Sunday, October 17, 2010
ಮುಗ್ಧ ಮುಖದ, ಮುದ್ದು ಹುಡುಗಿ, ಯಾಕೆ ಬಂದೆ ಕನಸಲಿ..??
ಬಹಳ ದಿನಗಳವರೆಗೆ ಏನೂ ಮಾಡದೆ ಸುಮ್ಮನೆ ಜಡವಾಗಿದ್ದು ಬಿಟ್ಟರೆ ಯಾವುದರಲ್ಲೂ ಆಸಕ್ತಿ ಉಳಿಯುವುದಿಲ್ಲ. ಅಪರೂಪಕ್ಕೆ ಇಲ್ಲಿ ಬರೆಯುವ ನಾನು, ಈಗ ತುಂಬಾ ದಿನದಿಂದ ಈ blog ಪ್ರಪಂಚಕ್ಕೆ ಬಂದಿರಲಿಲ್ಲ. Office-ಮನೆ, ಊಟ-ನಿದ್ದೆ, ಯೋಚನೆ-ಯೋಜನೆ, ಹೀಗೆ ಹತ್ತು-ಹಲವಾರು ಕಾರಣಗಳಿಂದ ದೂರವಿದ್ದ ನನಗೆ ಹೀಗೊಂದು ಅನುಭವ ಆಯಿತು. ರಾತ್ರಿ ಹೊತ್ತು ನಿಶಾಚರಿಯಂತೆ ಬದುಕುವ ನಾನು ಆ ಒಂದು ರಾತ್ರಿ ಹೊರಗೆ ಬರಲು ಹೆದರಿದ್ದೆ.
"....ರಾತ್ರಿ ಊಟ ಮುಗಿಸಿ, ಉಳಿದ ಅಡಿಗೆ ಹಾಗೆ Fridge'ನಲ್ಲಿ ಇಟ್ಟು, ಹಾಗೆ TV ನೋಡುತ್ತಾ ಕೂತಿದ್ದೆ. ಹಿಂದಿನಿಂದ ಬಂದು ಕಣ್ಣು ಮುಚ್ಚಿ 'ನಾನು ಯಾರು ಹೇಳು' ಅಂದಳು. ಆ ಮೃದು ಕೈಗಳು, ಆ ಮಧುರ ದ್ವನಿ, ಕೂದಲಿನ ಸೀಗೆ ಪರಿಮಳ, ಇಷ್ಟು ಸಾಕು ಅವಳು ಅನು ಅಂತ ಗುರುತಿಸಲು. 'ಏನು ಇಷ್ಟೊತ್ನಲ್ಲಿ ಬಂದಿದಿಯ..?, ಊಟ ಆಯ್ತಾ ?' ಎಂದೆ. ನನ್ನ ಪ್ರಶ್ನೆ'ಗೆ ಏನು ಹೇಳದೆ ಸುಮ್ಮನೆ ಕೂತಿದ್ದಳು. ಮನೆಯಲ್ಲಿ ಯಾರು ಇರಲಿಲ್ಲ, ಪಾಪ ಪುಟ್ಟ ಹುಡುಗಿ ಯಾಕೋ ತುಂಬಾ ಬೇಸರದಿಂದ ಇದ್ದಾಳೆ ಅಂತ ಸಮಾಧಾನ ಮಾಡಿದೆ. ನಂತರ ನಡೆದದ್ದು ಅಚಾತುರ್ಯ..!! ಅಸಹ್ಯ, ಕೋಪದಿಂದ ಮುಖ ತಗ್ಗಿಸಿ ಓಡಿ ಹೋದಳು ಅನು.
ಅವಳು ಆ ಕಡೆ ಹೋಗಿದ್ದೆ ತಡ, ನನ್ನ ಮನದಲ್ಲಿ ಏನೋ ತಳಮಳ, ತಪ್ಪು ಮಾಡಿದೆ ಎಂಬ guilt conscious. ಮೊದಲನೆಯ ಬಾರಿ ತಪ್ಪು ಮಾಡಿದೆ, ಅದು ಆ ಪುಟ್ಟ ಹುಡುಗಿಯ ಮುಂದೆ. ಸರಿ ಏನಾದ್ರು ಆಗಲಿ ಬಿಡು ಅಂತ ಒಮ್ಮೆ ಅನ್ನಿಸಿದರು ಇನ್ನೊಮ್ಮೆ ಏನೋ ಒಂದು ಭಯ. ಅವಳು ಹೋಗಿ ಯಾರಿಗಾದರು ಹೇಳಿದರೆ ?? ನನ್ನ ಮರ್ಯಾದೆ ಮೂರು ಕಾಸಿಗೂ ಉಳಿಯೋಲ್ಲ. ಮನೆಗೆ ಹೋದ ಅವಳು ಏನಾದರು ಹೇಳುತ್ತಾಳ..?? ಅವರ ಅಪ್ಪ-ಅಣ್ಣ ಎಲ್ಲರಿಗು ಹೇಳಿಬಿಡುತ್ತಾಳ..?? ಹೊರಗೆ ಹೋಗಿ ನೋಡಲು ಭಯ..! ಬಾಗಿಲು ಮುಚ್ಚಿ ಹಾಗೆ ಯೋಚಿಸುತ್ತ ಮನೆಯೆಲ್ಲ ತಿರುಗಾಡಿದೆ. ಏನು ಮಾಡಲಿ, ಹೇಗೆ ಈ ಸಂಕಷ್ಟದಿಂದ ಪಾರಾಗಲಿ.!!
