನಾನು ಯಾರು ಹೇಳು' ಅಂದಳು. ಆ ಮೃದು ಕೈಗಳು, ಆ ಮಧುರ ದ್ವನಿ, ಕೂದಲಿನ ಸೀಗೆ ಪರಿಮಳ, ಇಷ್ಟು ಸಾಕು ಅವಳು ಅನು ಅಂತ ಗುರುತಿಸಲು. 'ಏನು ಇಷ್ಟೊತ್ನಲ್ಲಿ ಬಂದಿದಿಯ..?, ಊಟ ಆಯ್ತಾ ?' ಎಂದೆ. ನನ್ನ ಪ್ರಶ್ನೆ'ಗೆ ಏನು ಹೇಳದೆ ಸುಮ್ಮನೆ ಕೂತಿದ್ದಳು. ಮನೆಯಲ್ಲಿ ಯಾರು ಇರಲಿಲ್ಲ, ಪಾಪ ಪುಟ್ಟ ಹುಡುಗಿ ಯಾಕೋ ತುಂಬಾ ಬೇಸರದಿಂದ ಇದ್ದಾಳೆ ಅಂತ ಸಮಾಧಾನ ಮಾಡಿದೆ. ನಂತರ ನಡೆದದ್ದು ಅಚಾತುರ್ಯ..!! ಅಸಹ್ಯ, ಕೋಪದಿಂದ ಮುಖ ತಗ್ಗಿಸಿ ಓಡಿ ಹೋದಳು ಅನು.
ಅವಳು ಆ ಕಡೆ ಹೋಗಿದ್ದೆ ತಡ, ನನ್ನ ಮನದಲ್ಲಿ ಏನೋ ತಳಮಳ, ತಪ್ಪು ಮಾಡಿದೆ ಎಂಬ guilt conscious. ಮೊದಲನೆಯ ಬಾರಿ ತಪ್ಪು ಮಾಡಿದೆ, ಅದು ಆ ಪುಟ್ಟ ಹುಡುಗಿಯ ಮುಂದೆ. ಸರಿ ಏನಾದ್ರು ಆಗಲಿ ಬಿಡು ಅಂತ ಒಮ್ಮೆ ಅನ್ನಿಸಿದರು ಇನ್ನೊಮ್ಮೆ ಏನೋ ಒಂದು ಭಯ. ಅವಳು ಹೋಗಿ ಯಾರಿಗಾದರು ಹೇಳಿದರೆ ?? ನನ್ನ ಮರ್ಯಾದೆ ಮೂರು ಕಾಸಿಗೂ ಉಳಿಯೋಲ್ಲ. ಮನೆಗೆ ಹೋದ ಅವಳು ಏನಾದರು ಹೇಳುತ್ತಾಳ..?? ಅವರ ಅಪ್ಪ-ಅಣ್ಣ ಎಲ್ಲರಿಗು ಹೇಳಿಬಿಡುತ್ತಾಳ..?? ಹೊರಗೆ ಹೋಗಿ ನೋಡಲು ಭಯ..! ಬಾಗಿಲು ಮುಚ್ಚಿ ಹಾಗೆ ಯೋಚಿಸುತ್ತ ಮನೆಯೆಲ್ಲ ತಿರುಗಾಡಿದೆ. ಏನು ಮಾಡಲಿ, ಹೇಗೆ ಈ ಸಂಕಷ್ಟದಿಂದ ಪಾರಾಗಲಿ.!!
ಅವಳ ಬಗ್ಗೆ ಅತಿಯಾದ ಪ್ರೀತಿ ಇದೆ, ಪುಟ್ಟ ಮಗು ಎಂಬ ಒಲವು ಇದೆ, ಆದರೆ ಈ ವಿಷಯ ಅವಳು ಯಾರಿಗಾದರು ಹೇಳಿದರೆ ನನ್ನ ಮರ್ಯಾದೆ ಇರುವುದಿಲ್ಲ. ಮನದಲ್ಲಿ ತಳಮಳ-ಭಯ ಎಲ್ಲಿಯವರೆಗೂ ಹೋಯಿತು ಎಂದರೆ, ಅದು ನನಗೆ ಸೋಜಿಗ ಎನಿಸುತ್ತದೆ. ತಲೆಯಲ್ಲಿ ಅವಳನ್ನು ಸಾಯಿಸುವ ವಿಧಾನ'ಗಳ ಬಗ್ಗೆ ಚಿಂತನೆ ನಡೆಯುತ್ತಿತ್ತು. ಮತ್ತೊಮ್ಮೆ ಆ ಪುಟ್ಟ ಹುಡುಗಿಯ ಬಗ್ಗೆ ಏನೋ ಒಂದು ಮಮತೆ.
ಹೇಗಾದರೂ ಸರಿ ಅವಳ ಮನೆಗೆ ಹೋಗಿ ಅವಳ ಕಥೆ ಮುಗಿಸಿದರೆ ನನ್ನ ಜೀವನ ಉಳಿಯುತ್ತದೆ ಎಂದೂ ನಿರ್ಧರಿಸಿ, gate ತೆರೆದು ಹೊರ ನಡೆದೆ. ನಡೆಯಲು ಆಗದಷ್ಟು ಕಾಲು'ಗಳಲ್ಲಿ ನಡುಕ. ಅವರ ಮನೆ compund ಹಾರಿ ಅವಳು ಇರುವ room ಕಡೆ ನಡೆದೆ. ಮೇಲಿನ room ಕಿಟಕಿ ಏರಲು ಅಲ್ಲೇ ಇದ್ದ pipe ಹಿಡಿದು ಹತ್ತಿದೆ. ಹತ್ತಲಾಗದೆ ಕೈ ಜಾರಿ ಕೆಳಗೆ ಬಿದ್ದೆ...."