ಅವಳ ಬಗ್ಗೆ ಅತಿಯಾದ ಪ್ರೀತಿ ಇದೆ, ಪುಟ್ಟ ಮಗು ಎಂಬ ಒಲವು ಇದೆ, ಆದರೆ ಈ ವಿಷಯ ಅವಳು ಯಾರಿಗಾದರು ಹೇಳಿದರೆ ನನ್ನ ಮರ್ಯಾದೆ ಇರುವುದಿಲ್ಲ. ಮನದಲ್ಲಿ ತಳಮಳ-ಭಯ ಎಲ್ಲಿಯವರೆಗೂ ಹೋಯಿತು ಎಂದರೆ, ಅದು ನನಗೆ ಸೋಜಿಗ ಎನಿಸುತ್ತದೆ. ತಲೆಯಲ್ಲಿ ಅವಳನ್ನು ಸಾಯಿಸುವ ವಿಧಾನ'ಗಳ ಬಗ್ಗೆ ಚಿಂತನೆ ನಡೆಯುತ್ತಿತ್ತು. ಮತ್ತೊಮ್ಮೆ ಆ ಪುಟ್ಟ ಹುಡುಗಿಯ ಬಗ್ಗೆ ಏನೋ ಒಂದು ಮಮತೆ.
ಹೇಗಾದರೂ ಸರಿ ಅವಳ ಮನೆಗೆ ಹೋಗಿ ಅವಳ ಕಥೆ ಮುಗಿಸಿದರೆ ನನ್ನ ಜೀವನ ಉಳಿಯುತ್ತದೆ ಎಂದೂ ನಿರ್ಧರಿಸಿ, gate ತೆರೆದು ಹೊರ ನಡೆದೆ. ನಡೆಯಲು ಆಗದಷ್ಟು ಕಾಲು'ಗಳಲ್ಲಿ ನಡುಕ. ಅವರ ಮನೆ compund ಹಾರಿ ಅವಳು ಇರುವ room ಕಡೆ ನಡೆದೆ. ಮೇಲಿನ room ಕಿಟಕಿ ಏರಲು ಅಲ್ಲೇ ಇದ್ದ pipe ಹಿಡಿದು ಹತ್ತಿದೆ. ಹತ್ತಲಾಗದೆ ಕೈ ಜಾರಿ ಕೆಳಗೆ ಬಿದ್ದೆ...."
ಎಚ್ಚರ ಆಯಿತು ನೋಡಿ...ಅಯ್ಯೋ ರಾಮ' ಏನಿದು ಈ ರೀತಿಯ ಕನಸು.?? ನನ್ನ ಮೈಯಲ್ಲಿ ಇನ್ನು ನಡುಕ'ವಿದೆ, t-shirt ಬೆವರಿ'ನಿಂದ ಹಸಿಯಾಗಿ ಹೋಗಿದೆ. ಇಂಥ ಕನಸು ಯಾಕೆ ಬಿಟ್ಟು, ಅಥವಾ ಹೀಗೆನಾದರು ಆಗುತ್ತ ಮುಂದೆ..??
ತಲೆಯಲ್ಲಿ ನೂರಾರು ಯೋಚನೆ'ಗಳು, ಆಗ ಸಣ್ಣನೆ ಬಾಗಿಲು ಕಿರ್ರನೆ ತೆರೆದ ಶಬ್ದ., ಮನೆಯಲ್ಲಿ ಯಾರು ಇಲ್ಲ, ಇನ್ನು ಈ ಶಬ್ದ ಎಲ್ಲಿಂದ? ಹೊರಗೆ ಹೋಗಲು ಭಯ. ಹಾಗೆ ಮಂಚದ ಅಡಿಯಲ್ಲಿ ಹೋಗಿ ಮಲಗಿದೆ.
ಮರುದಿನ ಮುಂಜಾನೆ ಎದ್ದು ಹೊರಬಂದರು ರಾತ್ರಿಯ ಆ ಕಹಿ ಅನುಭವ ಇನ್ನು ಮಾಸಿದಂತಿರಲಿಲ್ಲ. ಮುಖ ತೊಳೆದು, ಕಿಟಕಿಯ ಪರದೆಯನ್ನು ಹಾಗೆ ಸರಿಸಿ ನೋಡಿದೆ., ಮುದ್ದಾದ ನಗುವಿನಲ್ಲಿ, ಹಸಿಯಾದ ಕೂದಲನ್ನು ಹರಿ ಬಿಟ್ಟು, ರಂಗೋಲಿ ಹಾಕುತ್ತ ಇದ್ದಳು ಅನು. ಬೇಗನೆ ಸ್ನಾನ ಮುಗಿಸಿ Office'ಗೆ ತಯಾರಾಗಿ ಎಂದೂ ಇಲ್ಲದೆ ಅವತ್ತು ಸುಮಾರು ಅರ್ಧ ಘಂಟೆ ದೇವರ ಮುಂದೆ ನಿಂತು ಬೇಡಿಕೊಂಡೆ. ಬಹಳ ಕಷ್ಟ ಪಟ್ಟು ಆ ದಿನ ಕಳೆದೆ. ಅಮ್ಮ ಊರಿನಿಂದ ಬಂದರು. ಅವರ ಹಿಂದೆಯೇ ಕಿಲ-ಕಿಲ ನಗುತ್ತ ಬಂದಳು ಅನು. 'ಯಾಕೋ ಅವಿ'ಅಣ್ಣ ಹುಷಾರಿಲ್ವಾ..?? ಮುಖ ಯಾಕೋ ತುಂಬಾ ಬಾಡಿ ಹೋಗಿದೆ' ಎಂದಳು. ಏನು ಇಲ್ಲ ಪುಟ್ಟ ಸ್ವಲ್ಪ ಸುಸ್ತು ಎಂದೂ ಹೇಳಿ ತಲೆ ನೇವರಿಸಿ ನಡೆದೆ. ಮತ್ತೆ ಅವಳೊಡನೆ ಬೆರೆತು ಮಾತನಾಡಲು, ನನಗೆ ಬಹಳ ದಿನಗಳು ಬೇಕಾಯ್ತು. ಯಾವುದೋ ಒಂದು ಕನಸು ನನ್ನ ಮನಸ್ಸನ್ನು ಈ ರೀತಿ ಖಿನ್ನ'ಗೊಳಿಸಿತಲ್ಲ ಅನ್ನೋದೇ ಬೇಸರದ ಸಂಗತಿ.
ofiice-ಮನೆ, Traffic-stress, ಯೋಚನೆ-ಯೋಜನೆ, ಹೀಗೆ ಹಲವಾರು ರೀತಿಯ tension ತುಂಬಿದ ದಿನದಲ್ಲಿ ಆ ಮುದ್ದು ಮುಖ'ವನು ಒಮ್ಮೆ ನೋಡಿದರೆ ಮತ್ತೆ ಏನೋ ಹುರುಪು ಬಂದಂತೆ ಆಗುತ್ತದೆ. ಅದೇಕೋ ಅವತ್ತು ಹಾಗಾಯಿತು ನೋಡಿ.
Thursday, July 1, 2010
ಮದುವೆ ಯಾವಾಗ ...?
ನಮ್ಮ-ನಿಮ್ಮ ಪರಿಚಯಸ್ತರು ಎದುರು ಸಿಕ್ಕಿದಾಗ ನನ್ನ ಮು೦ದಿಡೋ ಪ್ರಶ್ನೆ ಇದು.ಈ ಜನರಿಗೆ ನಾನು ನನ್ನ ಪಾಡಿಗೆ ಆರಾಮಾಗಿ ಇರೋದನ್ನು ನೋಡಕ್ಕೆ ಆಗಲ್ಲ, ಏನೋ ಒ೦ತರ ಹೊಟ್ಟೆ ಉರಿ ಇವರಿಗೆ. ಈ ಮದುವೆ ಅನ್ನೋದೇ ಇಷ್ಟ, ಆದರೆ ಯಾಕೋ ಸ್ವಲ್ಪ ಹಿಂಜರಿಕೆ. ಮದುವೆ ಆದವರು ಅಯ್ಯೋ ಮದುವೆ ಆಗೇ ಹೋಯ್ತಲ್ಲ ಅ೦ತ ಸ೦ಕಟಪಟ್ಟರೆ, ಮದುವೆಯ ಜಾಲಕ್ಕೆ ಬೀಳದವರು MERA NUMBER KAB AYEGA ಅ೦ತ ಲೆಕ್ಕಾಚಾರ ಹಾಕ್ತಾ ಇರ್ತಾರೆ. ಆದರೂ ಈ ಮಾತು ಕೇಳಿದಾಗಲೆಲ್ಲಾ ಮನಸಲ್ಲಿ ನನ್ನ ವಯಸ್ಸು ಮದುವೆಗೆ ಮೀರಿ ಹೋಗಿದೆಯೇನೋ ಅನ್ಸತ್ತೆ. ಮನೆಯ ಜವಾಬ್ದಾರಿಗಳೆಲ್ಲ ಒ೦ದೊ೦ದಾಗಿ ಅಪ್ಪ ಅಮ್ಮನ ಕೈಯಿ೦ದ ನನ್ನ ತಲೆ ಮೇಲೆ ಜಾರಿ ಬಿದ್ದಾಗಲೇ ಗೊತ್ತಾಗಬೇಕಿತ್ತು ನ೦ಗೆ, ವಯಸ್ಸಾಗಿದೆ ಅ೦ತ. ಆದ್ರೆ ಏನು ಮಾಡೋದು ?, ಈ ಯಾ೦ತ್ರಿಕ ಜೀವನದಲ್ಲಿ ಕನ್ನಡಿ ಮು೦ದೆ ನಿ೦ತು ಸರಿಯಾಗಿ ನನ್ನನ್ನು ನಾನು ನೋಡಿಕೊಳ್ಳೋಕೆ ಇನ್ನೂ ಸಮಯ ಸಿಕ್ಕಿಲ್ಲ. ಹಾಗೇನಾದ್ರೂ ಸಮಯ ಸಿಕ್ಕಿದರೂ ಅಲ್ಲಲ್ಲಿ ಆಗಾಗ ದರ್ಶನ ನೀಡೋ ಬಿಳಿ ಕೂದಲುಗಳನ್ನು ಎಣಿಸಿ ನೋಡುವಷ್ಟು ತಾಳ್ಮೆನೂ ಇಲ್ಲ. ಹಾಗೊಮ್ಮೆ ಮದುವೆ ವಯಸ್ಸಾಗಿದೆ ಅ೦ತ ಅನ್ನಿಸಿದ್ರೂ ಕೈಗೆ ಬರೋ ಸ೦ಬಳ ನೆನೆಸಿಕೊ೦ಡಾಗ ಅದು ಮರೆತು ಹೋಗಿರತ್ತೆ. ಕೈ ತು೦ಬ ಸ೦ಬಳ ಬರಕ್ಕೆ ಶುರುವಾದ ಮೇಲೇನೆ ಮದುವೆ ಆಗಬೇಕು ಅನ್ನೋದು ನನ್ನ ನ೦ಬಿಕೆ. ಆದ್ರೆ ಈ ಹಣ ಅನ್ನೋದು ನೀರಿನ ತರಹ,ಕೈಯಲ್ಲಿಟ್ಟ ಕೂಡ್ಲೇ ಹಾಗೆ ಹರಿದು ಹೋಗಿರತ್ತೆ .....ಕೈ ತು೦ಬೋದೇ ಇಲ್ಲ. ನನ್ನ ಕೈ ತುಂಬೋಲ್ಲ, ಅದು ತುಂಬುವ ವರೆಗೂ ನನಗೆ ಮದುವೆ ಬಗ್ಗೆ ಯೋಚನೆ ಬರಲ್ಲ !!!