ಎಚ್ಚರ ಆಯಿತು ನೋಡಿ...ಅಯ್ಯೋ ರಾಮ' ಏನಿದು ಈ ರೀತಿಯ ಕನಸು.?? ನನ್ನ ಮೈಯಲ್ಲಿ ಇನ್ನು ನಡುಕ'ವಿದೆ, t-shirt ಬೆವರಿ'ನಿಂದ ಹಸಿಯಾಗಿ ಹೋಗಿದೆ. ಇಂಥ ಕನಸು ಯಾಕೆ ಬಿಟ್ಟು, ಅಥವಾ ಹೀಗೆನಾದರು ಆಗುತ್ತ ಮುಂದೆ..??
ತಲೆಯಲ್ಲಿ ನೂರಾರು ಯೋಚನೆ'ಗಳು, ಆಗ ಸಣ್ಣನೆ ಬಾಗಿಲು ಕಿರ್ರನೆ ತೆರೆದ ಶಬ್ದ., ಮನೆಯಲ್ಲಿ ಯಾರು ಇಲ್ಲ, ಇನ್ನು ಈ ಶಬ್ದ ಎಲ್ಲಿಂದ? ಹೊರಗೆ ಹೋಗಲು ಭಯ. ಹಾಗೆ ಮಂಚದ ಅಡಿಯಲ್ಲಿ ಹೋಗಿ ಮಲಗಿದೆ.
ಮರುದಿನ ಮುಂಜಾನೆ ಎದ್ದು ಹೊರಬಂದರು ರಾತ್ರಿಯ ಆ ಕಹಿ ಅನುಭವ ಇನ್ನು ಮಾಸಿದಂತಿರಲಿಲ್ಲ. ಮುಖ ತೊಳೆದು, ಕಿಟಕಿಯ ಪರದೆಯನ್ನು ಹಾಗೆ ಸರಿಸಿ ನೋಡಿದೆ., ಮುದ್ದಾದ ನಗುವಿನಲ್ಲಿ, ಹಸಿಯಾದ ಕೂದಲನ್ನು ಹರಿ ಬಿಟ್ಟು, ರಂಗೋಲಿ ಹಾಕುತ್ತ ಇದ್ದಳು ಅನು. ಬೇಗನೆ ಸ್ನಾನ ಮುಗಿಸಿ Office'ಗೆ ತಯಾರಾಗಿ ಎಂದೂ ಇಲ್ಲದೆ ಅವತ್ತು ಸುಮಾರು ಅರ್ಧ ಘಂಟೆ ದೇವರ ಮುಂದೆ ನಿಂತು ಬೇಡಿಕೊಂಡೆ. ಬಹಳ ಕಷ್ಟ ಪಟ್ಟು ಆ ದಿನ ಕಳೆದೆ. ಅಮ್ಮ ಊರಿನಿಂದ ಬಂದರು. ಅವರ ಹಿಂದೆಯೇ ಕಿಲ-ಕಿಲ ನಗುತ್ತ ಬಂದಳು ಅನು. 'ಯಾಕೋ ಅವಿ'ಅಣ್ಣ  ಹುಷಾರಿಲ್ವಾ..?? ಮುಖ ಯಾಕೋ ತುಂಬಾ ಬಾಡಿ ಹೋಗಿದೆ' ಎಂದಳು. ಏನು ಇಲ್ಲ ಪುಟ್ಟ ಸ್ವಲ್ಪ ಸುಸ್ತು ಎಂದೂ ಹೇಳಿ ತಲೆ ನೇವರಿಸಿ ನಡೆದೆ. ಮತ್ತೆ ಅವಳೊಡನೆ ಬೆರೆತು ಮಾತನಾಡಲು, ನನಗೆ ಬಹಳ ದಿನಗಳು ಬೇಕಾಯ್ತು. ಯಾವುದೋ ಒಂದು ಕನಸು ನನ್ನ ಮನಸ್ಸನ್ನು ಈ ರೀತಿ ಖಿನ್ನ'ಗೊಳಿಸಿತಲ್ಲ ಅನ್ನೋದೇ ಬೇಸರದ ಸಂಗತಿ.
ofiice-ಮನೆ, Traffic-stress, ಯೋಚನೆ-ಯೋಜನೆ, ಹೀಗೆ ಹಲವಾರು ರೀತಿಯ tension ತುಂಬಿದ ದಿನದಲ್ಲಿ ಆ ಮುದ್ದು ಮುಖ'ವನು ಒಮ್ಮೆ ನೋಡಿದರೆ ಮತ್ತೆ ಏನೋ ಹುರುಪು ಬಂದಂತೆ ಆಗುತ್ತದೆ. ಅದೇಕೋ ಅವತ್ತು ಹಾಗಾಯಿತು ನೋಡಿ.