ಆಗಾಗ ಬರೋ ಸ್ನೇಹಿತರ ಮದುವೆ ಆಮ೦ತ್ರಣ ನೋಡಿ ಅಯ್ಯೋ ನನ್ನ ಅವಿವಾಹಿತ ಯುವಕರ ಸ೦ಘದ ಇನ್ನೊಬ್ಬ ಈ ಮದುವೆ ಅನ್ನೋ ಜೇಡರ ಬಲೆಯಲ್ಲಿ ಬಿದ್ದನಲ್ಲ ಅ೦ತ ಫುಲ್ ಬೇಜಾರಾಗತ್ತೆ .ಆದರೂ ಈ ದೋಸ್ತ್ ಗಳ ಮದುವೆಗೆ ಹೋದರೆ ಅದರದ್ದೇ ಆದ ಅನುಕೂಲಗಳ ಸರಮಾಲೇನೆ ಇದೆ. ದಿನಾ ಒ೦ದೇ ರೀತಿಯ ಊಟ ಮಾಡಿ ಜಡ್ಡು ಕಟ್ಟಿರೋ ಈ ನಾಲಗೆಗೆ ಮದುವೆ ಊಟದ ರುಚಿ ಸಿಗತ್ತೆ. ಪಾರ್ಲರ್ ಗೆ ಹೋಗಿ ಗ೦ಟೆಗಟ್ಟಲೆ ಮೇಕಪ್ ಮಾಡಿಸಿ ಲವಲವಿಕೆಯಿ೦ದ ಓಡಾಡೋ ಸು೦ದರಿಯರ ದರ್ಶನ ಭಾಗ್ಯ ಸಿಗುತ್ತದೆ. ಪಾಪ ಅವರು ಅಷ್ಟು ಕಷ್ಟಪಟ್ಟು ಮಾಡಿಸಿರೋ ಮೇಕಪನ್ನು ನಾವು ನೋಡಿಲ್ಲ ಅ೦ದ್ರೆ ಅವರು ತು೦ಬ ಬೇಜಾರು ಮಾಡ್ಕೊತಾರೆ ಏನೋ ಅ೦ತ ಆದಷ್ಟು ಅವರ ಅಕ್ಕ ಪಕ್ಕದಲ್ಲೇ ಇದ್ದು ಅವರನ್ನು ನೋಡುತ್ತಾ ಇರ್ತೀನಿ. ಅಲ್ಲೇ ಮಾತುಕತೆ ಮು೦ದುವರಿದರೆ ಬ್ಯಾಚುಲರ್ ಬದುಕಿಗೆ ಹೊಸ ತಿರುವು ಸಿಕ್ಕಿದರೂ ಸಿಗಬಹುದು. ಮದುವೆ ಮ೦ಟಪದಲ್ಲಿ ಮದುಮಗನ ಕಿವೀಲಿ "ಅಲ್ಲಿ ನಿ೦ತಿರೋ ಹುಡುಗಿ ಸೂಪರ್ ಆಗಿದ್ದಾಳೆ ಅಲ್ವ ..?" ಅ೦ದಾಗ ಸ್ನೇಹಿತನ ಮುಖದಲ್ಲಿ ನಿರಾಶೆಯ ನೋಟ. ಮದುಮಗನೂ ಏನೂ ಕಡಿಮೆ ಇಲ್ಲ ನಮ್ಮನ್ನು ಹತ್ತಿರಕ್ಕೆ ಕರೆದು (ಹೆ೦ಡತಿಯ ಕಣ್ಣು ತಪ್ಪಿಸಿ) "ಚೆನ್ನಾಗೇನೋ ಇದ್ದಾಳೆ ಆದ್ರೆ ಲಿಪ್ ಸ್ಟಿಕ್ ಸ್ವಲ್ಪ ಜಾಸ್ತಿ ಆಯಿತು ಅಲ್ವೇನೋ " ಅ೦ತಾನೆ, ಎಷ್ಟಾದರೂ ಅವನು ನಮ್ಮ ದೋಸ್ತ್ ತಾನೇ.ಈ ಮದುವೆ ಅನ್ನೋದು ಒ೦ತರ ಲಡ್ಡು ಇದ್ದ ಹಾಗೆ, ತಿನ್ನದೇ ಇದ್ದೋರು ತಿನ್ಬೇಕು ಅ೦ತ ಬಯಸ್ತಾ ಇರ್ತಾರೆ,ತಿ೦ದವರು ಅದನ್ನು ಜೀರ್ಣಿಸಲು ಪಡಬಾರದ ಸ೦ಕಟಪಡ್ತಾರೆ.
ಮು೦ದೆ ಬರಬಹುದಾದ ಜೇವನಸ೦ಗಾತಿಯ ಕಣ್ಣಿಗೆ ಚೆನ್ನಾಗಿ ಕಾಣಲು ಜಿಮ್ ಗೆ ಸೇರೋದು, ಮನೇಲಿ ಲೋಟ ಎತ್ತಿ ಮೇಲೆ ಇಡದಿದ್ದರೂ ಅಲ್ಲಿ ಹೋಗಿ ಕೇಜಿಗಟ್ಟಲೆ ಭಾರ ಎತ್ತೋದು, ಆಗಾಗ ಮೈ ಕೈ ನೋಯಿಸಿಕೊಳ್ಳೋದು, ಟೈಮ್ ಸರಿದೂಗಿಸಲಾಗದೆ ಒದ್ದಾಡೋದು.... 2-3 ತಿಂಗಳು ಇದನ್ನು ನಡೆಸಿ ಮತ್ತೆ ಯಥಾ ಪ್ರಕಾರ daily routine. ಕ೦ಪ್ಯುಟರ್ ಮು೦ದೆ ಕೀ ಬೋರ್ಡ್ ಜೊತೆ ಸರಸ ಆಡೋ ನಮ್ಮ೦ತ ಸುಖ ಪುರುಷರಿಗೆ college ಮುಗಿಸಿದ ಮೇಲೆ ವರ್ಷಕ್ಕೊಂದು ಹೊಸ ಅಭ್ಯಾಸ ಬರುತ್ತದೆ. College bunk ಹೊಡೆದು ಗಾಂಧಿ ಕ್ಲಾಸ್'ನಲ್ಲಿ ಸಿನಿಮಾ ನೋಡುತ್ತಿದ್ದವರು ಈಗ PVR, INOX ಬೇಕು ಅಂತ ಹೋಗ್ತಾರೆ. ಶಾಂತಿ-ಸಾಗರ್ ಮಸಾಲೆ ದೋಸೆ ಬಿಟ್ಟು, Pizza, Pasta ಹುಡುಕ್ತಾರೆ, Bus stop ಹುಡ್ಗಿರನ್ನ ನೋಡುವವರು ಈಗ blonde girls' ಗೆ ಕಾಳು ಹಾಕ್ತಾರೆ. 20-30 pocket money' ನಲ್ಲಿ ವಾರ ಪೂರ್ತಿ manage ಆಗ್ತಾ ಇತ್ತು, ಈಗ weekend' ನಲ್ಲೆ 200-300 ಖರ್ಚಾಗುತ್ತದೆ. ಇಂಥ ಬದಲಾವಣೆ ಆಗಿರೋ ಸಮಯದಲ್ಲಿ ಮದುವೆ ಆಗಿಬಿಟ್ರೆ ಇನ್ನೇನು ಆಗತ್ತೋ ಅಂತ ಭಯ, ಹಿಂಜರಿಕೆ.
ಆದರೆ ಒ೦ದು ಮಾತು ನಿಜ, ಲವ್ ಮಾಡಬೇಕು ಅ೦ತ ಆಗಾಗ ಅನ್ನಿಸ್ತಾ ಇರತ್ತೆ, ಆದ್ರೆ ನ೦ಗೆ ಮತ್ತೆ ಈ ಹುಡುಗೀರಿಗೆ ಅದು ಯಾಕೋ ಅಷ್ಟಕ್ಕಷ್ಟೇ. ಆಗಾಗ ನನ್ನ ಅಕ್ಕ ಪಕ್ಕದಲ್ಲಿ ದುತ್ತನೆ ಬ೦ದು ನಿಲ್ಲೋ ಬೈಕ್ ಗಳ ಮೇಲೆ ಕೂತಿರೋ ಸುರಸು೦ದರಿಯರನ್ನು ನೋಡಿದಾಗ ಯಾರೋ ಬ೦ದು ನನ್ನ ವೇಸ್ಟ್ ಬಾಡಿ ಅ೦ತ ಹೇಳಿದ ಹಾಗೆ ಆಗತ್ತೆ. ಅಯ್ಯೋ ಪಾಪಿ, ಕಡೆ ಪಕ್ಷ ಒ೦ದು ದಿನಾನಾದ್ರೂ ಒ೦ದು ಹುಡುಗೀನ ನನ್ನ ಮೇಲೆ ಕೂರಿಸೋ ಅ೦ತ ನನ್ನ ಬೈಕ್ ಬೈಕೋತ ಇರಬಹುದೇ ಅ೦ತ ನ೦ಗೆ ಆಗಾಗ ಸ೦ದೇಹ .ಅಪರೂಪಕ್ಕೆ ಯಾವುದಾದರು ಹುಡುಗಿ ಬೈಕ್'ನಲ್ಲಿ ಬಂದು ಕೂತರೆ ನನ್ನ ಮನಸ್ಸು ಸ್ವಲ್ಪ ಖುಷಿ'ಇಂದ ನಲಿಯುತ್ತದೆ, but ಅವಳು ನನ್ನ love-mate ಎಂದಿಗೂ ಆಗಿಲ್ಲ. ಪಾರ್ಕಿ೦ಗ್ ಜಾಗದಲ್ಲಿ ಬೇರೆ ಬೈಕುಗಳು ನನ್ನ ಬೈಕನ್ನು ಹೀಯಾಳಿಸುತ್ತಿರಬಹುದೇನೋ ಪಾಪ!!!
ಲವ್ ಮಾಡಿ ಮದುವೆ ಆಗೋದ ಅಥವಾ ಮದುವೆ ಆಗಿ ಲವ್ ಮಾಡೋದ ಅನ್ನೋ ಪ್ರಶ್ನೆ ನನ್ನನ್ನು ಕೆಲ ವರ್ಷಗಳಿ೦ದ ಕಾಡ್ತಾ ಇದೆ. ಆದ್ರೆ ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಮೊದಲೇ ಲವ್ ಮಾಡಿ ಅಲ್ಲಿ ಇಲ್ಲಿ ಸುತ್ತಾಡಿಬಿಟ್ಟರೆ ಮದುವೆ ಆದ ಮೇಲೆ ಬೇಜಾರಾಗುತ್ತೆ ಅಲ್ವ. ಅದು ಅಲ್ಲದೆ ನನ್ನ೦ತ ಸ್ವತ೦ತ್ರಪ್ರಿಯ ಪ್ರಾಣಿಗೆ ಒ೦ಟಿ ಸಲಗದ ತರ ಒಬ್ಬ೦ಟಿಯಾಗಿ ಸುತ್ತೋದೆ ಖುಷಿ. ಆಗಾಗ ORKUT ನಲ್ಲಿ ಅಥವಾ FACEBOOK' ನಲ್ಲಿ ಅವರಿವರ PROFILE ನೊಳಗೆ ಇಣುಕಿ ನೋಡಿ ಅವರಿಗೆ ಒ೦ದು ಸ್ನೇಹದ ಕೋರಿಕೆಯನ್ನು (Friends Request) ಪ್ರೀತಿಯಿ೦ದ ಕಳಿಸ್ತಾ ಇದ್ರೂನು ಇನ್ನೂ ಕೂಡ ಒಂದು ಹುಡುಗಿಯ proposal ಇನ್ನು ಬಂದಿಲ್ಲ. Matrimony websites' ನಲ್ಲಿ register ಮಾಡಿ ಎಷ್ಟೋ ಹುಡುಗಿಯರನ್ನು ನೋಡಿದೆ, ಮನೆಯಲ್ಲಿ, ಅವರಿವರು ನೀಡಿದ ಜಾತಕ ಮನೆಯಲ್ಲಿ ಹರಿದಾಡುತ್ತದೆ. ಆದರು ಅದ್ಯಾಕೋ ಮದುವೆ ಬಗ್ಗೆ ಇನ್ನು ಆ ಒಂದು seriousness ಬಂದಿಲ್ಲ.
ನನ್ನ ಹುಡುಗಿ ಸಿಗುವವರೆಗೂ "ನನ್ನ ಹುಡುಗಿ ಜನಪದ, ಸಾದಾ-ಸೀದಾ ಹಳ್ಳಿ ನಾದ..." ಎಂದೂ ಹಾಡು ಹೇಳ್ತಾ ಕಾಲ ಕಲಿತ ಇದೀನಿ. ನನ್ನ ಹಾಗೆ ಇನ್ನು ಬಹಳ ಹುಡುಗರು ಇದ್ದರೆ ಅಂತ ಗೊತ್ತು, ಅಲ್ವಾ ಸ್ನೇಹಿತರೆ..??

Thursday, May 27, 2010
ತಲೆಹರಟೆ ಪುರಾಣ - ಚಹಾ-ಕಾಪಿಯ ಕಥೆ..!
ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ ?? ಇವತ್ತು ಆಫೀಸ್'ನಲ್ಲಿ ಚಹಾ ಕುಡಿಯುವಾಗ ಹೀಗೊಂದು e-mail ಓದಿದೆ...!!

ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ
ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆಯೇ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ . ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋದಾಗ ರಾಮ
"ಓ ತರುಲತೆಗಳೇ ಓ ಪಶುಪಕ್ಷಿಗಳೇ ..... ಕಂಡಿರಾ ನನ್ನ ಸೀತೆಯನ್ನು??? ................. ಎಂದು ಕೇಳುತ್ತ ಹೋಗುತ್ತಾನಂತೆ . ಅಂದರೆ ಆ ಕಾಲದಲ್ಲಿ ಅವುಗಳಿಗೆ ಮಾತನಾಡುವ ಶಕ್ತಿ ಇತ್ತು . ಗೊತ್ತಾಯ್ತಾ ?? ಆ ಆರ್ಥಸ್ವರ ಕೇಳಿದ ರಾಮ ಅದರ ಬಳಿ ಬಂದು ಏನಾಯಿತು ?? ಎಂದು ಕೇಳಿದಾಗ ಆ ಬೇರು ಹೀಗೆ ಉತ್ತರಿಸಿತು .
ನೋಡು ರಾಮ ನಿನ್ನ ತಮ್ಮ ಲಕ್ಷ್ಮಣ ಮೂರ್ಛೆ ತಪ್ಪಿ ಬಿದ್ದಾಗ ಹನುಮಂತ ತಂದ ಸಂಜೀವಿನಿ ಸೊಪ್ಪು ನಾನು . ನನ್ನನ್ನು ಹಿಂಡಿ ರಸ ತೆಗೆದು ಲಕ್ಷ್ಮಣನನ್ನು ಬದುಕಿಸಿ ಕೆಲಸ ಮುಗಿದ ಮೇಲೆ ಹೀಗೆ ಮರದ ಕೆಳಗೆ ಬಿಸುಟು ಹೋಗಿದ್ದಾರೆ . ರಾಮರಾಜ್ಯದಲ್ಲಿ ಇದು ನ್ಯಾಯವೇ ?? ಎಂದು ಕೇಳಿದಾಗ ರಾಮ ಹೇಳಿದ "ಎಲೈ ಸಂಜೀವಿನಿಯೇ ಹೀಗೆ ಮರದ ಕೆಳಗೆ ಬೀಳುವುದು ನಿನ್ನ ಪೂರ್ವ ಜನ್ಮದ ಕರ್ಮ ಫಲ. ನಾನು ವಿಧಿಗೆ ವಿರುದ್ಧವಾಗಿ ನಿನ್ನನ್ನು ಬದುಕಿಸಲಾರೆ . ಆದರೆ ನನ್ನ ತಮ್ಮನ ಪ್ರಾಣ ಉಳಿಸಿದ್ದಕ್ಕಾಗಿ ಕಲಿಯುಗದಲ್ಲಿ ನಿನಗೆ ಪುನರ್ಜನ್ಮ ಪ್ರಾಪ್ತಿಯಾಗಲೆಂದು ಆಶೀರ್ವದಿಸುತ್ತೇನೆ ಎಂದು ಹರಸಿದ . ಅದರ ಅವತಾರವೇ ನಮ್ಮ ಕಲಿಯುಗದ ಚಹಾ .
ಇನ್ನೂ ಸಂಶಯವೇ ??? ನೋಡಿ ಈಗಲೂ ಅಷ್ಟೇ ..... ರಾತ್ರಿಯಿಡೀ ಮೂರ್ಛೆ ತಪ್ಪಿದವರಂತೆ ನಿದ್ದೆ ಬಿದ್ದಿರುವ ನಾವು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿದು ಕ್ರಿಯಾಶೀಲರಾಗುವುದಿಲ್ಲವೇ ?? ಅದರ ಕರ್ಮಫಲ ಇನ್ನೊ ಬಿಟ್ಟಿಲ್ಲವೋ ಎಂಬಂತೆ ಚಹಾ ಮಾಡಿದ ಬಳಿಕ ಅದರ ಸೊಪ್ಪನ್ನು ಮರದ ಬೇರಿನಡಿ ಬಿಸಾಡುವುದಿಲ್ಲವೇ ?? ಅಷ್ಟೇ ಅಲ್ಲ ಸಂಜೀವಿನಿಯನ್ನು ತಂದವನು ಹನುಮಂತ ಯಾವ ಮೂಲಿಕೆ ಎಂದು ತಿಳಿಯದಿದ್ದರೂ "ದೂರ ದೃಷ್ಟಿಯಿಂದ " ಇಡೀ ಪರ್ವತ ಹೊತ್ತು ತಂದ ಹಾಗೆ ಭಾರತಕ್ಕೆ ಚಹಾ ತಂದವರು ಜೇಮ್ ಶೆಡ್ ಜೀ ಟಾಟಾ ಅವರು ಫಾರಸೀ ಆಗಿದ್ದರು. ನೋಡಿದಿರಾ ?? FAR = ದೂರ SEE = ದೃಷ್ಟಿ . ಹೀಗೆ ಇವರು ಕೂಡ ದೂರ ದೃಷ್ಟಿ ಯಿಂದಲೇ ಚಹಾವನ್ನು ಭಾರತಕ್ಕೆ ತಂದರು . ಅಲ್ಲದೆ ರಾಮನು ಕಾಡಿನಲ್ಲಿ ಈ ಸೊಪ್ಪಿಗೆ ವರದಾನ ಕೊಟ್ಟಿದ್ದರಿಂದ ಅವರು ತಂದ ಚಹಾಕ್ಕೆ "ಕಾನನ ದೇವನ ಚಹಾ " ( Kannan Devan Tea ) ಅಂದರೆ ಕಾಡಿಗೆ ಹೋಗಿ ಬಂದ ದೇವರನ್ನು ಬದುಕಿಸಿದ ಸೊಪ್ಪು ಎಂಬರ್ಥದಿಂದ ಈ ಹೆಸರು ಕೊಟ್ಟರು.
ಇದು ಚಹಾದ ಪುರಾಣವಾದರೆ ಕಾಪಿ ಇದಕ್ಕೂ ಹಳೆಯದು . ಸಮುದ್ರಮಥನ ಕಾಲದಲ್ಲಿ ಸುರಾಸುರ ಯಕ್ಷ ಗಂಧರ್ವರೆಲ್ಲರೂ ಸೇರಿ ಸಮುದ್ರವನ್ನು ಮಥಿಸಿದರು. ಅದರಲ್ಲಿ ಹುಟ್ಟಿದ ಪದಾರ್ಥವನ್ನೆಲ್ಲ ಪರಸ್ಪರ ಹಂಚಿಕೊಂಡರು. ನಡುವೆ "ಕಾಲಕೂಟ" ವೆಂಬ ಖತರ್ನಾಕ್ ವಿಷ ಬರಲು ಈಶ್ವರ ಅದನ್ನು bottoms up ಮಾಡಿ ಕುಡಿದ. ನಂತರ ಪೀಯುಷ ( ಅಮೃತ ) ಹುಟ್ಟಿಕೊಂಡಿತು . ಅಸುರರಿಗೆ ಮೊಹಿನಿಯಿಂದ ಮಂಕುಬೂದಿ ಎರಚಿ ಇನ್ನೇನು ಪೀಯುಷವನ್ನು ಸ್ವರ್ಗಲೋಕಕ್ಕೆ ತೆಗೆದುಕೊಂಡು ಹೋಗುವಾಗ "Hello Excuse me Boss " ಎಂಬ ಸ್ವರ ಕೇಳಿಸಿತು ತಿರುಗಿ ನೋಡಿದರೆ ಮಾನವರೆಲ್ಲರೂ ಗುಂಪು ಗುಂಪಾಗಿ ಬರುತ್ತಿದ್ದಾರೆ. ಏನಾಯ್ತು ಎಂದು ಕೇಳಿದರೆ ಏನು ?? ನಮ್ಮ ಭೂಮಿಗೆ ಬಂದು ಸಮುದ್ರ ಮಥಿಸಿ ಸಿಕ್ಕಿದ್ದನ್ನೆಲೆ ದೋಚಿ ಹೋಗ್ತಾ ಇದ್ದೀರಾ ?? ನಮ್ಮ ಭೂಮಿ ಬಳಸಿದ್ದರ ಬಾಡಿಗೆ ಯಾರು ಕೊಡ್ತಾರೆ ?? ನಮಗೂ ಅಮೃತದಲ್ಲಿ ಪಾಲು ಬೇಕು ಎಂದು ಎಲ್ಲರೂ ಜಗಳ ಶುರು ಮಾಡಿದರು . ಆಗ ದೇವರು ಓಹೋ .... ಅಮೃತ ಬೇಕಾ ?? ಕಾಲಕೂಟ ಕೂಡ ಅಲ್ಲಿಂದಾನೆ ಬಂದಿದ್ದು ಅದನ್ನೂ ನೀವು ತೆಗೆದುಕೊಳ್ಳಬೇಕು ಎಂದು ವಾದ ಮಾಡಿದರು . ಮನುಷ್ಯರು ಕಾಲಕೂಟದಿಂದ ಹೆದರಿಕೊಂಡರೂ ಪಾಲು ಸಿಗದೇ ಹೋಗಲು ಬಿಡುವುದಿಲ್ಲ ಎಂಬ ಪಟ್ಟು ಹಿಡಿದರು .
ಆಮೇಲೆ ದೇವಗುರು ಬೃಹಸ್ಪತಿ , ದೈತ್ಯಗುರು ಶುಕ್ರಾಚಾರ್ಯ ಮತ್ತು ಮಾನವರ ಗುರುಗಳಾಗಿದ್ದ ಗಣಪಯ್ಯ ಮಾಸ್ಟರು ಕುಳಿತು ಒಂದು ಸಂಧಾನಕ್ಕೆ ಬಂದು " ಕಾಲಕೂಟದಿಂದ " "ಕಾ" ತೆಗೆದು "ಪೀಯೂಷದಿಂದ" "ಪೀ " ತೆಗೆದು "ಕಾಪಿ " ಮಾಡಿ ಮಾನವರಿಗೆ ಕೊಟ್ಟರು . ಈ ಸಂಧಾನದಲ್ಲಿ ಬೃಹಸ್ಪತಿಗಳು ಸ್ವಲ್ಪ ಮಾನವರ Favour ನಲ್ಲಿ ಮಾತನಾಡಿದ್ದರಿಂದ ಅವರ ಸ್ಮರಣಾರ್ಥ ಅವರ ಹೆಸರಿನ ಮೊದಲ ಮೂರು ಅಕ್ಷರ "BRU" ಎಂದು ಇದಕ್ಕೆ ನಾಮಕರಣ ಮಾಡಲಾಯಿತು . ಇದನ್ನು ಕುಡಿದು ಮನುಷ್ಯರಿಗೆ ನಶೆ ಏರಿದ್ದರಿಂದ ಅವರು ಅದನ್ನು "ನಶಾಕಾಪಿ " ಎಂದರು ಅದೇ ಕಲಿಯುಗದ NESCAFE ಆಯಿತು.ಹೀಗೆ ಸುರ - ಅಸುರರ ಸಹಕಾರದಿಂದ ಕಾಪಿ ಭೂಮಿಗೆ ಬಂದಿದ್ದರಿಂದ ಇಂದಿಗೂ ಅದನ್ನು ಕುಡಿಯುವಾಗ ನಾವು "ಸುರ್ರ್ ರ್ರ್ ರ್ರ್ " ಎಂದು ಶಬ್ದ ಮಾಡುತ್ತಾ ಅವರನ್ನು ನೆನೆಯುತ್ತೇವೆ
ಉಳಿದ ಪುರಾಣಗಳಲ್ಲಿ ಪೆಪ್ಸಿ ಕೋಲಾ ಗಳ ಉಲ್ಲೇಖ ಇದೆಯೋ ಎಂದು ಹುಡುಕುತ್ತಿದ್ದೇನೆ . ನಿಮಗೆಲ್ಲಾದರೂ ಏನಾದರೂ ಮಾಹಿತಿ ಸಿಕ್ಕಿದರೆ ತಿಳಿಸಿರಿ .
-------------------------------ಇತಿ ಶ್ರೀ Cofee / Tea ಪುರಾಣಂ ಸಂಪೂರ್ಣಂ ---------------------------

Subscribe to:
Posts (Atom)